ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಪಿಎಲ್‌ಎ ಹುದ್ದೆ ತ್ಯಜಿಸಿದ 'ಪ್ರಚಂಡ'
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಿಎಲ್‌ಎ ಹುದ್ದೆ ತ್ಯಜಿಸಿದ 'ಪ್ರಚಂಡ'
ನೇಪಾಳದ ನೂತನ ಪ್ರಧಾನಿ ಪುಷ್ಪ ಕಮಲ್ ದಹಾಲ್ (ಪ್ರಚಂಡ) ಅವರು ಭಾನುವಾರ ಇದೇ ಪ್ರಥಮ ಬಾರಿಗೆ ಭಾರತಕ್ಕೆ ಭೇಟಿ ನೀಡಲಿದ್ದು,ಅದಕ್ಕೂ ಮುನ್ನ ಅವರು ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಕಮಾಂಡರ್ ಹುದ್ದೆಯನ್ನು ತ್ಯಜಿಸಿರುವುದಾಗಿ ಪಕ್ಷದ ಮೂಲಗಳು ತಿಳಿಸಿವೆ.

ನೇಪಾಳದಲ್ಲಿ ಪ್ರಜಾಪ್ರಭುತ್ವದ ಹೋರಾಟಕ್ಕೆ ಹುಟ್ಟುಹಾಕಿದ್ದ ಪೀಪಲ್ಸ್ ಲಿಬರೇಶನ್ ಆರ್ಮಿಯ ಕಮಾಂಡರ್ ಹುದ್ದೆಯನ್ನು ಅಲಂಕರಿಸಿದ್ದ ಪುಷ್ಟ ಕಮಲ್ ದಹಾಲ್ ಆಲಿಯಾಸ್ ಪ್ರಚಂಡ ಅವರು ಪ್ರಧಾನಿ ಹುದ್ದೆಯನ್ನು ಅಲಂಕರಿಸಿದ ಬಳಿಕ,ಆ ಹುದ್ದೆಯನ್ನು ತ್ಯಜಿಸುವಂತೆ ವಿರೋಧ ಪಕ್ಷಗಳು ಒತ್ತಡ ಹೇರಿದ್ದವು.

ಆ ಒಪ್ಪಂದದನ್ವಯ ಇದೀಗ ಪೀಪಲ್ಸ್ ಲಿಬರೇಶನ್ ಆರ್ಮಿಗೆ 28ರ ಹರೆಯದ ಮಾಜಿ ಶಿಕ್ಷಕ ನಂದ ಕಿಶೋರ್ ಪನ್ ಎಂಬವರನ್ನು ಆಯ್ಕೆ ಮಾಡಲಾಗಿದೆ.

ಅಲ್ಲದೇ ನೇಪಾಳದ ಪ್ರಮುಖ ರಾಜಕೀಯ ಪಕ್ಷಗಳು, ದಾನಿಗಳು ಮತ್ತು ಭಾರತ ಕೂಡ ಪೀಪಲ್ಸ್ ಲಿಬರೇಶನ್ ಆರ್ಮಿಯ ಎಲ್ಲಾ ಅಧಿಕಾರಿಗಳು ತಮ್ಮ ಸ್ಥಾನವನ್ನು ತ್ಯಜಿಸಿ, ರಾಜಕೀಯ ಪ್ರವೇಶಿಸುವಂತೆ ಆಗ್ರಹಿಸಿದ್ದವು.

ಆ ನಿಟ್ಟಿನಲ್ಲಿ ಇದೀಗ ಪೀಪಲ್ಸ್ ಲಿಬರೇಶನ್ ಆರ್ಮಿ ಗೆರಿಲ್ಲಾ ಪಡೆಯ ಕಮಾಂಡರ್ ಪಟ್ಟವನ್ನು ನಂದ ಕಿಶೋರ್ ಪನ್ ಅವರು ಅಲಂಕರಿಸಿದ್ದಾರೆ.
ಮತ್ತಷ್ಟು
ಅಮೆರಿಕ ಸೈನಿಕರನ್ನು ಕೊಂದು ಬಿಡಿ: ಪಾಕ್
ಭೀಕರ ಚಂಡಮಾರುತಕ್ಕೆ ಟೆಕ್ಸಾಸ್ ತತ್ತರ
ಶೀಘ್ರದಲ್ಲೇ ಸಿಯಾಚಿನ್, ಸರ್ ಕ್ರೀಕ್ ವಿವಾದ ಇತ್ಯರ್ಥ: ಜರ್ದಾರಿ
ಪಾಕ್‌‌ನಲ್ಲಿ ಅಮೆರಿಕ ಕ್ಷಿಪಣಿ ದಾಳಿಗೆ 12 ಬಲಿ
ಅಣು ಇಂಧನ ಪೂರೈಕೆಗೆ ಕಾನೂನು ಬದ್ಧತೆ ಇಲ್ಲ: ಬುಷ್
ಕಾಬೂಲ್ ದಾಳಿ ಕಯಾನಿಗೆ ತಿಳಿದಿತ್ತು: ವರದಿ