ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಅಧ್ಯಕ್ಷರಾಗಿ ಜರ್ದಾರಿ ಪ್ರಮಾಣ ವಚನ ಸ್ವೀಕಾರ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಧ್ಯಕ್ಷರಾಗಿ ಜರ್ದಾರಿ ಪ್ರಮಾಣ ವಚನ ಸ್ವೀಕಾರ
ND
ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಪಕ್ಷದ ಸಹ-ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಪಾಕಿಸ್ತಾನದ 14ನೆ ಅಧ್ಯಕ್ಷರಾಗಿ ಮಂಗಳವಾರ ಪ್ರಮಾಣವಚನ ಸ್ವೀಕರಿಸಿದರು. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಅಬ್ದುಲ್ ಹಮೀದ್ ಡೋಗರ್ ಜರ್ದಾರಿಗೆ ಪ್ರಮಾಣವಚನ ಬೋಧಿಸಿದರು.

ಹಲವಾರು ಅಧಿಕಾರಿಗಳು, ರಾಜಕಾರಣಿಗಳು, ವಿದೇಶಿ ಅತಿಥಿಗಳು ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಹಾಜರಿದ್ದರು. ಅಫ್ಘಾನಿಸ್ತಾನ ಅಧ್ಯಕ್ಷ ಹಮೀದ್ ಕರ್ಜಾಯಿ, ಜರ್ದಾರಿ ಪುತ್ರ ಬಿಲವಾಲ್ ಭುಟ್ಟೂ, ಹಾಗೂ ಪುತ್ರಿಯರಾದ ಭಕ್ತವಾರ್ ಮತ್ತು ಅಸಿಫಾ ಅವರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಅಸಿಫ್ ಅಲಿ ಜರ್ದಾರಿ ಅವರು ಪ್ರಜಾಪ್ರಭುತ್ವವನ್ನು ಸಂರಕ್ಷಿಸುವುದರೊಂದಿಗೆ ಬಲಪಡಿಸಲಿದ್ದು ಸಾರ್ವಜನಿಕರಿಗೆ ನೆಮ್ಮದಿ ನೀಡಲಿದ್ದಾರೆ ಎಂದು ಪಿಪಿಪಿ ವಕ್ತಾರ ಫರ್ಜಾನ ರಾಜಾ ದೂರದರ್ಶನದಲ್ಲಿ ಮಾತನಾಡುತ್ತಾ ಹೇಳಿದ್ದಾರೆ.

ಪ್ರಜಾಪ್ರಭುತ್ವವು ಫಲಿಸಲಿದೆ ಮತ್ತು ಈ ಸರಕಾರವು ಐದು ವರ್ಷ ಪೂರ್ಣಗೊಳಿಸಲಿದೆ. ಐದು ವರ್ಷದ ಬಳಿಕ ಪಾಕಿಸ್ತಾನವು ವಿಶ್ವದ ನಕಾಶೆಯಲ್ಲಿ ಹೊಸ ಆಶಯಗಳೊಂದಿಗೆ ಹೊಸ ರಾಷ್ಟ್ರವಾಗಿ ಮೂಡಿಬರಲಿದೆ ಎಂದು ಅವರು ಹೇಳಿದ್ದಾರೆ.

ಕಳೆದ ವಾರದ ಅಧ್ಯಕ್ಷೀಯ ಚುನಾವಣೆಯಲ್ಲಿ 53ರ ಹರೆಯದ ಜರ್ದಾರಿ ಸುಮಾರು ಶೇ.70ರಷ್ಟು ಮತಗಳಿಸುವ ಮೂಲಕ ಆಯ್ಕೆಗೊಂಡಿದ್ದರು.
ಮತ್ತಷ್ಟು
ಪ್ರಜಾಪ್ರಭುತ್ವ ವರ್ಧನೆಗೆ ಬೆಂಬಲ: ಶರೀಫ್ ಭರವಸೆ
ಭಾರತಕ್ಕೆ ಪರಮಾಣು ಪೂರೈಕೆಯಿಲ್ಲ: ಆಸ್ಟ್ರೇಲಿಯಾ
ತಾಲಿಬಾನ್‌ಗೆ ಲಾಭದಾಯಕವಾಗಿರುವ ಅಪಹರಣ ವೃತ್ತಿ: ವರದಿ
ಜರ್ದಾರಿ ಮುಂದಿನವಾರ ಚೀನಾ ಭೇಟಿ
ವಿಯೆನ್ನಾದಲ್ಲಿ ಭಾರತದ ಸಾಧನೆ: ರೈಸ್ ಶ್ಲಾಘನೆ
ಪೇಶಾವರ ಬಾಂಬ್ ದಾಳಿಗೆ 30 ಬಲಿ