ಪಾಕಿಸ್ತಾನದ ಹೊರವಲಯದ ವಾಯುವ್ಯ ಭಾಗದ ಪೇಶಾವರದಲ್ಲಿ ಶನಿವಾರ ಸಂಭವಿಸಿದ ಪ್ರಬಲ ಬಾಂಬ್ ಸ್ಫೋಟದಲ್ಲಿ 10ಮಂದಿ ಬಲಿಯಾಗಿದ್ದು, ಹಲವಾರು ಜನರು ಗಾಯಗೊಂಡಿರುವ ಘಟನೆ ನಡೆದಿದೆ.
ಪೇಶಾವರದ ಬಾಡಬೆಹರ್ ಪ್ರದೇಶದ ಪೊಲೀಸ್ ಚೆಕ್ ಪೋಸ್ಟ್ ಬಳಿ ಈ ಸ್ಫೋಟ ಸಂಭವಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೇ ಸ್ಫೋಟದಲ್ಲಿ ಸ್ಥಳೀಯ ಎರಡು ಮಾರುಕಟ್ಟೆ ಧ್ವಂಸಗೊಂಡಿದ್ದು,15ವಾಹನಗಳು ಜಖಂಗೊಂಡಿರುವುದಾಗಿ ಹೇಳಿದ್ದಾರೆ.
ಈ ಬಾಂಬ್ ದಾಳಿಯಲ್ಲಿ ಅಂದಾಜು 10ಮಂದಿ ಸಾವನ್ನಪ್ಪಿರುವುದಾಗಿ ಟಿವಿ ಚಾನೆಲ್‌ವೊಂದರ ವರದಿ ತಿಳಿಸಿದೆ. ಬಾಂಬ್ ಸ್ಫೋಟಗೊಂಡ ಪರಿಣಾಮ ದೇಹಗಳು 50ಮೀಟರ್ ದೂರಕ್ಕೆ ನೆಗೆದು ಬಿದ್ದಿದ್ದು,ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆದರೆ ಬಾಂಬ್ ಸ್ಫೋಟದ ಹೊಣೆಯನ್ನು ಈವರೆಗೂ ಯಾವುದೇ ಉಗ್ರಗಾಮಿ ಸಂಘಟನೆಗಳು ಹೊತ್ತುಕೊಂಡಿಲ್ಲ. ಪಾಕಿಸ್ತಾನದ ಅಧ್ಯಕ್ಷೀಯ ಚುನಾವಣೆಯ ಮತದಾನ ನಡೆಯುವ ದಿನದಂದೇ ಈ ಸ್ಫೋಟ ಸಂಭವಿಸಿದೆ.
|