ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಇಂಡೊನೇಶ್ಯಾದಲ್ಲಿ ಲಘ ಭೂಕಂಪ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇಂಡೊನೇಶ್ಯಾದಲ್ಲಿ ಲಘ ಭೂಕಂಪ
ಜಕಾರ್ತ: ಇಂಡೊನೇಶ್ಯಾದ ಸುಮಾತ್ರ ದ್ವೀಪದಲ್ಲಿ ಬುಧವಾರ ಲಘು ಭೂಕಂಪ ಸಂಭವಿದ್ದು, ಯಾವುದೇ ಹಾನಿ, ಸಾವು ನೋವಿನ ಕುರಿತು ತಕ್ಷಣಕ್ಕೆ ವರದಿಯಾಗಿಲ್ಲ.

ರಿಕ್ಟರ್ ಮಾಪನದಲ್ಲಿ 5.6ರ ತೀವ್ರತೆಯಲ್ಲಿದ್ದ ಕಂಪನವು ಅಚೆ ಪ್ರಾಂತ್ಯದ ಸಿನಾಬಾಂಗ್‌ನ ನೈರುತ್ಯ ದಿಕ್ಕಿನಲ್ಲಿ 30 ಕಿಲೋಮೀಟರ್ ದೂರದಲ್ಲಿ ಸಂಭವಿಸಿದೆ ಎಂದು ಇಂಡೋನೇಶ್ಯಾದ ಭೂಗರ್ಭ ತಜ್ಞರು ಮತ್ತು ಹವಾಮಾನ ಪರಿಣತರು ಹೇಳಿದ್ದಾರೆ.

ಕಂಪನವು 10 ಕಿಲೋಮೀಟರ್ ಸಮುದ್ರದಾಳದಲ್ಲಿ ಸಂಭವಿಸಿದೆಯಾದರೂ ಸುನಾಮಿ ಎಚ್ಚರಿಕೆಯನ್ನು ನೀಡಲಾಗಿಲ್ಲ ಎಂದು ಹವಾಮಾನ ಇಲಾಖಾ ತಜ್ಞ ಸುಹರ್ಜನೊ ಹೇಳಿದ್ದಾರೆ.

ಹಾನಿಯ ಕುರಿತು ಸಿನಾಬಾಂಗ್ ನಗರದಿಂದ ಇದುವರೆಗೆ ಯಾವುದೇ ವರದಿಗಳು ಬಂದಿಲ್ಲ ಎಂದು ಅವರು ಹೇಳಿದ್ದಾರೆ. ಕಳೆದ ಸೆಪ್ಟಂಬರ್‌ನಲ್ಲಿ ಪಶ್ಚಿಮ ಸುಮಾತ್ರ ಹಾಗೂ ಇತರ ಪ್ರದೇಶಗಳಲ್ಲಿ 8.4ರ ತೀವ್ರತೆಯ ಭೂಕಂಪ ಸಂಭವಿಸಿದ್ದ ವೇಳೆ 23 ಮಂದಿ ಸಾವಿಗೀಡಾಗಿದ್ದು, ಸಾವಿರಾರು ಮನೆಗಳಿಗೆ ಹಾನಿಯುಂಟಾಗಿತ್ತು.

ಡಿಸೆಂಬರ್ 2004ರಲ್ಲಿ ಭೀಕರ ಸುನಾಮಿ ಅಪ್ಪಳಿಸಿದ್ದಾಗ ಇಂಡೊನೇಶ್ಯಾಗೆ ಭಾರೀ ಹಾನಿಯಾಗಿತ್ತು.
ಮತ್ತಷ್ಟು
ಪಾಕ್ ನೂತನ ಅಧ್ಯಕ್ಷ ಜರ್ದಾರಿಗೆ ಬುಶ್ ಅಭಿನಂದನೆ
ಬ್ರಿಟನ್‌ಗೆ ಬಾಣಸಿಗರು ಬರಲಿ; ಟೆಕ್ಕಿಗಳು ಬೇಡ
ಅಣುಬಂಧ: ಕಾಂಗ್ರೆಸ್ ಸಮ್ಮತಿಗೆ ಯತ್ನ ಆರಂಭ
ಥಾಯ್: ನೂತನ ಪ್ರಧಾನಿ ಆಯ್ಕೆಗೆ ಅಧಿವೇಶನ
ಅಣು ಒಪ್ಪಂದವನ್ನು ಬೆಂಬಲಿಸಿದ್ದೆವು: ಚೀನ
ಬಾಂಗ್ಲಾ: ಜಿಯಾಗೆ ಬಂಧ ಮುಕ್ತಿ