ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಗಡಿ ವಿವಾದ: ಭಾರತ-ಚೀನಾ ಮಾತುಕತೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗಡಿ ವಿವಾದ: ಭಾರತ-ಚೀನಾ ಮಾತುಕತೆ
ಭಾರತ ಚೀನಾ ಗಡಿ ವಿವಾದದ ಕುರಿತಾಗಿ ಭಾರತದ ರಾಷ್ಟ್ರೀಯ ಭದ್ರತಾ ಸಲಹಾಗಾರ ಎಂ.ಕೆ.ನಾರಾಯಣನ್ ಬೀಜಿಂಗ್‌ನಲ್ಲಿ ಚೀನಾದೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದು ಚೀನಾ ವಿದೇಶಾಂಗ ಸಚಿವಾಲಯವು ತಿಳಿಸಿದೆ.

ಸೆಪ್ಟೆಂಬರ್ 18 ಮತ್ತು ಸೆಪ್ಟೆಂಬರ್ 19ರಂದು ನಡೆಯಲಿರುವ ಎರಡು ದಿನಗಳ ಮಾತುಕತೆಯಲ್ಲಿ ಚೀನಾ ವಿದೇಶಾಂಗ ವಿಭಾಗದ ಸಲಹಾಗಾರ ಡಾಯ್ ಬಿಂಗೋ ಮತ್ತು ನಾರಾಯಣನ್ ನಿಯೋಗದ ಮುಂದಾಳತ್ವ ವಹಿಸಲಿದ್ದಾರೆ ಎಂದು ಸಚಿವಾಲಯದ ವಕ್ತಾರ ಜಿಯಾಂಗ್ ಯು ಹೇಳಿದ್ದಾರೆ.

ಭಾರತ ಚೀನಾ ನಡುವಿನ ಗಡಿ ವಿವಾದದ ಪರಿಹಾರಕ್ಕಾಗಿ 2003ರಲ್ಲಿ ವಿಶೇಷ ಪ್ರತಿನಿಧಿಯ ನೇಮಕ ನಂತರ, ಇದು 12ನೇ ಸುತ್ತಿನ ಮಾತುಕತೆಯಾಗಿದೆ.

ಚೀನಾ ಭಾರತ ಗಡಿ ವಿವಾದ ಸಂಬಂಧ, 1962ರಲ್ಲಿ ಉಭಯ ರಾಷ್ಟ್ರಗಳ ನಡುವೆ ಕದನ ಏರ್ಪಟ್ಟಿತ್ತು.
ಮತ್ತಷ್ಟು
ಹಾಂಗ್‌ಕಾಂಗ್: ಹಡಗಿನೊಂದಿಗೆ 22 ಜನರ ಅಪಹರಣ
ಭಯೋತ್ಪಾದನೆ ಹೋರಾಟದಲ್ಲಿ ಭಾರತಕ್ಕೆ ಬೆಂಬಲ: ಅಮೆರಿಕ
ಎಲ್‌ಟಿಟಿಇ ಸಂಪೂರ್ಣ ನಾಶ: ರಾಜಪಕ್ಸೆ
ಜಿಂಬಾಬ್ವೆ: ಮುಗಾಬೆ ಅಧ್ಯಕ್ಷ - ಸಾವಂಗಿರಿ ಪ್ರಧಾನಿ
ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿನಿ ಹತ್ಯೆ
ಭಯೋತ್ಪಾದನೆ ನಿಗ್ರಹ: ನೂತನ ಮಾತುಕತೆಗೆ ಜರ್ದಾರಿ ಕರೆ