ಪಾಕಿಸ್ತಾನದ ಪ್ರಧಾನ ಸೇನಾ ಮುಖ್ಯಸ್ಥ ಅಶ್ಫಕ್ ಪರ್ವೇಜ್ ಕಯಾನಿ ಸೇರಿದಂತೆ ಹೆಚ್ಚಿನ ಪಾಕಿಸ್ತಾನ ರಕ್ಷಣಾ ಅಧಿಕಾರಿಗಳು, ಈ ವರ್ಷದ ಜುಲೈ ತಿಂಗಳ ಕಾಬೂಲ್‌ನ ಭಾರತೀಯ ರಾಯಭಾರಿ ಕಚೇರಿ ಮೇಲಿನ ದಾಳಿಯ ಕುರಿತು ತಿಳಿದಿರುವ ಸಾಧ್ಯತೆ ಇದೆ ಎಂದು ಅಮೆರಿಕ ಗುಪ್ತಚರ ಮತ್ತು ರಕ್ಷಣಾ ಅಧಿಕಾರಿಗಳು ಸಂಶಯಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ಅಲ್ಲದೆ, ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐನ ಸಹಾಯಗೊಂದಿಗೇ ಈ ದಾಳಿಯನ್ನು ನಡೆಸಿರುವ ಸಾಧ್ಯತೆ ಇದೆ ಎಂದು ಅಮೆರಿಕ ಗುಪ್ತಚರ ಮತ್ತು ರಕ್ಷಣಾ ಅಧಿಕಾರಿಗಳು ಸಂಶಯ ವ್ಯಕ್ತಪಡಿಸಿದ್ದಾರೆ.
ಕಾಬೂಲ್ ದಾಳಿಯ ಕುರಿತು ಕಯಾನಿ ತಿಳಿದುಕೊಂಡಿಲ್ಲ ಎಂಬುದು ನಂಬಲಸಾಧ್ಯ ಎಂದು ಅಮೆರಿಕ ಅಧಿಕಾರಿಗಳು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಗೆ ತಿಳಿಸಿದ್ದಾರೆ.
ಅಫಘಾನಿಸ್ತಾನ ಮತ್ತು ಭಾರತ ಗಡಿ ಭಾಗದಲ್ಲಿ ಪಾಕಿಸ್ತಾನದ ಪ್ರಭಾವವನ್ನು ಉಳಿಸಿಕೊಳ್ಳಲು ಉಗ್ರಗಾಮಿ ಸಮೂಹಗಳ ಬಳಕೆಗೆ ಪಾಕಿಸ್ತಾನ ರಾಷ್ಟ್ರೀಯ ಭದ್ರತಾ ಅಧಿಕಾರಿಗಳು ನೆರವಾಗಿದ್ದಾರೆ ಎಂಬುದಾಗಿ ಅಮೆರಿಕ ಗುಪ್ತಚರ ಸಂಸ್ಥೆಗಳನ್ನು ಉಲ್ಲೇಖಿಸಿ ಪತ್ರಿಕೆಗಳು ವರದಿ ಮಾಡಿವೆ.
ವಾಸ್ತವವಾಗಿ, ಜುಲೈ ತಿಂಗಳ ಕಾಬೂಲ್ ದಾಳಿಯಲ್ಲಿ ಐಎಸ್ಐ ಪಾತ್ರವಿದೆ ಎಂಬ ವಿಚಾರವು ಬಹಿರಂಗಗೊಳ್ಳುವುದರ ಬಗ್ಗೆ ಐಎಸ್ಐ ಅಧಿಕಾರಿಗಳು ತಲೆಕೆಡಿಸಿಕೊಂಡಿರಲಿಲ್ಲ ಎಂದು ಪತ್ರಿಕೆಗಳು ಹೇಳಿವೆ.
|