ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಭಯೋತ್ಪಾದನೆ ಹೋರಾಟದಲ್ಲಿ ಭಾರತಕ್ಕೆ ಬೆಂಬಲ: ಅಮೆರಿಕ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಯೋತ್ಪಾದನೆ ಹೋರಾಟದಲ್ಲಿ ಭಾರತಕ್ಕೆ ಬೆಂಬಲ: ಅಮೆರಿಕ
ನವದೆಹಲಿಯಲ್ಲಿ ನಡೆದ ಸರಣಿ ಬಾಂಬ್ ಸ್ಫೋಟವನ್ನು ಅಮೆರಿಕ ಬಲವಾಗಿ ಖಂಡಿಸಿದ್ದು, ಸೆಪ್ಟೆಂಬರ್ ಅಂತ್ಯದಲ್ಲಿ ಮನಮೋಹನ್ ಸಿಂಗ್ ಮತ್ತು ಅಮೆರಿಕ ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಷ್ ಭೇಟಿ ವೇಳೆಯ ಕಾರ್ಯಸೂಚಿಯಲ್ಲಿ ಭಯೋತ್ಪಾದನೆಯು ಪ್ರಮುಖ ವಿಷಯವಾಗಲಿದೆ ಎಂದು ಹೇಳಿದೆ.

ವಿಶ್ವಸಂಸ್ಥೆ ಪ್ರಧಾನ ಅಸೆಂಬ್ಲಿಯಲ್ಲಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಭಾಗವಹಿಸಲಿದ್ದು, ಈ ವೇಳೆ ಸಿಂಗ್ ಬುಷ್ ಅವರನ್ನು ಭೇಟಿಯಾಗಲಿದ್ದಾರೆ.

ಭಾರತದ ಮುಗ್ಧ ನಾಗರಿಕರ ಮೇಲಿನ ಭಯೋತ್ಪಾದನಾ ದಾಳಿಯು ಖಂಡನೀಯವಾಗಿದೆ. ಭಯೋತ್ಪಾದನೆ ಮತ್ತು ಉಗ್ರವಾದದ ವಿರುದ್ಧದ ಭಾರತದ ಹೋರಾಟಕ್ಕೆ ಅಮೆರಿಕವು ಸಂಪೂರ್ಣ ಬೆಂಬಲವನ್ನು ಮತ್ತು ಸಹಕಾರವನ್ನು ನೀಡುತ್ತದೆ ಎಂದು ಶ್ವೇತಭವನ ಮಾಧ್ಯಮ ಕಾರ್ಯದರ್ಶಿ ದಾನಾ ಪೆರಿನೋ ತಿಳಿಸಿದ್ದಾರೆ.

ಅಲ್ಲದೆ, ಸಿಂಗ್ ಅವರ ಭೇಟಿಯ ವೇಳೆ ಬುಷ್ ಭಯೋತ್ಪಾದನೆ ನಿಗ್ರಹದ ಕುರಿತಾಗಿ ಮಾತುಕತೆ ನಡೆಸಲಿದ್ದಾರೆ, ಇದರೊಂದಿಗೆ, ಅಮೆರಿಕ ಕಾಂಗ್ರೆಸ್‌ನಿಂದ ಅನುಮೋದನೆ ದೊರಕಿದರೆ, ಭಾರತ ಅಮೆರಿಕ ಪರಮಾಣು ಒಪ್ಪಂದಕ್ಕೂ ಸಹಿ ಹಾಕಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಮತ್ತಷ್ಟು
ಎಲ್‌ಟಿಟಿಇ ಸಂಪೂರ್ಣ ನಾಶ: ರಾಜಪಕ್ಸೆ
ಜಿಂಬಾಬ್ವೆ: ಮುಗಾಬೆ ಅಧ್ಯಕ್ಷ - ಸಾವಂಗಿರಿ ಪ್ರಧಾನಿ
ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿನಿ ಹತ್ಯೆ
ಭಯೋತ್ಪಾದನೆ ನಿಗ್ರಹ: ನೂತನ ಮಾತುಕತೆಗೆ ಜರ್ದಾರಿ ಕರೆ
ಬಾಂಗ್ಲಾ ಚುನಾವಣಾ ಅಖಾಡಕ್ಕೆ 'ಹುಜಿ'
ಪಾಕ್ ವಾಯುವ್ಯ ಭಾಗ ತಾಲಿಬಾನ್ ಕೈಯಲ್ಲಿ: ವರದಿ