ಬ್ಯಾಂಕಾಕ್: ನೂತನ ಪ್ರಧಾನಿ ಆಯ್ಕೆಗೆ ಥಾಯ್ಲಾಂಡ್‌ನ ಸಂಸತ್ತು ಶುಕ್ರವಾರದಂದು ತುರ್ತು ಅಧಿವೇಶನವೊಂದನ್ನು ಕರೆಯಲಿದೆ. ವಿವಾದಾಸ್ಪದ ಟಿವಿ ಅಡುಗೆ ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ಸಮಕ್ ಸುಂದರವೇಜ್ ಸಿಲುಕಿರುವ ಹಿನ್ನೆಲೆಯಲ್ಲಿ ಸ್ಥಾನ ತೊರೆಯುವಂತೆ ನ್ಯಾಯಾಲಯ ಆದೇಶ ನೀಡಿದ್ದು ಈ ತುರ್ತು ಅಧಿವೇಶನ ಕರೆಯಲಾಗುತ್ತಿದೆ.
"ಅಧಿವೇಶನವು ಶುಕ್ರವಾರ ಬೆಳಿಗ್ಗೆ 9.30ಕ್ಕೆ ಪ್ರಾರಂಭವಾಗಲಿದೆ. ಮತ್ತು ಪ್ರತಿಯೊಬ್ಬ ಸಂಸತ್ ಸದಸ್ಯನೂ ಮುಕ್ತವಾಗಿ ರೋಲ್ ಕಾಲ್ ಮಾದರಿಯಲ್ಲಿ ಮತ ಚಲಾಯಿಸಬೇಕು" ಎಂದು ಸಂಸತ್ತಿನ ಹಿರಿಯ ಅಧಿಕಾರಿ ಪಿಟೂನ್ ಪುನ್‌ಹಿರಣ್ ತಿಳಿಸಿದ್ದಾರೆ.
"ಪ್ರಧಾನಿ ಆಯ್ಕೆಯು ಅಧಿವೇಶನದ ಏಕೈಕ ಕಾರ್ಯಸೂಚಿಯಾಗಿದೆ" ಎಂದು ಪಿಟೂನ್ ಸ್ಪಷ್ಟಪಡಿಸಿದರು. ಸಾಂವಿಧಾನಾತ್ಮಕ ನ್ಯಾಯಾಲಯವು ಮಂಗಳವಾರದಂದು ಸಮಕ್ ಅವರನ್ನು ಬಲವಂತವಾಗಿ ಕಾರ್ಯಾಲಯದಿಂದ ಹೊರಹಾಕಿತ್ತು, ಅವರು ಅಕ್ರಮವಾಗಿ ಟಿವಿ ಅಡುಗೆ ಕಾರ್ಯಕ್ರಮವೊಂದನ್ನು ನಡೆಸಲು ಅಕ್ರಮವಾಗಿ ಹಣಸ್ವೀಕರಿಸಿದ್ದಾರೆ ಎಂಬ ಆರೋಪ ಅವರ ಮೇಲಿದೆ.
ನ್ಯಾಯಮೂರ್ತಿಗಳು ಅವರ ಮೇಲೆ ರಾಜಕೀಯ ನಿಷೇಧ ಹೇರಿಲ್ಲ. ಮತ್ತು ಆಢಾಳಿತಾರೂಢ ಪೀಪಲ್ ಪವರ್ ಪಾರ್ಟಿ(ಪಿಪಿಪಿ)ಯ ಹಿರಿಯ ಅಧಿಕಾರಿಗಳು ಈ ಕುರಿತು ಪ್ರತಿಕ್ರಿಯಿಸುತ್ತಾ ತಮ್ಮ ಪಕ್ಷವು ಸಂಸತ್ತಿನಲ್ಲಿ ತಮ್ಮ ಬಹುಮತವನ್ನು ಬಳಸಿ ಅವರು ಮತ್ತೆ ಅಧಿಕಾರಕ್ಕೆ ಮರಳುವಂತೆ ಮಾಡುವುದಾಗಿ ಹೇಳಿದ್ದಾರೆ.
ಆದರೆ, ಸಮ್ಮಿಶ್ರ ಸರಕಾರದ ಪ್ರಮುಖ ಪಾಲುದಾರ ಪಕ್ಷವೊಂದು ಸಮಕ್ ಅವರನ್ನು ಮರುಆಯ್ಕೆ ಮಾಡುವ ಕುರಿತು ಕಳವಳ ವ್ಯಕ್ತಪಡಿಸಿದ ನಂತರ, ಸಂಭಾವ್ಯ ಅಭ್ಯರ್ಥಿಗಳಿಗಾಗಿ ಪಕ್ಷವು ಸಮಾಲೋಚನೆ ನಡೆಸುತ್ತಿದೆ ಎಂಬ ಸೂಚನೆಯನ್ನು ಪಕ್ಷದ ಉಪನಾಯಕ ನೀಡಿದ್ದಾರೆ.
|