ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಸೋಮಾಲಿಯಾ ಹಡಗು ಅಪಹರಣ: ಒತ್ತೆಯಾಳುಗಳ ಬಿಡುಗಡೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸೋಮಾಲಿಯಾ ಹಡಗು ಅಪಹರಣ: ಒತ್ತೆಯಾಳುಗಳ ಬಿಡುಗಡೆ
ಸೋಮಾಲಿಯಾ ಸಮೀಪದ ಗಲ್ಫ್ ಆಫ್ ಆಡನ್‌ನಲ್ಲಿ ಸೋಮಾಲಿಯಾ ಕಡಲುಗಳ್ಳರು ಅಪಹರಿಸಿದ್ದ ಹಡಗಿನ ಸಿಬ್ಬಂದಿಗಳನ್ನು ಫ್ರೆಂಚ್ ಕಮಾಂಡರ್‌ಗಳು

ಹಾಂಗ್‌ಕಾಂಗ್ ಮೂಲದ 22 ಸಿಬ್ಬಂದಿಗಳನ್ನು ಹೊಂದಿದ್ದ ಕೆಮಿಕಲ್ ಟ್ಯಾಂಕರ್ ಹಡಗನ್ನು ಕಡಲುಗಳ್ಳರು ಸೋಮವಾರ ಅಪಹರಿಸಿದ್ದರು. ಅಪಹೃತರ ಬಿಡುಗಡೆಗೆ ಫ್ರಾನ್ಸ್ ಅಧ್ಯಕ್ಷ ನಿಕೋಲಸ್ ಸರ್ಕೋಜಿ ಅವರ ಮೇಲೆ ಒತ್ತಡ ಬರುತ್ತಿದ್ದ ಹಿನ್ನೆಲೆಯಲ್ಲಿ, ಆ ನಿಟ್ಟಿನಲ್ಲಿ ಒತ್ತೆಯಾಳುಗಳ ಬಿಡುಗಡೆಗೆ ವಿಶೇಷ ರಕ್ಷಣಾ ಕಾರ್ಯಾಚರಣೆಗೆ ಸರ್ಕೋಜಿ ಆದೇಶ ನೀಡಿದ್ದರು.

ಮೂವತ್ತು ಕಮಾಂಡೋಗಳನ್ನು ಹೊಂದಿದ್ದ ವಿಶೇಷ ಪಡೆಯ ಕಾರ್ಯಾಚರಣೆಯ ವೇಳೆ ಒರ್ವ ಕಡಲ್ಗಳ್ಳ ಸಾವನ್ನಪ್ಪಿದ್ದು, ಆರು ಮಂದಿಯನ್ನು ಬಂಧಿಸಲಾಗಿದೆ ಎಂದು ಸರ್ಕೋಜಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಒತ್ತೆಯಾಳುಗಳ ಬಿಡುಗಡೆಗಾಗಿ ಕಾರ್ಯಾಚರಣೆ ನಡೆಸಿದ ಕಮಾಂಡೋಗಳಿಗೆ ಫ್ರೆಂಚ್ ಯುದ್ಧ ನೌಕೆ ಬೆಂಗಾವಲಾಗಿತ್ತು.

ಏಪ್ರಿಲ್ ತಿಂಗಳಲ್ಲಿ ನಡೆಸಿದ ಕಮಾಂಡೋ ಕಾರ್ಯಾಚರಣೆಯಲ್ಲಿ ಸೋಮಾಲಿಯಾ ಕಡಲುಗಳ್ಳರನ್ನು ಬಂಧಿಸಲಾಗಿತ್ತು. ಬಂಧನಗೊಂಡ ಆರು ಮಂದಿಯನ್ನು ಫ್ರಾನ್ಸ್‌ಗೆ ಕಳುಹಿಸಲಾಗಿದೆ.
ಮತ್ತಷ್ಟು
ಅಣುಬಂಧ ಶೀಘ್ರ ಅನುಮೋದನೆಗೆ ಕಾನೂನುತಜ್ಞರ ಆಗ್ರಹ
ಎಐಜಿಗೆ ಅಮೆರಿಕದಿಂದ ಪರಿಹಾರ ಧನ ಘೋಷಣೆ
ಪಾಕ್ ವಿರುದ್ಧದ ಬುಷ್ ಕ್ರಮಕ್ಕೆ ಒಬಾಮಾ ಬೆಂಬಲ
ಗಡಿ ವಿವಾದ: ಭಾರತ-ಚೀನಾ ಮಾತುಕತೆ
ಹಾಂಗ್‌ಕಾಂಗ್: ಹಡಗಿನೊಂದಿಗೆ 22 ಜನರ ಅಪಹರಣ
ಭಯೋತ್ಪಾದನೆ ಹೋರಾಟದಲ್ಲಿ ಭಾರತಕ್ಕೆ ಬೆಂಬಲ: ಅಮೆರಿಕ