ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಅಣುಬಂಧ: ಕಾಂಗ್ರೆಸ್ ಸಮ್ಮತಿಗೆ ಯತ್ನ ಆರಂಭ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಣುಬಂಧ: ಕಾಂಗ್ರೆಸ್ ಸಮ್ಮತಿಗೆ ಯತ್ನ ಆರಂಭ
ಅಮೆರಿಕ ಪ್ರತಿನಿಧಿ ಸಭೆಯ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರನ್ನು ಭೇಟಿ ಮಾಡಿದ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಕೊಂಡೋಲಿಜಾ ರೈಸ್ ಅವರು ಭಾರತ-ಅಮೆರಿಕ ಅಣುಒಪ್ಪಂದದ ಕುರಿತು ಚರ್ಚಿಸಿದರು ಎಂದು ತಿಳಿದು ಬಂದಿದೆ.

PTI
ಅಣು ಒಪ್ಪಂದಕ್ಕೆ ಅಮೆರಿಕ ಕಾಂಗ್ರೆಸ್ ಸಮ್ಮತಿ ಗಳಿಸುವ ಪ್ರಯತ್ನವಾಗಿ ರೈಸ್ ಅವರು ಕ್ಯಾಪಿಟೋಲ್ ಹಿಲ್‌ಗೆ ತೆರಳಿ ಪ್ರಮುಖ ಕಾಂಗ್ರೆಸ್ ಸದಸ್ಯರ ಮನವೊಲಿಸಲು ಯತ್ನಿಸಿದ್ದಾರೆ. ಮುಂಬರುವ ಜನವರಿ 20ಕ್ಕೆ ಬುಶ್ ಆಡಳಿತವು ಕೊನೆಗೊಳ್ಳುವ ಮುನ್ನ ಒಪ್ಪಂದವನ್ನು ಅಂತಿಮಗೊಳಿಸಬೇಕೆಂಬ ಪ್ರಯತ್ನಕ್ಕೆ ಅವರು ಇಳಿದಿದ್ದಾರೆ.

ಈ ವರ್ಷದಲ್ಲೇ ಇದು ಅಂಗೀಕಾರಗೊಳ್ಳಲಿದೆ ಎಂಬ ಆಶಯ ಹೊಂದಿದ್ದು, ಇದಕ್ಕಾಗಿ ಸಾಧ್ಯವಿರುವ ಎಲ್ಲವನ್ನೂ ಮಾಡಲು ತಾವು ಸಿದ್ಧವಿರುವುದಾಗಿ ಅವರು ನುಡಿದರು.

"ಅಣುಒಪ್ಪಂದ ಸಾಧ್ಯವಾದರೂ, ಇಲ್ಲವಾದರೂ ನಾವು ಪ್ರಯತ್ನಿಸಿಲ್ಲವೆಂದಾಗಬಾರದು" ಎಂದು ವಿದೇಶಾಂಗ ಇಲಾಖಾ ವಕ್ತಾರ ಸಿಯಾನ್ ಮೆಕೊರ್ಮಾಕ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ವಿದೇಶಾಂಗ ಇಲಾಖೆಯು ಕಾಂಗ್ರೆಸ್‌ಗೆ ಈ ಕುರಿತ ದಾಖಲೆಗಳನ್ನು ಮುಂದಿನ 24ರಿಂದ 48 ಗಂಟೆಗಳೊಳಗಾಗಿ ಕಳುಹಿಸಲಿದೆ ಎಂಬ ಆಶಾವಾದವನ್ನು ರೈಸ್ ಹೊಂದಿದ್ದಾರೆ. ಆದರೆ ಇದು ಕಾರ್ಯಗತಗೊಳ್ಳಲು ಮತ್ತು ಅಮೆರಿಕದ ಕಾನೂನಿ ಅವಶ್ಯಕತೆಗಳನ್ನು ಪೂರೈಸಲು ಭಾರತವೂ ಸಹ ಹಲವಾರು ಕ್ರಮಗಳನ್ನು ಕೈಗೊಳ್ಳಬೇಕಿದೆ. ಭಾರತವು ಎನ್ಎಸ್‌ಜಿ ಮತ್ತು ಕ್ಷಿಪಣಿ ತಂತ್ರಜ್ಞಾನವನ್ನು ಮಿತಿಗೊಳಿಸುವ ಗುರಿಹೊಂದಿರುವ ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ಆಡಳಿತೆಯ ಮಾರ್ಗದರ್ಶಿ ಸೂತ್ರವನ್ನು ಔಪಚಾರಿಕವಾಗಿ ಅನುಸರಿಸಿದೆ ಎಂಬುದನ್ನು ಆಡಳಿತವು ದೃಢೀಕರಿಸಬೇಕಿದೆ.

ರೈಸ್ ಅವರು ಕಾಂಗ್ರೆಸ್‌ನ ಡೆಮಾಕ್ರೆಟಿಕ್ ಮತ್ತು ರಿಪಬ್ಲಿಕನ್ ನಾಯಕರು, ಪ್ರಮುಖ ಕಾನೂನು ನಿರ್ಮಾಪಕರು, ಸೆನೆಟ್ ಮತ್ತು ವಿದೇಶಾಂಗ ವ್ಯವಹಾರಗಳ ಸಮಿತಿಯ ಸದಸ್ಯರು, ಅದರಲ್ಲೂ ಭಾರತಕ್ಕೆ ಇಂಧನ ಮತ್ತು ಅಣು ತಂತ್ರಜ್ಞಾನ ಮಾರಾಟಕ್ಕೆ 30 ವರ್ಷಗಳ ಹಿಂದೆ ವಿಧಿಸಲಾಗಿದ್ದ ನಿಷೇಧವನ್ನು ಹಿಂತೆಗೆಯಲು ವಿರೋಧಿಸಿದ್ದವರೊಂದಿಗೆ ಮಾತುಕತೆ ನಡೆಸಿದ್ದಾರೆ.
ಮತ್ತಷ್ಟು
ಥಾಯ್: ನೂತನ ಪ್ರಧಾನಿ ಆಯ್ಕೆಗೆ ಅಧಿವೇಶನ
ಅಣು ಒಪ್ಪಂದವನ್ನು ಬೆಂಬಲಿಸಿದ್ದೆವು: ಚೀನ
ಬಾಂಗ್ಲಾ: ಜಿಯಾಗೆ ಬಂಧ ಮುಕ್ತಿ
ಎನ್ಎಸ್‌ಜಿ ವಿನಾಯಿತಿ: ರಶ್ಯಾ ಸ್ವಾಗತ
ತಿಂಗಳಾಂತ್ಯದಲ್ಲಿ ಅಣು ಒಪ್ಪಂದ ಅಂತಿಮ: ಮುಲ್ಫೋರ್ಡ್
ಅಧ್ಯಕ್ಷರಾಗಿ ಜರ್ದಾರಿ ಪ್ರಮಾಣ ವಚನ ಸ್ವೀಕಾರ