ಸೆಪ್ಟೆಂಬರ್ ಅಂತ್ಯದೊಳಗಾಗಿ ಅಣು ಒಪ್ಪಂದವನ್ನು ಕಾರ್ಯಗತಗೊಳಿಸಲು ಉಭಯ ರಾಷ್ಟ್ರಗಳು ಶಕ್ತವಾಗಲಿವೆ ಎಂದು ಅಮೆರಿಕದ ಭಾರತ ರಾಯಭಾರಿ ಡೇವಿಡ್ ಮುಲ್ಫೋರ್ಡ್ ಮಂಗಳವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸದ್ಯವೇ 123 ಒಪ್ಪಂದವನ್ನು ಅಮರಿಕ ಕಾಂಗ್ರೆಸ್ ಮುಂದಿರಿಸಲಾಗುವುದು ಎಂದು ಸ್ಪಷ್ಟಪಡಿಸಿರುವ ಮುಲ್ಫೋರ್ಡ್ ಸೆಪ್ಟೆಂಬರ್ 26ಕ್ಕೆ ಅಂತ್ಯಗೊಳ್ಳಲಿರುವ ಕಾಂಗ್ರೆಸ್‌ನ ಕ್ಷಿಪ್ರ ಅಧಿವೇಶನದಲ್ಲಿ ಇದು ಅಂಗೀಕಾರವಾಗಬಹುದು ಎಂಬ ಆಶಯವನ್ನು ವ್ಯಕ್ತಪಡಿಸಿದ್ದಾರೆ.
ದ್ವಿಪಕ್ಷೀಯ ಬೆಂಬಲದ ಆಧಾರದಲ್ಲಿ ಅಮೆರಿಕ ಆಡಳಿತವು ಕಾರ್ಯನಿರ್ವಹಿಸುತ್ತಿದ್ದು, ಅಣುಒಪ್ಪಂದಕ್ಕೆ ಕಾಂಗ್ರೆಸ್ ಹಸಿರು ನಿಶಾನೆ ತೋರಲಿದೆ ಎಂದು ಹೇಳಿದ ಅವರು, ಈ ತಿಂಗಳ ಅಂತ್ಯದಲ್ಲಿ ಭಾರತದ ಪ್ರಧಾನಿ ಮನಮೋಹನ್ ಸಿಂಗ್ ಅವರು ವಾಶಿಂಗ್ಟನ್‌ಗೆ ಭೇಟಿ ನೀಡುವ ವೇಳೆ ಒಪ್ಪಂದಕ್ಕೆ ಅಂತಿಮ ರುಜು ಬೀಳಬಹುದು ಎಂಬುದಾಗಿಯೂ ಅವರು ತಿಳಿಸಿದರು.
ಕಾಂಗ್ರೆಸ್ 17 ದಿನಗಳ ಕ್ಷಿಪ್ರ ಅಧಿವೇಶನದಲ್ಲಿ ಅಣು ಒಪ್ಪಂದಕ್ಕೆ ಒಪ್ಪಿಗೆ ನೀಡುವಂತೆ ವಿನಂತಿಸಿರುವ ಬೆನ್ನಿಗೆ ರಾಯಭಾರಿಯವರ ಈ ಹೇಳಿಕೆ ಹೊರಬಿದ್ದಿದೆ.
|