ನಿಗದಿತ ಸಮಯದೊಳಗೆ ಭಾರತ-ಅಮೆರಿಕ ಅಣು ಒಪ್ಪಂದಕ್ಕೆ ಶೀಘ್ರ ಒಪ್ಪಿಗೆ ನೀಡುವಂತೆ ಬುಷ್ ಆಡಳಿತವು ಅಮೆರಿಕ ಕಾಂಗ್ರೆಸ್‌ಗೆ ಒತ್ತಡ ಹೇರುತ್ತಿರುವುದರೊಂದಿಗೆ, ಈ ಒಪ್ಪಂದಕ್ಕೆ ಅನುಮೋದನೆ ನೀಡುವಂತೆ ಕಾನೂನು ತಜ್ಞರು ಆಗ್ರಹಿಸಿದ್ದಾರೆ.
ಭಾರತ-ಅಮೆರಿಕ ಪರಮಾಣು ಒಪ್ಪಂದಕ್ಕೆ ಸಮಯೋಚಿತ ಅನುಮೋದನೆಯು ಎರಡೂ ದೇಶಗಳಿಗೆ ಪ್ರಯೋಜನಕಾರಿಯಾಗಿದ್ದು, ನಿಗದಿತ ಸಮಯದೊಳಗೆ ಅಮೆರಿಕ ಕಾಂಗ್ರೆಸ್ ಇದಕ್ಕೆ ಒಪ್ಪಿಗೆ ನೀಡಬೇಕು ಎಂದು ಅಮೆರಿಕ ಕಾಂಗ್ರೆಸ್‌ನ 435 ಸದಸ್ಯರಿಗೆ ವಿತರಿಸಲಾದ ಈ ಪತ್ರದಲ್ಲಿ ಕಾನೂನು ತಜ್ಞರು ತಿಳಿಸಿದ್ದಾರೆ.
ಎರಡು ದೇಶಗಳ ನಡುವಿನ ಶಾಂತಿಯುತ ಪರಮಾಣು ಸಹಕಾರವನ್ನು ಉಂಟುಮಾಡುವ ಅಣು ಒಪ್ಪಂದಕ್ಕೆ ಸಹಕಾರ ನೀಡುವಂತೆ, ಐದು ರಿಪಬ್ಲಿಕನ್ ಮತ್ತು ಡೆಮಾಕ್ರಟಿಕ್ ಕಾನೂನು ತಜ್ಞರು ಮನವಿ ಈ ಪತ್ರದಲ್ಲಿ ಮನವಿ ಮಾಡಿದ್ದಾರೆ.
ಭಾರತ ಮತ್ತು ಅಮೆರಿಕ ನಡುವಿನ ಐತಿಹಾಸಿಕ ಪರಮಾಣು ಒಪ್ಪಂದವು ಅಂತಾರಾಷ್ಟ್ರೀಯ ಪರಮಾಣು ಇಂಧನ ಸಂಸ್ಥೆಯಿಂದ ಮತ್ತು ಪರಮಾಣು ಪೂರೈಕಾ ರಾಷ್ಟ್ರಗಳ ಸಮೂಹದಿಂದ ಒಪ್ಪಿಗೆಯನ್ನು ಪಡೆದುಕೊಂಡಿದೆ.
ಈ ಒಪ್ಪಂದವು ಭಾರತ ಮತ್ತು ಅಮೆರಿಕ ನಡುವಿನ ಆರ್ಥಿಕ ಸಂಬಂಧವನ್ನು ಬಲಗೊಳಿಸುವುದರೊಂದಿಗೆ, ಭಾರತದ ಇಂಧನ ಬೇಡಿಕೆಗಳನ್ನು ಪೂರೈಸಲು ಸಹಕಾರಿಯಾಗಲಿದೆ. ಈ ನಿಟ್ಟಿನಲ್ಲಿ ಈ ಒಪ್ಪಂದದ ಅನುಮೋದನೆಯು ಎರಡೂ ರಾಷ್ಟ್ರಗಳಿಗೆ ಅಗತ್ಯವಾಗಿದೆ ಎಂದು ಕಾನೂನುತಜ್ಞರು ಅಭಿಪ್ರಾಯಪಟ್ಟಿದ್ದಾರೆ.
|