ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಪಾಕ್ ವಾಯುವ್ಯ ಭಾಗ ತಾಲಿಬಾನ್ ಕೈಯಲ್ಲಿ: ವರದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಾಕ್ ವಾಯುವ್ಯ ಭಾಗ ತಾಲಿಬಾನ್ ಕೈಯಲ್ಲಿ: ವರದಿ
ದಕ್ಷಿಣ ಪಾಕಿಸ್ತಾನದ ವಾಯುವ್ಯ ಗಡಿ ಪ್ರಾಂತ್ಯದ ಹೆಚ್ಚಿನ ಪ್ರದೇಶಗಳು ಪಾಕಿಸ್ತಾನ ಸರಕಾರದ ಪೂರ್ಣ ನಿಯಂತ್ರಣದಲ್ಲಿಲ್ಲ, ಇದು ವಿವಿಧ ತಾಲಿಬಾನ್ ಸಮೂಹಗಳ ನಿಯಂತ್ರಣದಲ್ಲಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ವಾಯುವ್ಯ ಗಡಿ ಪ್ರಾಂತ್ಯದಲ್ಲಿನ ಕೋಹತ್ ಜಿಲ್ಲೆ ಮತ್ತು ಬುಡಗಟ್ಟು ಪ್ರದೇಶದ ರಾಜಧಾನಿಯಾಗಿರುವ ಮಿರಾಂಶಾ ನಡುವಿನ ಕೆಲವು ಪ್ರಮುಖ ರಸ್ತೆಗಳನ್ನು ರಕ್ಷಣಾ ಪಡೆಗಳು ನಿಯಂತ್ರಿಸುತ್ತದೆ, ಆದರೆ, ಈ ಪ್ರದೇಶದ ಸಣ್ಣ ಗ್ರಾಮ ಹಾಗೂ ಸಣ್ಣ ನಗರಗಳ ನಿಯಂತ್ರಣವನ್ನು ಪೂರ್ಣ ಪ್ರಮಾಣದಲ್ಲಿ ಹೊಂದಿಲ್ಲ ಎಂದು ಮಾಧ್ಯಮ ವರದಿಗಳು ಹೇಳಿವೆ.

ಕೇಂದ್ರ ಪ್ರಭುತ್ವ ರಚನೆಯನ್ನು ಹೊಂದಿರದ ವಿವಿಧ ಉಗ್ರಗಾಮಿ ಸಮೂಹಗಳು ಈ ಪ್ರದೇಶದ ಮೇಲೆ ನಿಯಂತ್ರಣವನ್ನು ಹೊಂದಿದೆ ಎಂದು ನ್ಯೂಸ್ ಡೈಲಿ ಪತ್ರಿಕೆ ವರದಿ ಮಾಡಿದೆ.

ದಕ್ಷಿಣ ವಾಯುವ್ಯ ಗಡಿ ಪ್ರಾಂತ್ಯ ಮತ್ತು ಬುಡಗಟ್ಟು ವಲಯದ ಹೆಚ್ಚಿನ ಪ್ರದೇಶಗಳು ಸರಕಾರದ ಪೂರ್ಣ ನಿಯಂತ್ರಣವನ್ನು ಹೊಂದಿಲ್ಲ, ಇದರಿಂದಾಗಿ, ಹೆಚ್ಚಿನ ಸ್ಥಳೀಯ ಯುವಕರು, ಜೆಹಾದ್‌ಗಾಗಿ ವಿವಿಧ ಉಗ್ರಗಾಮಿ ಸಮೂಹಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.

ಪ್ರಮುಖ ಮೂರು ಉಗ್ರಗಾಮಿ ಸಂಘಟನೆಗಳು ಈ ಪ್ರದೇಶಗಳಲ್ಲಿ ಪಾರುಪತ್ಯ ನಡೆಸುತ್ತಿದ್ದು, ಮಿರಾಂಶಾ ಪ್ರದೇಶವು ಉತ್ಮನ್ಜಾಯ್ ವಾಜಿರ್ ಉಗ್ರಗಾಮಿಗಳಿಂದ ನಿಯಂತ್ರಿಸಲ್ಪಟ್ಟರೆ, ಮಿರ್ ಆಲಿ ಪ್ರದೇಶವು ದಾವರ್ ಉಗ್ರಗಾಮಿಗಳಿಂದ ಆಡಳಿತ ನಡೆಸಲ್ಪಡುತ್ತಿದ್ದು, ಕೆಲವು ಉಜ್ಬೆಕ್ ಉಗ್ರರು ಶಾವಲ್ ಪ್ರದೇಶದ ಕಾಡುಗಳಲ್ಲಿ ನೆಲೆಸಿದ್ದಾರೆ ಎಂದು ಮಾಧ್ಯಮಗಳು ಹೇಳಿವೆ.
ಮತ್ತಷ್ಟು
ರಶ್ಯಾ ಉರಾಲ್ ಬೆಟ್ಟಕ್ಕೆ ಬಡಿದ ವಿಮಾನ: 88 ಸಾವು
ಟೆಕ್ಸಾಸ್‌ಗೆ ಅಪ್ಪಳಿಸಿದ ಐಕ್ ಚಂಡಮಾರುತ
ಪಾಕ್ ನೆಲದ ಮೇಲೆ ದಾಳಿ: ಅಮೆರಿಕ ಹೇಳಿಕೆಗೆ ನಕಾರ
ಬಾಂಬ್ ದಾಳಿಗೆ ಅಫ್ಘಾನ್ ರಾಜ್ಯಪಾಲ ಬಲಿ
ಪಿಎಲ್‌ಎ ಹುದ್ದೆ ತ್ಯಜಿಸಿದ 'ಪ್ರಚಂಡ'
ಅಮೆರಿಕ ಸೈನಿಕರನ್ನು ಕೊಂದು ಬಿಡಿ: ಪಾಕ್