ಭವಿಷ್ಯದ ಆರ್ಥಿಕ ಪ್ರಕ್ಷುಬ್ಧತೆಯಿಂದ ಹಣಕಾಸು ಮಾರುಕಟ್ಟೆ ಮತ್ತು ಆರ್ಥಿಕತೆಯನ್ನು ರಕ್ಷಿಸುವ ನಿಟ್ಟಿನಲ್ಲಿ, ಅಮೆರಿಕದ ಪ್ರಮುಖ ವಿಮಾ ಸಂಸ್ಥೆ ಎಐಜಿಗೆ 85 ದಶಲಕ್ಷ ತುರ್ತು ಸಾಲವನ್ನು ನೀಡಲು ಅಮೆರಿಕ ಸರಕಾರವು ಒಪ್ಪಿಗೆ ಸೂಚಿಸಿದೆ.
ಫೆಡರಲ್ ರಿಸರ್ವ್ ಮಂಗಳವಾರ ಸಂಜೆ ಘೋಷಿಸಿದ ಈ ಒಪ್ಪಂದಕ್ಕೆ ಅಮೆರಿಕ ಅಧ್ಯಕ್ಷರು ಬೆಂಬಲ ಸೂಚಿಸಿದ್ದಾರೆ ಎಂದು ಶ್ವೇತಭವನ ವಕ್ತಾರ ಟೋನಿ ಫ್ರಾಟೋ ಹೇಳಿದ್ದಾರೆ.
ಆರ್ಥಿಕತೆಗೆ ಧಕ್ಕೆ ಉಂಟಾಗುವುದನ್ನು ತಪ್ಪಿಸಲು ಮತ್ತು ಹಣಕಾಸು ಮಾರುಕಟ್ಟೆಯಲ್ಲಿ ಸ್ಥಿರತೆಯನ್ನು ಮೂಡಿಸಲು ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಕುರಿತಾಗಿ, ಫೆಡರಲ್ ರಿಸರ್ವ್‌ನೊಂದಿಗೆ ಅಮೆರಿಕ ಆಡಳಿತವು ಕಾರ್ಯನಿರ್ವಹಿಸುತ್ತಿರುವುದಾಗಿ ಖಜಾನೆ ಕಾರ್ಯದರ್ಶಿ ಹೆನ್ರಿ ಪಾಲ್ಸನ್ ಹೇಳಿದ್ದಾರೆ.
ಎಐಜಿಯ ಆತಂಕವನ್ನು ಶಮನ ಮಾಡಲು ಮತ್ತು ಆದಾಯ ತೆರಿಗೆದಾರರಿಂದ ರಕ್ಷಣೆಯನ್ನು ಒದಗಿಸಲು ಫೆಡರಲ್ ರಿಸರ್ವ್‌ನ ಈ ಕ್ರಮವನ್ನು ಬೆಂಬಲಿಸುವುದಾಗಿ ಪಾಲ್ಸನ್ ಹೇಳಿಕೆಯಲ್ಲಿ ಸೂಚಿಸಿದ್ದಾರೆ.
|