ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಬಾಂಬ್ ದಾಳಿಗೆ ಅಫ್ಘಾನ್ ರಾಜ್ಯಪಾಲ ಬಲಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಾಂಬ್ ದಾಳಿಗೆ ಅಫ್ಘಾನ್ ರಾಜ್ಯಪಾಲ ಬಲಿ
ಅಫ್ಘಾನ್ ಪ್ರಾಂತ್ಯದ ರಾಜ್ಯಪಾಲ, ಕ್ಯಾಬಿನೆಟ್ ಮಾಜಿ ಸಚಿವ ಅಬ್ದುಲ್ಲಾ ವಾರ್ಡಕ್ ಅವರು ಸೇರಿದಂತೆ ಶನಿವಾರ ನಾಲ್ಕು ಮಂದಿ ತಾಲಿಬಾನ್ ಆತ್ಮಹತ್ಯಾ ದಳದ ಬಾಂಬ್ ದಾಳಿಗೆ ಶನಿವಾರ ಬಲಿಯಾಗಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

ಲೋಗಾರ್ ಪ್ರಾಂತ್ಯದ ರಾಜ್ಯಪಾಲರಾದ ಅಬ್ದುಲ್ಲಾ ವಾರ್ಡಕ್ ಅವರನ್ನು ರಾಜಧಾನಿಯಿಂದ 12ಕಿ.ಮೀ. ದೂರದಲ್ಲಿರುವ ಪಾಗಾಮನ್ ಎಂಬಲ್ಲಿ ಬಾಂಬ್ ದಾಳಿ ನಡೆಸುವ ಮೂಲಕ ಹತ್ಯೆಗೈದಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

ತಮ್ಮ ಮನೆಯಿಂದ ಕಾರಿನಲ್ಲಿ ತೆರಳುತ್ತಿದ್ದ ಅವರನ್ನು ರಿಮೋಟ್ ಕಂಟ್ರೋಲ್ ಡಿವೈಸ್ ಬಳಸಿ ಬಾಂಬ್ ಅನ್ನು ಸ್ಫೋಟಗೊಳಿಸಿ ಹತ್ಯೆಗೈಯಲಾಯಿತು ಎಂದು ಕಾಬೂಲ್‌ನ ಹಿರಿಯ ಪೊಲೀಸ್ ಅಧಿಕಾರಿ ಅಲಿ ಶಾ ಅವರು ವಿವರಿಸಿದ್ದಾರೆ.

ಆತ್ಮಹತ್ಯೆ ಬಾಂಬರ್ ರಾಜ್ಯಪಾಲರ ಮನೆ ಸಮೀಪ ಹೊಂಚು ಹಾಕಿ ಕುಳಿತಿದ್ದು, ಅವರು ತಮ್ಮ ಚಾಲಕನೊಂದಿಗೆ ಹೊರ ಬಂದಾಗ ದಾಳಿ ನಡೆಸಿರುವುದಾಗಿ ಲೋಗಾರ್ ಪೊಲೀಸ್ ವರಿಷ್ಠ ಗುಲಾಮ್ ಮುಸ್ತಾಫಾ ಮೊಸೆನಿ ತಿಳಿಸಿದ್ದು,

ಅವರು ಹೆಚ್ಚಿನ ವಿವರಣೆ ನೀಡಲು ನಿರಾಕರಿಸಿದರು. ಸ್ಫೋಟದಲ್ಲಿ ರಾಜ್ಯಪಾಲರು, ಕಾರಿನ ಚಾಲಕ ಹಾಗೂ ಇಬ್ಬರು ಅಂಗರಕ್ಷರು ಸಾವನ್ನಪ್ಪಿದ್ದಾರೆ.
ಮತ್ತಷ್ಟು
ಪಿಎಲ್‌ಎ ಹುದ್ದೆ ತ್ಯಜಿಸಿದ 'ಪ್ರಚಂಡ'
ಅಮೆರಿಕ ಸೈನಿಕರನ್ನು ಕೊಂದು ಬಿಡಿ: ಪಾಕ್
ಭೀಕರ ಚಂಡಮಾರುತಕ್ಕೆ ಟೆಕ್ಸಾಸ್ ತತ್ತರ
ಶೀಘ್ರದಲ್ಲೇ ಸಿಯಾಚಿನ್, ಸರ್ ಕ್ರೀಕ್ ವಿವಾದ ಇತ್ಯರ್ಥ: ಜರ್ದಾರಿ
ಪಾಕ್‌‌ನಲ್ಲಿ ಅಮೆರಿಕ ಕ್ಷಿಪಣಿ ದಾಳಿಗೆ 12 ಬಲಿ
ಅಣು ಇಂಧನ ಪೂರೈಕೆಗೆ ಕಾನೂನು ಬದ್ಧತೆ ಇಲ್ಲ: ಬುಷ್