ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಭಾರತಕ್ಕೆ ಪರಮಾಣು ಪೂರೈಕೆಯಿಲ್ಲ: ಆಸ್ಟ್ರೇಲಿಯಾ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಾರತಕ್ಕೆ ಪರಮಾಣು ಪೂರೈಕೆಯಿಲ್ಲ: ಆಸ್ಟ್ರೇಲಿಯಾ
ಪರಮಾಣು ವ್ಯಾಪಾರದ ಕುರಿತಾಗಿ ಭಾರತದ ಮೇಲಿನ 34 ವರ್ಷಗಳ ನಿರ್ಬಂಧವನ್ನು ಕೊನೆಗೊಳಿಸುವ ಎನ್ಎಸ್‌ಜಿಯ 45 ರಾಷ್ಟ್ರಗಳ ನಿರ್ಧಾರವನ್ನು ಆಸ್ಟ್ರೇಲಿಯಾವು ಸ್ವಾಗತಿಸಿರುವುದರ ಹೊರತಾಗಿಯೂ, ಅಣ್ವಸ್ತ್ರ ಪ್ರಸರಣ ನಿಷೇಧ ಒಪ್ಪಂದಕ್ಕೆ ಸಹಿ ಹಾಕದಿದ್ದರೆ ತಾನು ಭಾರತಕ್ಕೆ ಪರಮಾಣು ಪೂರೈಕೆ ಮಾಡುವುದಿಲ್ಲ ಎಂದು ಆಸ್ಟ್ರೇಲಿಯಾ ಹೇಳಿದೆ.

ಅಣ್ವಸ್ತ್ರ ಪ್ರಸರಣ ನಿಷೇಧ ಒಪ್ಪಂದಕ್ಕೆ ಸಹಿ ಹಾಕಿರುವ ರಾಷ್ಟ್ರಗಳಿಗೆ ಮಾತ್ರವೇ ಪರಮಾಣು ಪೂರೈಸಲು ಆಸ್ಟ್ರೇಲಿಯಾವು ಬದ್ಧವಾಗಿದ್ದು, ಭಾರತವು ಎನ್‌ಪಿಟಿ‌ಗೆ ಸಹಿ ಹಾಕದೇ ಇರುವುದರಿಂದ ಭಾರತಕ್ಕೆ ಪರಮಾಣು ಪೂರೈಕೆ ಮಾಡುವುದಿಲ್ಲ ಎಂದು ಆಸ್ಟ್ರೇಲಿಯಾದ ವ್ಯಾಪಾರ ಸಚಿವ ಸೈಮನ್ ಕ್ರೀನ್ ಅವರನ್ನು ಉಲ್ಲೇಖಿಸಿ ಆಸ್ಟ್ರೇಲಿಯನ್ ಪತ್ರಿಕೆಗಳು ವರದಿ ಮಾಡಿವೆ.

ಎನ್ಎಸ್‌ಜಿ ನಿರ್ಧಾರವು ಜಾಗತಿಕ ಅಣು ಸ್ಥಾವರ ಭದ್ರತೆಯನ್ನು ಬಲಪಡಿಸುವ ಸಾಧ್ಯತೆ ಇರುವುದರಿಂದ ಆಸ್ಟ್ರೇಲಿಯಾವು ಇದನ್ನು ಸ್ವಾಗತಿಸಿದೆ ಎಂದು ಕ್ರೀನ್ ತಿಳಿಸಿದ್ದಾರೆ.

ಈ ನಡುವೆ, ಲೇಬರ್ ನೀತಿಯು ಬೂಟಾಟಿಕೆಯದ್ದಾಗಿದೆ ಎಂಬುದಾಗಿ ಟೀಕಿಸಿರುವ ಆಸ್ಟ್ರೇಲಿಯಾ ಪ್ರತಿಪಕ್ಷಗಳು, ವಿದೇಶಾಂಗ ಸಚಿವರು ತಮ್ಮ ಮುಂದಿನ ಭಾರತ ಭೇಟಿಯನ್ನು ನೂತನ ಯುರೇನಿಯಂ ನೀತಿ ಘೋಷಣೆಗಾಗಿ ವಿನಿಯೋಗಿಸಬೇಕು ಎಂದು ಒತ್ತಾಯಿಸಿದೆ.

ವಿದೇಶಾಂಗ ಸಚಿವ ಸ್ಟೀಫನ್ ಸ್ಮಿತ್ ತಮ್ಮ ಮುಂದಿನ ಭಾರತ ಭೇಟಿಯನ್ನು ನೂತನ ಯುರೇನಿಯಂ ರಫ್ತು ನೀತಿ ಘೋಷಣೆಗೆ ಬಳಸಿಕೊಳ್ಳಬೇಕು ಎಂದು ವಿರೋಧ ಪಕ್ಷದ ವಕ್ತಾರ ಆಂಡ್ರ್ಯೂ ರಾಬ್ ತಿಳಿಸಿದ್ದಾರೆ.

ವಿಯೆನ್ನಾದ ನಿರ್ಧಾರಗಳು ಅಣು ಪ್ರಸರಣ ತಡೆ ಪ್ರಯತ್ನವನ್ನು ಕಡೆಗಣಿಸುತ್ತದೆ. ಆದರೂ, ಹಸಿರುಮನೆ ಅನಿಲ ಮುಕ್ತ ವಿದ್ಯುತ್ ಉತ್ಪಾದಿಸುವ ನಿಟ್ಟಿನಲ್ಲಿ ಆಸ್ಟ್ರೇಲಿಯಾವು ಭಾರತಕ್ಕೆ ಸಹಕಾರ ನೀಡಬೇಕು ಎಂದು ರಾಬ್ ಹೇಳಿದ್ದಾರೆ.
ಮತ್ತಷ್ಟು
ತಾಲಿಬಾನ್‌ಗೆ ಲಾಭದಾಯಕವಾಗಿರುವ ಅಪಹರಣ ವೃತ್ತಿ: ವರದಿ
ಜರ್ದಾರಿ ಮುಂದಿನವಾರ ಚೀನಾ ಭೇಟಿ
ವಿಯೆನ್ನಾದಲ್ಲಿ ಭಾರತದ ಸಾಧನೆ: ರೈಸ್ ಶ್ಲಾಘನೆ
ಪೇಶಾವರ ಬಾಂಬ್ ದಾಳಿಗೆ 30 ಬಲಿ
ಅಣುಒಪ್ಪಂದ ಅಂಗೀಕಾರಕ್ಕೆ ರೈಸ್ ಒತ್ತಾಯ
ಅಧ್ಯಕ್ಷಗಾದಿ ಮತ್ತು ಜರ್ದಾರಿಯ 'ಭ್ರಷ್ಟ' ಹಾದಿ...