ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಪಾಕ್: ಮಸೀದಿಗೆ ಬಾಂಬ್ ದಾಳಿ-20 ಬಲಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಾಕ್: ಮಸೀದಿಗೆ ಬಾಂಬ್ ದಾಳಿ-20 ಬಲಿ
ಉತ್ತರ ಪಾಕಿಸ್ತಾನದ ಮಸೀದಿಯೊಂದಕ್ಕೆ ಶಂಕಿತ ಉಗ್ರಗಾಮಿಗಳು ಗ್ರೆನೇಡ್ ಎಸೆದ ಪರಿಣಾಮವಾಗಿ, ಪ್ರಾರ್ಥನೆ ಸಲ್ಲಿಸುತ್ತಿದ್ದ ಸುಮಾರು 20 ಮಂದಿ ಸಾವನ್ನಪ್ಪಿದ್ದು, 30 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಸೀದಿಯನ್ನು ಸುತ್ತುವರಿದ ಉಗ್ರಗಾಮಿಗಳು ಗ್ರೆನೇಡ್‌ಗಳನ್ನು ಎಸೆದು ಬೆಂಕಿ ಹಚ್ಚಲು ಪ್ರಾರಂಭಿಸಿದರು ಎಂದು ಹಿರಿಯ ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.

ಅಫ್ಘಾನ್ ಗಡಿ ಭಾಗದಲ್ಲಿರುವ ವಾಯುವ್ಯ ಗಡಿ ಪ್ರಾಂತ್ಯದ ಡಿರ್ ಜಿಲ್ಲೆಯ ರಿಮೋಟ್ ಪ್ರದೇಶಗಳ ಮೇಲಿನ ದಾಳಿಯ ನಂತರ, ಈ ಉಗ್ರಗಾಮಿಗಳು ಗುಡ್ಡಗಾಡು ಪ್ರದೇಶದತ್ತ ಕಣ್ಣಿಟ್ಟಿದ್ದಾರೆ ಎಂದು ರಕ್ಷಣಾ ಅಧಿಕಾರಿಗಳು ಹೇಳಿದ್ದಾರೆ.

ಉಗ್ರಗಾಮಿಗಳು ದಾಳಿ ನಡೆಸುವ ವೇಳೆ ಸುನ್ನಿ ಮಸೀದಿಯಲ್ಲಿ ಅನೇಕ ಭಕ್ತಾದಿಗಳು ವಿಶೇಷ ರಂಜಾನ್ ಪ್ರಾರ್ಥನೆಯಲ್ಲಿ ನಿರತರಾಗಿದ್ದರು. ಪಾಕಿಸ್ತಾನ ಪ್ರಧಾನಿ ಯೂಸುಫ್ ರಾಜಾ ಗಿಲಾನಿ ಈ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಮತ್ತಷ್ಟು
ಇಂಡೊನೇಶ್ಯಾದಲ್ಲಿ ಲಘ ಭೂಕಂಪ
ಪಾಕ್ ನೂತನ ಅಧ್ಯಕ್ಷ ಜರ್ದಾರಿಗೆ ಬುಶ್ ಅಭಿನಂದನೆ
ಬ್ರಿಟನ್‌ಗೆ ಬಾಣಸಿಗರು ಬರಲಿ; ಟೆಕ್ಕಿಗಳು ಬೇಡ
ಅಣುಬಂಧ: ಕಾಂಗ್ರೆಸ್ ಸಮ್ಮತಿಗೆ ಯತ್ನ ಆರಂಭ
ಥಾಯ್: ನೂತನ ಪ್ರಧಾನಿ ಆಯ್ಕೆಗೆ ಅಧಿವೇಶನ
ಅಣು ಒಪ್ಪಂದವನ್ನು ಬೆಂಬಲಿಸಿದ್ದೆವು: ಚೀನ