ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ವಿಯೆನ್ನಾದಲ್ಲಿ ಭಾರತದ ಸಾಧನೆ: ರೈಸ್ ಶ್ಲಾಘನೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಿಯೆನ್ನಾದಲ್ಲಿ ಭಾರತದ ಸಾಧನೆ: ರೈಸ್ ಶ್ಲಾಘನೆ
ಪರಮಾಣು ಪೂರೈಕಾ ಸಮೂಹದ 45 ಸದಸ್ಯ ರಾಷ್ಟ್ರಗಳಿಂದ ಭಾರತವು ವಿನಾಯತಿ ಪಡೆದುಕೊಂಡಿರುವುದು ಭಾರತ ಮತ್ತು ಅಮೆರಿಕ ಸಂಬಂಧದಲ್ಲಿನ ಬೃಹತ್ ಸಾಧನೆ ಎಂದು ಬಣ್ಣಿಸಿರುವ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಕಾಂಡೋಲೀಸಾ ರೈಸ್, ವಿಯೆನ್ನಾದಲ್ಲಿ ಭಾರತೀಯ ಸರಕಾರದ ಪಾತ್ರವನ್ನು ಶ್ಲಾಘಿಸಿದ್ದಾರೆ.

ಭಾರತವು ವಿಯೆನ್ನಾದಲ್ಲಿ ಸಾಕಷ್ಟು ನಾಯಕತ್ವ ಪ್ರತಿಭೆಯನ್ನು ತೋರ್ಪಡಿಸಿದ್ದು, ಪ್ರತಿಯೊಬ್ಬರು ಪ್ರತಿಯೊಬ್ಬರ ಆತಂಕವನ್ನು ಗಂಭೀರವಾಗಿ ಪರಿಗಣಿಸಿ, ಅದರ, ನಿರ್ಮೂಲನೆಗೆ ಪರಿಹಾರ ಕಂಡುಕೊಂಡಿದ್ದಾರೆ ಎಂದು ರೈಸ್ ಹೇಳಿದ್ದಾರೆ.

ಎನ್ಎಸ್‌ಜಿ ಮಾತುಕತೆಯಲ್ಲಿನ ಫಲಿತಾಂಶದ ವರದಿಗಳಿಂದ ಅತ್ಯಂತ ಸಂಭ್ರಮಿತಗೊಂಡಿದ್ದೇನೆ. ಇದು ಭಾರತ ಮತ್ತು ಅಮೆರಿಕ ಅಣು ಒಪ್ಪಂದ ಅನುಷ್ಠಾನ ಪ್ರಕ್ರಿಯೆಯಲ್ಲಿನ ಪ್ರಮುಖ ಬೆಳವಣಿಗೆಯಾಗಿದೆ. ಇದರಲ್ಲಿ ಭಾರತದ ಪಾತ್ರವು ಪ್ರಮುಖವಾಗಿದೆ ಎಂದು ರೈಸ್ ಅಭಿಪ್ರಾಯಪಟ್ಟಿದ್ದಾರೆ.

ಎನ್ಎಸ್‌ಜಿ ಮಾತುಕತೆ ಯಶಸ್ವಿಯಾಗಲು ಭಾರತೀಯ ಸರಕಾರದ ಸಹಕಾರವು ಸಾಕಷ್ಟಿದೆ. ಇದರೊಂದಿಗೆ, ಅಮೆರಿಕದೊಂದಿಗೆ ಕಾರ್ಯನಿರ್ವಹಿಸಿದ ಹಲವು ನಿಯೋಗಗಳ ಪಾತ್ರವೂ ಇದೆ. ಒಟ್ಟಾಗಿ, ಪರಮಾಣು ನಿಶ್ಯಸ್ತ್ರೀಕರಣ ಚೌಕಟ್ಟಿನಲ್ಲಿ ಮುಂದುವರಿಯುವಲ್ಲಿ ಇದೊಂದು ಮಹತ್ವದ ಬೆಳವಣಿಗೆಯಾಗಿದೆ ಎಂದು ರೈಸ್ ಹೇಳಿದ್ದಾರೆ.
ಮತ್ತಷ್ಟು
ಪೇಶಾವರ ಬಾಂಬ್ ದಾಳಿಗೆ 30 ಬಲಿ
ಅಣುಒಪ್ಪಂದ ಅಂಗೀಕಾರಕ್ಕೆ ರೈಸ್ ಒತ್ತಾಯ
ಅಧ್ಯಕ್ಷಗಾದಿ ಮತ್ತು ಜರ್ದಾರಿಯ 'ಭ್ರಷ್ಟ' ಹಾದಿ...
ಅಣುಬಂಧಕ್ಕೆ ಎನ್ಎಸ್‌ಜಿ 'ಗ್ರೀನ್ ಸಿಗ್ನಲ್'
ಪಾಕ್ ಅಧ್ಯಕ್ಷ ಚುನಾವಣೆ-ಜರ್ದಾರಿ ಜಯಭೇರಿ
ಪಾಕ್: ಬಾಂಬ್ ಸ್ಫೋಟಕ್ಕೆ 10 ಬಲಿ