ಪಾಕಿಸ್ತಾನದ ಬುಡಕಟ್ಟು ಪ್ರದೇಶದೊಳಕ್ಕೆ ಅಕ್ರಮವಾಗಿ ನುಸುಳಿರುವ ಅಮೆರಿಕ ಸೈನಿಕರ ವಿರುದ್ಧ ಮುಯ್ಯಿ ತೀರಿಸಿ ಅವರನ್ನು ಕೊಂದು ಬಿಡಿ ಎಂಬುದಾಗಿ ಪಾಕ್ ಆರ್ಮಿ ಫರ್ಮಾನು ಹೊರಡಿಸಿದೆ.
ಪಾಕ್ ಗಡಿಭಾಗದಲ್ಲಿ ರಹಸ್ಯವಾಗಿ ಕಾರ್ಯಾಚರಿಸುತ್ತಿರುವ ತಾಲಿಬಾನ್ ಮತ್ತು ಅಲ್ ಖೈದಾ ಉಗ್ರರನ್ನು ಸೆದೆಬಡಿಯುವ ನಿಟ್ಟಿನಲ್ಲಿ ಅಮೆರಿಕದ ಸೈನಿಕ ಪಡೆಗಳು ದಾಳಿಗೆ ತೊಡಗಿದ್ದು,ಈಗಾಗಲೇ ಸಾಕಷ್ಟು ವಿವಾದಕ್ಕೆ ಎಡೆಮಾಡಿಕೊಟ್ಟಿದೆ.
ಏತನ್ಮಧ್ಯೆ ಅಮೆರಿಕದ ವಿರುದ್ಧ ಗುಟುರು ಹಾಕಿರುವ ಪಾಕಿಸ್ತಾನದ ಕಮಾಂಡರ್ ಶುಕ್ರವಾರ ರಾತ್ರಿ ಅಮೆರಿಕ ಸೈನಿಕರನ್ನು ಸದೆಬಡಿಯುಂತೆ ಆದೇಶ ಹೊರಡಿಸಿದ್ದಾರೆ.
ತಾಲಿಬಾನ್ ಮತ್ತು ಅಲ್ ಖೈದಾ ಉಗ್ರರನ್ನು ಮಟ್ಟಹಾಕುವ ಅಮೆರಿಕದ ಸರ್ವಾಧಿಕಾರದ ಧೋರಣೆ ಇದೀಗ ಅಮೆರಿಕ ಮತ್ತು ಪಾಕ್ ನಡುವಿನ ಘರ್ಷಣೆಗೆ ಎಡೆಮಾಡಿಕೊಟ್ಟಂತಾಗಿದೆ.
ಅಕ್ರಮವಾರಿ ಪಾಕ್ ಅನ್ನು ಪ್ರವೇಶಿಸಿದ ಯುಎಸ್ ಸೈನಿಕರನ್ನು ಕೊಂದು ಬಿಡಿ ಎಂದು ಹಿರಿಯ ಅಧಿಕಾರಿಯೊಬ್ಬರು ಕಳೆದ ರಾತ್ರಿ ಆದೇಶ ಹೊರಡಿಸಿದ್ದಾರೆ.
ನಗರದ ರಾವಲ್ಪಿಂಡಿಯಲ್ಲಿ ರಾತ್ರಿ ಮಿಲಿಟರಿ ಕೇಂದ್ರ ಸ್ಥಾನದಲ್ಲಿ ನಡೆದ ರಹಸ್ಯ ಮಾತುಕತೆಯ ಬಳಿಕ ಈ ನಿರ್ಧಾರವನ್ನು ಹೊರಡಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಪಾಕಿಸ್ತಾನದ ಬುಡಕಟ್ಟು ಪ್ರದೇಶದಲ್ಲಿ ಕಾರ್ಯಾಚರಣೆಗೆ ಇಳಿದಿರುವ ಅಮೆರಿಕ ಪಡೆ,ಶುಕ್ರವಾರ ನಡೆಸಿದ ವೈಮಾನಿಕ ದಾಳಿಗೆ 12ಮಂದಿ ಬಲಿಯಾಗಿದ್ದರು.
|