ಸೋಮಾಲಿಯಾ ಸಮೀಪದ ಗಲ್ಫ್ ಆಫ್ ಅಡನ್‌ನಲ್ಲಿ 22 ಸಿಬ್ಬಂದಿಗಳನ್ನು ಹೊಂದಿದ ಹಾಂಗ್‌ಕಾಂಗ್ ಕೆಮಿಕಲ್ ಟ್ಯಾಂಕರ್ ಹಡಗನ್ನು ಶಸ್ತ್ರಸಜ್ಜಿತ ಕಡಲುಗಳ್ಳರು ಅಪಹರಿಸಿರುವುದಾಗಿ ಬಂದರು ಅಧಿಕಾರಿಗಳು ತಿಳಿಸಿದ್ದಾರೆ.
ಹಾಂಗ್‌ಕಾಂಗ್ ಕೆಮಿಕಲ್ ಟ್ಯಾಂಕರ್ ಹಡಗನ್ನು ಕಡಲುಗಳ್ಳರು ಸೋಮವಾರವೇ ವಶಪಡಿಸಿಕೊಂಡಿದ್ದಾರೆ ಎಂದು ಅಂತಾರಾಷ್ಟ್ರೀಯ ಬಂದರು ನಿಗಮದ ನೋಯೆಲ್ ಚಾಂಗ್ ಹೇಳಿದ್ದಾರೆ.
ಏಶಿಯಾದತ್ತ ತೆರಳುತ್ತಿದ್ದ ಈ ಹಡಗಿಗೆ ಗಲ್ಫ್ ಭದ್ರತೆ ಮತ್ತು ವೈಮಾನಿಕ ರಕ್ಷಣೆಯನ್ನು ನೀಡಲಾಗಿದ್ದರೂ, ಹಡಗನ್ನು ಅಪಹರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಸದ್ಯಕ್ಕೆ ಹೆಚ್ಚಿನ ಮಾಹಿತಿ ಲಭ್ಯವಾಗುತ್ತಿಲ್ಲ. ಭದ್ರತಾ ವ್ಯವಸ್ಥೆಯಿದ್ದರೂ ಹೆಚ್ಚಿನ ನಿಗಾ ವಹಿಸುವಂತೆ ಎಲ್ಲಾ ಹಡಗುಗಳಿಗೆ ಸೂಚನೆ ನೀಡಲಾಗಿದೆ ಎಂದು ಚೂಂಗ್ ಹೇಳಿದ್ದಾರೆ.
|