ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಭೀಕರ ಚಂಡಮಾರುತಕ್ಕೆ ಟೆಕ್ಸಾಸ್ ತತ್ತರ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭೀಕರ ಚಂಡಮಾರುತಕ್ಕೆ ಟೆಕ್ಸಾಸ್ ತತ್ತರ
ಕಳೆದ ಕೆಲವು ದಿನಗಳಿಂದ ಅಟ್ಟಹಾಸಗೈಯುತ್ತಿರುವ ಹರಿಕೇನ್ ಚಂಡಮಾರುತ ಶುಕ್ರವಾರ ಸಂಜೆ ಭಾರೀ ಪ್ರಮಾಣದಲ್ಲಿ ಬಡಿದಪ್ಪಳಿಸಿದ ಪರಿಣಾಮ ಅಮೆರಿಕದ ಟೆಕ್ಸಾಸ್ ಕರಾವಳಿ ಪ್ರದೇಶ ಸಂಪೂರ್ಣ ತತ್ತರಿಸಿಹೋಗಿದೆ.

ಈ ಭಾರೀ ಚಂಡಮಾರುತದಿಂದ ತತ್ತರಿಸಿ ಹೋಗಿರುವ ಟೆಕ್ಸಾಸ್, ಅಲ್ಲಿನ ತೈಲ ಕಾರ್ಯಾಗಾರಗಳ ಕಾರ್ಯವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಇಡೀ ಟೆಕ್ಸಾಸ್ ಕರಾವಳಿ ಪ್ರದೇಶ ಜಲಾವೃತಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಚಂಡಮಾರುತದ ಪ್ರಕೋಪಕ್ಕೆ ಸಿಲುಕಿರುವ ಸುಮಾರು 1 ಮಿಲಿಯನ್ ಜನರನ್ನು ಕರಾವಳಿ ಪ್ರದೇಶದಿಂದ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಆದರೆ ಇದರಲ್ಲಿ ಕೆಲವರು ಸುರಕ್ಷಿತ ಸ್ಥಳಕ್ಕೆ ತೆರಳುವ ಕರೆಯನ್ನು ನಿರಾಕರಿಸಿದ್ದಾರೆ.

ಆದರೆ ಭಾರೀ ಪ್ರಮಾಣದಲ್ಲಿ ಬೀಸುತ್ತಿರುವ ಚಂಡಮಾರುತದಿಂದಾಗಿ ಪ್ರವಾಹದ ಪ್ರಮಾಣ ಒಂದೇ ಸಮನೇ ಏರುತ್ತಿದ್ದು, ಕರಾವಳಿ ಪ್ರದೇಶಗಳಲ್ಲಿನ ಮನೆಗಳೆಲ್ಲ ಜಲಾವೃತಗೊಂಡಿದೆ. ಅಲ್ಲದೇ ರಸ್ತೆ ಸಂಚಾರ ಕಷ್ಟಸಾಧ್ಯವಾಗಿದೆ.

ಗಾಲ್ವೆಸ್ಟನ್‌ನ ಅಗ್ನಿಶಾಮಕ ದಳದ ಸಿಬ್ಬಂದಿಗಳು ಪ್ರವಾಹಕ್ಕೆ ಸಿಲುಕಿದ 300 ಮಂದಿಯನ್ನು ರಕ್ಷಿಸಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

ನಾವು ಇದೀಗ ಬೀದಿ,ಬೀದಿಗಳಲ್ಲಿ ಸುತ್ತುತ್ತಿದ್ದು,ಯಾರು ಪ್ರವಾಹದಲ್ಲಿ ಸಿಲುಕಿ ರಕ್ಷಣೆಗಾಗಿ ಹಾತೊರೆಯುತ್ತಿದ್ದಾರೆ ಎಂಬುದನ್ನು ಗಮನಿಸಿ ಅಂತಹವರನ್ನು ರಕ್ಷಿಸುತ್ತಿರುವುದಾಗಿ ಅಗ್ನಿಶಾಮಕ ವರಿಷ್ಠ ಮೈಕೆಲ್ ವರೆಲಾ ಅವರು ತಿಳಿಸಿದ್ದಾರೆ.

ಟೆಕ್ಸಾಸ್‌‌ನ 600ಮೈಲಿ(965ಕಿ,ಮೀ.) ವರೆಗೆ ಬಿರುಗಾಳಿ ತನ್ನ ಪ್ರತಾಪವನ್ನು ತೋರಿಸುತ್ತಿದ್ದು, ಇದರಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಮತ್ತಷ್ಟು
ಶೀಘ್ರದಲ್ಲೇ ಸಿಯಾಚಿನ್, ಸರ್ ಕ್ರೀಕ್ ವಿವಾದ ಇತ್ಯರ್ಥ: ಜರ್ದಾರಿ
ಪಾಕ್‌‌ನಲ್ಲಿ ಅಮೆರಿಕ ಕ್ಷಿಪಣಿ ದಾಳಿಗೆ 12 ಬಲಿ
ಅಣು ಇಂಧನ ಪೂರೈಕೆಗೆ ಕಾನೂನು ಬದ್ಧತೆ ಇಲ್ಲ: ಬುಷ್
ಕಾಬೂಲ್ ದಾಳಿ ಕಯಾನಿಗೆ ತಿಳಿದಿತ್ತು: ವರದಿ
ಪಾಕ್ ಮಸೀದಿಗೆ ಉಗ್ರರ ದಾಳಿ 25 ಜನರ ಹತ್ಯೆ
ಬಾಂಗ್ಲಾ ಮಾಜಿ ಪ್ರಧಾನಿ ಜಿಯಾ ಬಿಡುಗಡೆ