ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಯುಎಸ್: ಸೌಮ್ಯಾ ಸಹೋದರ ಗುಂಡಿಗೆ ಬಲಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಯುಎಸ್: ಸೌಮ್ಯಾ ಸಹೋದರ ಗುಂಡಿಗೆ ಬಲಿ
ಆಂಧ್ರಪ್ರದೇಶದ ಇಂಜಿನಿಯರಿಂಗ್ ವಿದ್ಯಾರ್ಥಿನಿ ಸೌಮ್ಯಾ ರೆಡ್ಡಿ ಚಿಕಾಗೋದಲ್ಲಿ ಹತ್ಯೆಗೊಳಗಾದ ಬೆನ್ನಲ್ಲೇ, ಸೌಮ್ಯಾ ಸಹೋದರ ವಿಕ್ರಂ ಅವರನ್ನು ಕೊಲೆಗೈಯಲಾಗಿದೆ.

ಚಿಕಾಗೋದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ವಿಕ್ರಂ ರೆಡ್ಡಿ ಅವರನ್ನೂ ಗುಂಡಿಕ್ಕಿ ಕೊಲ್ಲಲಾಗಿದ್ದು, ಎರಡೂ ಹತ್ಯೆಗಳು ಒಂದೇ ಸಮಯದಲ್ಲಿ ಒಂದೇ ಸ್ಥಳದಲ್ಲಿ ಸಂಭವಿಸಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ವಿಕ್ರಂಗೆ ಸೇರಿದ ಕಾರಿನಲ್ಲಿ ಸೌಮ್ಯಾ ರೆಡ್ಡಿಯ ಮೃತದೇಹವು ಭಾನುವಾರ ಕಂಡುಬಂದಿತ್ತು. ಮಾರ್ವಿಲ್‌ನಲ್ಲಿ ಇಬ್ಬರೂ ಒಂದೇ ಮನೆಯಲ್ಲಿ ವಾಸವಾಗಿದ್ದರು.

ಪರಿಸ್ಥಿತಿಯ ಖಚಿತತೆಯ ಬಗ್ಗೆ ಪೊಲೀಸರು ಚರ್ಚೆ ನಡೆಸಿಲ್ಲದಿದ್ದರೂ ಮತ್ತು ಇದನ್ನು ಕೊಲೆ ಪ್ರೇರಿತ ಆತ್ಮಹತ್ಯೆ ಎಂಬುದಾಗಿ ಕರೆದರೂ, ಈ ಎರಡೂ ಪ್ರಕರಣದಲ್ಲಿ ಮೂರನೇ ವ್ಯಕ್ತಿ ಭಾಗಿಯಾಗಿರುವ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ.

ಇದರೊಂದಿಗೆ, ರೆಡ್ಡಿ ಕುಟುಂಬವೂ ಇದೊಂದು ಆತ್ಮಹತ್ಯೆ ಪ್ರಕರಣವೆಂದು ಒಪ್ಪಿಕೊಳ್ಳಲು ತಯಾರಿಲ್ಲ.

ಎಡ್ವರ್ಡ್‌ಸ್ವಿಲ್‌ನ ಸದರ್ನ್ ಇಲ್ಲಿನಸ್ ವಿಶ್ವವಿದ್ಯಾಲಯದಲ್ಲಿ ಇಲೆಕ್ಟ್ರಿಕಲ್ ಇಂಜಿನಿಯರ್ ವಿದ್ಯಾರ್ಥಿನಿಯಾಗಿದ್ದ ಸೌಮ್ಯಾರೆಡ್ಡಿ ಅವರ ಮೃತದೇಹವು, ವಿಶ್ವ ವಿದ್ಯಾಲಯದಿಂದ 25 ಕಿ.ಮೀ.ದೂರದಲ್ಲಿ ಕಂಡುಬಂದಿತ್ತು.

ಏತನ್ಮಧ್ಯೆ, ಸೌಮ್ಯಾ ಹತ್ಯೆ ಪ್ರಕರಣದ ತನಿಖೆಯಲ್ಲಿ ಫೆಡರಲ್ ತನಿಖಾ ನಿಗಮ(ಎಫ್‌ಬಿಐ) ಕೈಜೋಡಿಸಿದೆ.

ಪೊಲೀಸರು ಇದನ್ನು ಮಾನವಹತ್ಯೆ ಪ್ರಕರಣವೆಂದು ಪರಿಗಣಿಸಿದ್ದಾರೆ ಎಂದು ಎಸ್ಐಯು ಎಡ್ವರ್ಸ್‌ವಿಲ್ ಕ್ಯಾಂಪಸ್‌ನ ಅಂತಾರಾಷ್ಟ್ರೀಯ ಕಾರ್ಯಕ್ರಮಗಳ ನಿರ್ದೇಶಕ ರಾನ್ ಸ್ಕಾಫರ್ ಹೇಳಿದ್ದಾರೆ.
ಮತ್ತಷ್ಟು
ಸೋಮಾಲಿಯಾ ಹಡಗು ಅಪಹರಣ: ಒತ್ತೆಯಾಳುಗಳ ಬಿಡುಗಡೆ
ಅಣುಬಂಧ ಶೀಘ್ರ ಅನುಮೋದನೆಗೆ ಕಾನೂನುತಜ್ಞರ ಆಗ್ರಹ
ಎಐಜಿಗೆ ಅಮೆರಿಕದಿಂದ ಪರಿಹಾರ ಧನ ಘೋಷಣೆ
ಪಾಕ್ ವಿರುದ್ಧದ ಬುಷ್ ಕ್ರಮಕ್ಕೆ ಒಬಾಮಾ ಬೆಂಬಲ
ಗಡಿ ವಿವಾದ: ಭಾರತ-ಚೀನಾ ಮಾತುಕತೆ
ಹಾಂಗ್‌ಕಾಂಗ್: ಹಡಗಿನೊಂದಿಗೆ 22 ಜನರ ಅಪಹರಣ