ಲಂಡನ್: ಬ್ರಿಟಿಷ್ ಸರಕಾರವು ಯುರೋಪೇತರರ ವಲಸೆಯನ್ನು ನಿರ್ಬಂಧಿಸುವ ಕುರಿತು ಪರಿಗಣನೆ ನಡೆಸುತ್ತಿದೆ. ಹೊಸ ಪ್ರಸ್ತಾಪದ ಪ್ರಕಾರ ಶಿಕ್ಷಕರು ಮತ್ತು ಬಾಣಸಿಗರು ಉದ್ಯೋಗ ನಿಮಿತ್ತ ಯುಕೆಗೆ ತೆರಳಬಹುದಾಗಿದೆ. ಆದರೆ ಹೊರಗಿನ ಐಟಿ ವೃತ್ತಿಪರರಿಗೆ ಅವಕಾಶವಿಲ್ಲ.
ರಾಷ್ಟ್ರದಲ್ಲಿ ಯಾವ ಕ್ಷೇತ್ರದಲ್ಲಿ ಪರಿಣತರ ಕೊರತೆ ಇದೆ ಎಂಬ ಹೊಸ ಪಟ್ಟಿಯನ್ನು ತಯಾರಿಸಲಾಗುತ್ತಿದೆ. ಅಕ್ಟೋಬರ್ ತಿಂಗಳಲ್ಲಿ ಈ ಪಟ್ಟಿಯ ಅಂತಿಮ ಆವೃತ್ತಿಯನ್ನು ಬ್ರಿಟಿಷ್ ಸರಕಾರ ಪ್ರಕಟಿಸಲಿದೆ.
ಈ ನೀತಿಗಳು ದ್ವಿತೀಯ ಸ್ತರದ ವಲಸಿಗರ ಅಡಿಯಲ್ಲಿ ಬರುತ್ತಿದ್ದು, ಅವರಿಗೆ ಕೆಲಸದ ಪರವಾನಗಿ ಅಥವಾ ಬ್ರಿಟನ್ನಿನಲ್ಲಿ ಕಾರ್ಯವೆಸಗಲು ಪ್ರಾಯೋಜಕರ ಅವಶ್ಯಕತೆ ಇದೆ.
ಶಿಫಾರಸ್ಸಿನ ಪ್ರಕಾರ ಬೇಡಿಕೆಯಲ್ಲಿರುವ ಪರಿಣತರೆಂದರೆ, ಸಲಹೆಗಾರರು, ಹಿರಿಯ ದಾದಿಯರು ಮತ್ತು ಗಣಿತ ಹಾಗೂ ವಿಜ್ಞಾನದ ಶಿಕ್ಷಕರು. ಇದಲ್ಲದೆ, ಪರಿಣತ ಇಂಜಿನೀಯರ್‌ಗಳು, ಬಾಣಸಿಗರು, ಪಾಲನಾ ಕಾರ್ಯಕರ್ತರು ಹಾಗೂ ಕುದುರೆ ತರಬೇತುಗಾರರು ಹಾಗೂ ಪಶುತಜ್ಞರಂತಹ ಪಶುಪಾಲನಾ ತಜ್ಞರ ಬೇಡಿಕೆ ಇದೆ.
ರಾಷ್ಟ್ರದಲ್ಲಿ ಮಾಹಿತಿ ತಂತ್ರಜ್ಞಾನ ಸಿಬ್ಬಂದಿಗಳು, ವಾಸ್ತು ಶಿಲ್ಪಿಗಳು ಮತ್ತು ಕಟ್ಟಡ ನಿರ್ಮಾಣ ಪರಿಣಿತರ ಕೊರತೆ ಇಲ್ಲವಂತೆ.
|