ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ರಶ್ಯಾ ಉರಾಲ್ ಬೆಟ್ಟಕ್ಕೆ ಬಡಿದ ವಿಮಾನ: 88 ಸಾವು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಶ್ಯಾ ಉರಾಲ್ ಬೆಟ್ಟಕ್ಕೆ ಬಡಿದ ವಿಮಾನ: 88 ಸಾವು
ರಶ್ಯಾದ ಪರ್ಮ್ ನಗರ ಸಮೀಪದ ಉರಾಲ್ ಬೆಟ್ಟದಲ್ಲಿ ಸಂಭವಿಸಿರುವ ಬೋಯಿಂಗ್-737 ಜೆಟ್ ವಿಮಾನ ಅಪಘಾತದಲ್ಲಿ ವಿಮಾನದಲ್ಲಿದ್ದ ಎಲ್ಲಾ 88 ಮಂದಿ ಸಾವನ್ನಪ್ಪಿದ್ದಾರೆ.

ಮೃತರಲ್ಲಿ 83 ಮಂದಿ ಪ್ರಯಾಣಿಕರು ಮತ್ತು ಇತರ ಐದು ಮಂದಿ ಸಿಬ್ಬಂದಿಗಳು ಸೇರಿದ್ದಾರೆ.

ವಿಮಾನವು ಆಳವಾದ ಕಮರಿಗೆ ಬಿದ್ದಿದ್ದು, ಒಂದು ಮಗು ಸೇರಿದಂತೆ 82 ಪ್ರಯಾಣಿಕರು ಮತ್ತು ಐದು ಸಿಬ್ಬಂದಿಗಳು ಸಾವನ್ನಪ್ಪಿದ್ದಾರೆ ಎಂಬ ಪ್ರಾಥಮಿಕ ಮಾಹಿತಿ ಲಭಿಸಿರುವುದಾಗಿ ತನಿಖಾಧಿಕಾರಿ ವ್ಲಾಡಿಮಿರ್ ಮಾರ್ಕಿನ್ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

ಈ ಅಪಘಾತದಿಂದಾಗಿ ಟ್ರಾನ್ಸ್ ಸೈಬೀರಿಯನ್ ರೈಲ್ವೇಗೆ ಹಾನಿಯುಂಟಾಗಿದೆ ಎಂದು ಅವರು ತಿಳಿಸಿದ್ದಾರೆ.

ಮಾಸ್ಕೋದ ಶೆರೆಮೆಟೆಯೋವ್ ವಿಮಾನ ನಿಲ್ದಾಣದಿಂದ ಮಧ್ಯರಾತ್ರಿ 01.12ಕ್ಕೆ ಹೊರಟ ವಿಮಾನವು 1,800 ಮೀಟರ್ ಎತ್ತರದಲ್ಲಿ ಹಾರುತ್ತಿದ್ದು, ಸಂಪರ್ಕ ಕಳೆದುಕೊಂಡಿತ್ತು ಎಂದು ಹೇಳಲಾಗಿದೆ. ವಿಮಾದಲ್ಲಿ ಬೆಂಕಿ ಹತ್ತಿಕೊಂಡು ಸ್ಫೋಟ ಸಂಭವಿಸಿದ್ದು, ಯಾರೂ ಬದುಕುಳಿದಿರುವ ಸಂಭವ ಇಲ್ಲ ಎಂದು ತುರ್ತು ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ.
ಮತ್ತಷ್ಟು
ಟೆಕ್ಸಾಸ್‌ಗೆ ಅಪ್ಪಳಿಸಿದ ಐಕ್ ಚಂಡಮಾರುತ
ಪಾಕ್ ನೆಲದ ಮೇಲೆ ದಾಳಿ: ಅಮೆರಿಕ ಹೇಳಿಕೆಗೆ ನಕಾರ
ಬಾಂಬ್ ದಾಳಿಗೆ ಅಫ್ಘಾನ್ ರಾಜ್ಯಪಾಲ ಬಲಿ
ಪಿಎಲ್‌ಎ ಹುದ್ದೆ ತ್ಯಜಿಸಿದ 'ಪ್ರಚಂಡ'
ಅಮೆರಿಕ ಸೈನಿಕರನ್ನು ಕೊಂದು ಬಿಡಿ: ಪಾಕ್
ಭೀಕರ ಚಂಡಮಾರುತಕ್ಕೆ ಟೆಕ್ಸಾಸ್ ತತ್ತರ