ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಪ್ರಜಾಪ್ರಭುತ್ವ ವರ್ಧನೆಗೆ ಬೆಂಬಲ: ಶರೀಫ್ ಭರವಸೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪ್ರಜಾಪ್ರಭುತ್ವ ವರ್ಧನೆಗೆ ಬೆಂಬಲ: ಶರೀಫ್ ಭರವಸೆ
ಪಾಕಿಸ್ತಾನದಲ್ಲಿ ಪ್ರಜಾಪ್ರಭುತ್ವವನ್ನು ಬಲಗೊಳಿಸುವ ನಿಟ್ಟಿನಲ್ಲಿ ಪಿಪಿಪಿ ನೇತೃತ್ವದ ಸರಕಾರಕ್ಕೆ ಮತ್ತು ಪಾಕಿಸ್ತಾನ ನೂತನ ಚುನಾಯಿತ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಪಿಎಂಎಲ್-ಎನ್ ಪಕ್ಷದ ಮುಖ್ಯಸ್ಥ ನವಾಜ್ ಶರೀಫ್ ಭರವಸೆ ನೀಡಿದ್ದಾರೆ.

ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಜರ್ದಾರಿ ಅವರಿಗೆ ದೂರವಾಣಿಯ ಮೂಲಕ ಅಭಿನಂದನೆ ಸಲ್ಲಿಸಿರುವ ಶರೀಫ್, ಸಮ್ಮಿಶ್ರ ಸರಕಾರಕ್ಕೆ ಮರಳುವ ಸಾಧ್ಯತೆಯನ್ನು ನಿರಾಕರಿಸಿದ್ದು, ವಿರೋಧ ಪಕ್ಷದಲ್ಲಿದ್ದುಕೊಂಡೇ ಉತ್ತಮ ಪಾತ್ರ ನಿರ್ವಹಿಸುವುದಾಗಿ ಹೇಳಿದ್ದಾರೆ.

ನ್ಯಾಯಾಧೀಶರ ಪದಚ್ಯುತಿ ಸಂಬಂಧ ಜರ್ದಾರಿ ಕೊಟ್ಟ ಮಾತು ಮುರಿಯುತ್ತಿದ್ದಾರೆ ಎಂದು ಆರೋಪಿಸಿ, ಕಳೆದ ತಿಂಗಳು ಪಿಎಂಎಲ್ ಪಕ್ಷವು ಸಮ್ಮಿಶ್ರ ಸರಕಾರದಿಂದ ಹೊರನಡೆದಿತ್ತು.

ಜರ್ದಾರಿ ಮತ್ತು ಶರೀಫ್ ನಡುವಿನ ದೂರವಾಣಿ ಸಂಭಾಷಣೆಯನ್ನು ಸಭ್ಯತೆಯ ಕರೆ ಎಂದು ಬಣ್ಣಿಸಿರುವ ಪಿಎಂಎಲ್-ಎನ್‌ನ ಹಿರಿಯ ನಾಯಕ ಆಹ್ಸಾನ್ ಇಕ್ಬಾಲ್, ಸಂಭಾಷಣೆಯ ವೇಳೆ ವಿಸ್ತೃತವಾಗಿ ರಾಜಕೀಯ ಚರ್ಚೆ ನಡೆಸಿಲ್ಲ ಎಂದು ಹೇಳಿದ್ದಾರೆ.

ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಜರ್ದಾರಿ ಮಂಗಳವಾರ ಪ್ರಮಾಣವಚನ ಸ್ವೀಕರಿಸಲಿದ್ದು, ಈ ಸಮಾರಂಭದಲ್ಲಿ ಶರೀಫ್ ಅವರು ಖಾಸಗಿ ಕಾರಣಗಳಿಂದ ಹಾಜರಾಗುತ್ತಿಲ್ಲ.
ಮತ್ತಷ್ಟು
ಭಾರತಕ್ಕೆ ಪರಮಾಣು ಪೂರೈಕೆಯಿಲ್ಲ: ಆಸ್ಟ್ರೇಲಿಯಾ
ತಾಲಿಬಾನ್‌ಗೆ ಲಾಭದಾಯಕವಾಗಿರುವ ಅಪಹರಣ ವೃತ್ತಿ: ವರದಿ
ಜರ್ದಾರಿ ಮುಂದಿನವಾರ ಚೀನಾ ಭೇಟಿ
ವಿಯೆನ್ನಾದಲ್ಲಿ ಭಾರತದ ಸಾಧನೆ: ರೈಸ್ ಶ್ಲಾಘನೆ
ಪೇಶಾವರ ಬಾಂಬ್ ದಾಳಿಗೆ 30 ಬಲಿ
ಅಣುಒಪ್ಪಂದ ಅಂಗೀಕಾರಕ್ಕೆ ರೈಸ್ ಒತ್ತಾಯ