ಭಾರತ ಮತ್ತು ಅಮೆರಿಕ ನಡುವಿನ ನಾಗರಿಕ ಪರಮಾಣು ಒಪ್ಪಂದದ ಕರಡನ್ನು ಅಂತಿಮ ಅನುಮೋದನೆಗಾಗಿ ಯುಎಸ್ ಕಾಂಗ್ರೆಸ್‌ಗೆ ಸಲ್ಲಿಸಲಾಗಿದೆ ಎಂದು ಶ್ವೇತಭವನ ತಿಳಿಸಿದೆ.
ಅಮೆರಿಕ ಅಧ್ಯಕ್ಷ ಜಾರ್ಜ್ ಬುಷ್ ಮತ್ತು ಭಾರತ ಪ್ರಧಾನಿ ಮನಮೋಹನ್ ಸಿಂಗ್ ಅವರು ಜುಲೈ 2005 ರಂದು ಅಣು ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಈ ಒಪ್ಪಂದದಿಂದ ಭಾರತಕ್ಕೆ ಅಗ್ಗದ ಪರಮಾಣು ಇಂಧನವನ್ನು ಪಡೆದುಕೊಳ್ಳಲು ಅನುವು ಮಾಡಿಕೊಡುತ್ತದೆ.
ಒಪ್ಪಂದಕ್ಕೆ ಸಂಬಂಧಿಸಿದಂತೆ ಕರಡು ಪ್ರತಿಯನ್ನು ಅಮೆರಿಕ ಕಾಂಗ್ರೆಸ್‌ಗೆ ಸಲ್ಲಿಸಲಾಗಿದ್ದು, ಅಂತಿಮ ಅನುಮೋದನೆಗಾಗಿ ಕಾಯುತ್ತಿದೆ ಎಂದು ಶ್ವೇತಭವನವು ಹೇಳಿಕೆಯಲ್ಲಿ ತಿಳಿಸಿದೆ.
ಪ್ರಸ್ತಾಪಿತ ಒಪ್ಪಂದವು ಅಮೆರಿಕದ ಭಾರತದೊಂದಿಗಿನ ಶಾಂತಿಯುತ ಪರಮಾಣು ಸಹಕಾರಕ್ಕೆ ವಿಸ್ತೃತ ಚೌಕಟ್ಟನ್ನು ನೀಡುತ್ತದೆ. ಅಲ್ಲದೆ, ರಿಯಾಕ್ಟರುಗಳು ಸೇರಿದಂತೆ ಪರಮಾಣು ಸಾಧನ, ಪರಮಾಣು ಸಂಶೋಧನಾ ಸಾಧನ, ಪರಮಾಣು ವಿದ್ಯುತ್ ಉತ್ಪಾದನೆ ಮುಂತಾದವುಗಳ ವಿನಿಮಯಕ್ಕೆ ಅನುವು ಮಾಡಿಕೊಡುತ್ತದೆ ಎಂದು ಶ್ವೇತಭವನ ತನ್ನ ಹೇಳಿಕೆಯಲ್ಲಿ ಹೇಳಿದೆ.
ಆದರೆ, ಒಪ್ಪಂದದ ತಿದ್ದುಪಡಿಯಾಗುವವರೆಗೆ, ಸೂಕ್ಷ್ಮ ಪರಮಾಣು ತಂತ್ರಜ್ಞಾನ, ಬೃಹತ್ ನೀರು ಉತ್ಪಾದನಾ ತಂತ್ರಜ್ಞಾನ ಮತ್ತು ಉತ್ಪಾದನಾ ಸೌಲಭ್ಯ, ಸೂಕ್ಷ್ಮ ಪರಮಾಣು ಸೌಲಭ್ಯ ಮುಂತಾದ ವಿನಿಮಯ ಸಾಧ್ಯವಿಲ್ಲ ಎಂದು ಶ್ವೇತಭವನ ಹೇಳಿಕೆಗಳು ಸ್ಪಷ್ಟಪಡಿಸಿವೆ.
|