ಇಸ್ಲಾಮಾಬಾದ್: ಪಾಕ್‌ನಲ್ಲಿ ಶನಿವಾರ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಪಿಪಿಪಿಯ ಸಹ ವರಿಷ್ಠ ಅಸಿಫ್ ಅಲಿ ಜರ್ದಾರಿಯವರು ಭರ್ಜರಿ ಬಹುಮತದೊಂದಿಗೆ ಗೆಲುವು ಸಾಧಿಸಿದ್ದಾರೆ.
ನ್ಯಾಷನಲ್ ಅಸೆಂಬ್ಲಿಯ 426 ಮತದಲ್ಲಿ 281 ಮತಗಳನ್ನು ತಮ್ಮ ಬಗಲಿಗೆ ಹಾಕಿಕೊಂಡ ಅಸಿಫ್ ಅಲಿ ಜರ್ದಾರಿಯವರು ಗೆಲುವಿನ ನಗು ಬೀರುವ ಮೂಲಕ ಪಾಕ್ ಅಧ್ಯಕ್ಷ ಗಾದಿಗೆ ಏರುವ ಅವರ ಕನಸಿನ ಹಾದಿ ಸುಗಮವಾದಂತಾಗಿದೆ.
ನ್ಯಾಷನಲ್ ಅಸೆಂಬ್ಲಿಯಲ್ಲಿ ಒಟ್ಟು 426 ಮತಗಳಿದ್ದು, ಇಂದು ಬೆಳಿಗ್ಗೆ ಮತದಾನ ಆರಂಭಗೊಂಡಿದ್ದು,ಮಧ್ನಾಹ್ನ 3ಗಂಟೆಗೆ ಮುಕ್ತಾಯಗೊಂಡಿತ್ತು. ಬಳಿಕ ನಡೆದ ಮತಎಣಿಕೆಯಲ್ಲಿ ಪಿಪಿಪಿಯ ಜರ್ದಾರಿಯವರು ಬಹುಮತದೊಂದಿಗೆ ಆಯ್ಕೆಯಾಗಿರುವುದಾಗಿ ಘೋಷಿಸಲಾಯಿತು. ಅಲ್ಲದೇ ಇದರಲ್ಲಿ 10ಮತಗಳು ಅಸಿಂಧುವಾಗಿರುವುದಾಗಿ ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.
ಇಂದು ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಜರ್ದಾರಿಯವರಿಗೆ ಬಲೂಚಿಸ್ತಾನ್ ಮತ್ತು ಸಿಂಧ ಪ್ರಾಂತ್ಯದಿಂದ ಅತ್ಯಧಿಕ ಮತಗಳು ಬಿದ್ದಿದ್ದವು. ಬಲೂಚಿಸ್ತಾನ ಪ್ರಾಂತ್ಯದ 65ಸದಸ್ಯರಲ್ಲಿ 59 ಸದಸ್ಯರು ಜರ್ದಾರಿ ಪರ ಮತ ಚಲಾಯಿಸಿದ್ದು, ಸಿಂಧ್ಯ ಅಸೆಂಬ್ಲಿ ಪ್ರಾಂತ್ಯದ 163 ಸದಸ್ಯರಲ್ಲಿ 162 ಮಂದಿ ಮತ ಚಲಾಯಿಸಿರುವುದಾಗಿ ಪಾಕ್ ಡಾನ್ ನ್ಯೂಸ್ ವರದಿ ತಿಳಿಸಿದೆ.
|