ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಅಧ್ಯಕ್ಷಗಾದಿ ಮತ್ತು ಜರ್ದಾರಿಯ 'ಭ್ರಷ್ಟ' ಹಾದಿ...
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಧ್ಯಕ್ಷಗಾದಿ ಮತ್ತು ಜರ್ದಾರಿಯ 'ಭ್ರಷ್ಟ' ಹಾದಿ...
ಪಾಕಿಸ್ತಾನದ ನೂತನ ಅಧ್ಯಕ್ಷರಾಗಿ ಪಿಪಿಪಿಯ ವರಿಷ್ಠ ಅಸಿಫ್ ಅಲಿ ಜರ್ದಾರಿ ಭರ್ಜರಿ ಗೆಲುವು ಸಾಧಿಸುವುದರೊಂದಿಗೆ ದೇಶದ ಉನ್ನತ ಹುದ್ದೆಯನ್ನು ಅಲಂಕರಿಸಿದ್ದಾರೆ.

ಪತ್ನಿ,ಮಾಜಿ ಪ್ರಧಾನಿ ಬೇನಜೀರ್ ಭುಟ್ಟೋ ಅವರ ಸಾವಿನ ಬಳಿಕ ಪಿಪಿಪಿ ಪಾಕ್‌ನಾದ್ಯಂತ ಜನಮನ್ನಣೆ ಗಳಿಸುವ ಮೂಲಕ ಆಡಳಿತ ಚುಕ್ಕಾಣಿ ಹಿಡಿಯುವಲ್ಲಿಯೂ ಪ್ರಮುಖ ಪಾತ್ರವಹಿಸಿದ್ದಲ್ಲದೇ, ಭ್ರಷ್ಟಾಚಾರದಿಂದ ಮಿ.10ಪರ್ಸೆಂಟ್ ಎಂಬ ಕುಖ್ಯಾತಿಗೆ ಒಳಗಾಗಿದ್ದ ಜರ್ದಾರಿಗೆ ಶುಕ್ರ ದೆಸೆ ಆರಂಭವಾಗಿತ್ತು.

1990ರಲ್ಲಿ ಮೊತ್ತ ಮೊದಲ ಬಾರಿಗೆ ಆಡಳಿತರೂಢ ಬೇಜಜೀರ್ ಸರ್ಕಾರವನ್ನು ಪದಚ್ಯುತಗೊಳಿಸಿದ ಸಂದರ್ಭದಲ್ಲಿ, ಪತಿ ಜರ್ದಾರಿಯನ್ನು ಬ್ಯಾಂಕ್ ವಂಚನೆ ಮತ್ತು ಕೊಲೆ ಆರೋಪದ ಮೇಲೆ ಜೈಲಿಗೆ ಅಟ್ಟಲಾಗಿತ್ತು.ಮೂರು ವರ್ಷದ ಬಳಿಕ ಜರ್ದಾರಿಯನ್ನು ಬಿಡುಗಡೆಗೊಳಿಸಲಾಗಿತ್ತು.

ಆದರೆ ಬ್ರಹ್ಮಾಂಡ ಭ್ರಷ್ಟಾಚಾರ ಎಸಗಿದ್ದ ಹಾಗೂ ಬೇಜಜೀರ್ ಸಹೋದರ ಮುರ್ತಾಜ್ ಭುಟ್ಟೋ ಕೊಲೆ ಆರೋಪದ ಮೇಲೆ ಜರ್ದಾರಿಯನ್ನು ಮತ್ತೆ 1996 ರಲ್ಲಿ ಸೆರೆಮನೆಗೆ ತಳ್ಳಲಾಯಿತು. ನಂತರ 2004ರಲ್ಲಿ ಬಂಧಮುಕ್ತಗೊಳಿಸಲಾಯಿತು. ಇವೆಲ್ಲಾ ಬಿಕ್ಕಟ್ಟಿನ ನಂತರ ಜರ್ದಾರಿ ತನ್ನ ಸಂಸಾರದೊಂದಿಗೆ ಪಾಕಿಸ್ತಾನದಿಂದ ಯುಎಇ ವಲಸೆ ಹೋಗಿ ನೆಲೆಸಿದ್ದ.

ಬೇನಜೀರ್ ಆಡಳಿತಾವಧಿಯಲ್ಲಿ,ಸ್ವಿಟ್ಜ್‌ರ್‌ಲ್ಯಾಂಡ್‌ನಲ್ಲಿ ಎಸಗಿದ ಭ್ರಷ್ಟಾಚಾರ ಸೇರಿದಂತೆ ಜರ್ದಾರಿ ವಿರುದ್ಧ ಆರೋಪಗಳ ಪಟ್ಟಿಯೇ ದಾಖಲಾಗಿತ್ತು. ಆದರೆ ಪಾಕ್‌ನ ಅಧ್ಯಕ್ಷರಾಗಿದ್ದ ಮುಷರಫ್ ಜೊತೆ ಕೈಜೋಡಿಸುವ ಮೂಲಕ ಹಲವಾರು ಆರೋಪಗಳಿಂದ ಮುಕ್ತರಾದ ಜರ್ದಾರಿ ಶಿಕ್ಷೆಯಿಂದ ಪಾರಾಗುವ ಮೂಲಕ ರಾಜಕೀಯದಲ್ಲಿ ಇದೀಗ ಭದ್ರ ನೆಲೆ ಕಂಡುಕೊಂಡಿದ್ದಾರೆ.

2008ರ ಫೆಬ್ರುವರಿಯಲ್ಲಿ ನಡೆದ ಚುನಾವಣೆಯಲ್ಲಿ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಜತೆ ಕೈಜೋಡಿಸುವ ಮೂಲಕ ಪಾಕ್ ರಾಜಕಾರಣದಲ್ಲಿ ಭ್ರಷ್ಟ ವ್ಯಕ್ತಿಯೊಬ್ಬ ಅಧ್ಯಕ್ಷ ಹುದ್ದೆಯನ್ನು ಅಲಂಕರಿಸಿದಂತಾಗಿದೆ.
ಮತ್ತಷ್ಟು
ಅಣುಬಂಧಕ್ಕೆ ಎನ್ಎಸ್‌ಜಿ 'ಗ್ರೀನ್ ಸಿಗ್ನಲ್'
ಪಾಕ್ ಅಧ್ಯಕ್ಷ ಚುನಾವಣೆ-ಜರ್ದಾರಿ ಜಯಭೇರಿ
ಪಾಕ್: ಬಾಂಬ್ ಸ್ಫೋಟಕ್ಕೆ 10 ಬಲಿ
93 ಮುಂಬೈ ಬ್ಲಾಸ್ಟ್ - ನೇಪಾಳದಲ್ಲಿ ಇಬ್ಬರ ಸೆರೆ
ಪಾಕ್ ವಿರುದ್ಧ ಒಬಾಮಾ ತೀವ್ರ ವಾಗ್ದಾಳಿ
ಪಾಕ್ ಅಧ್ಯಕ್ಷ ಚುನಾವಣೆ:ಮತದಾನ ಆರಂಭ