ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಪಾಕ್ ಮಸೀದಿಗೆ ಉಗ್ರರ ದಾಳಿ 25 ಜನರ ಹತ್ಯೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಾಕ್ ಮಸೀದಿಗೆ ಉಗ್ರರ ದಾಳಿ 25 ಜನರ ಹತ್ಯೆ
ಪಾಕಿಸ್ತಾನದಲ್ಲಿನ ಮುಸ್ಲಿಮರ ಪ್ರಾರ್ಥನಾಮಂದಿರದ ಮೇಲೆ ಗ್ರೆನೇಡ್ ಮತ್ತು ಗುಂಡಿನ ದಾಳಿ ನಡೆಸಿದ ಉಗ್ರರು, 25ಜನರ ಹತ್ಯೆಗೈದು 50ಜನರನ್ನು ಗಾಯಗೊಳಿಸಿದ್ದಾರೆ.ಡಿರ್ ಜಿಲ್ಲೆಯ ಮಸ್ಕಾನಿ ಎಂಬಲ್ಲಿ ಮಸೀದಿಯಲ್ಲಿ ಸಂಜೆ ನಡೆದ ಕೊನೆಯ ಪ್ರಾರ್ಥನೆಯ ನಂತರ ಈ ಘಟನೆ ಸಂಭವಿಸಿತು ಎಂದು ಟಿವಿ ಚಾನೆಲ್‌ಗಳು ವರದಿ ಮಾಡಿವೆ.

ಉಗ್ರರು ಮಸೀದಿಯೊಳಗೆ ಗ್ರೆನೇಡ್‌ಗಳನ್ನು ಎಸೆದರು ಮತ್ತು ಅದೇ ಸಮಯ ಪ್ರಾರ್ಥನಾರ್ಥಿಗಳ ಮೇಲೆ ಗುಂಡು ಹಾರಿಸಲು ತೊಡಗಿದರು ಎಂದು ಸ್ಥಳೀಯ ಜಿಯೊ ಟಿವಿ ವರದಿ ಮಾಡಿದೆ.

ಇದುವರೆಗೆ ಯಾವುದೇ ಸಂಘಟನೆಯು ಈ ದಾಳಿಯ ಹೊಣೆ ಹೊತ್ತುಕೊಂಡಿಲ್ಲ.

ರಾಷ್ಟ್ರಾಧ್ಯಕ್ಷ ಆಸಿಫ್ ಆಲಿ ಜರ್ದಾರಿ ಮತ್ತು ಪ್ರಧಾನಮಂತ್ರಿ ಯೂಸಫ್ ರಜಾ ಗಿಲಾನಿ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಮತ್ತಷ್ಟು
ಬಾಂಗ್ಲಾ ಮಾಜಿ ಪ್ರಧಾನಿ ಜಿಯಾ ಬಿಡುಗಡೆ
ಉಗ್ರ ನಿಗ್ರಹ: ಸಂಘರ್ಷ ಹಾದಿಯಲ್ಲಿ ಪಾಕ್-ಅಮೆರಿಕ
9/11 ಸ್ಮರಣೆ: ಮೃತರಿಗೆ ಶ್ರದ್ಧಾಂಜಲಿ-ಬುಷ್
ಯುಎಸ್ ಕಾಂಗ್ರೆಸ್‌ಗೆ 'ಅಣುಬಂಧ' ಕರಡು ಸಲ್ಲಿಕೆ
ಪಾಕ್: ಮಸೀದಿಗೆ ಬಾಂಬ್ ದಾಳಿ-20 ಬಲಿ
ಇಂಡೊನೇಶ್ಯಾದಲ್ಲಿ ಲಘ ಭೂಕಂಪ