ಯೆಮೆನ್ ರಾಜಾಧಾನಿಯ ಅಮೆರಿಕ ರಾಯಭಾರಿ ಕಚೇರಿಯನ್ನು ಗುರಿಯಾಗಿಸಿ ನಡೆಸಿದ ಕಾರ್ ಬಾಂಬ್ ದಾಳಿಯಲ್ಲಿ ಯೆಮೆನ್ ಆಂತರಿಕ ಸಚಿವಾಲಯದ ಆರು ರಕ್ಷಣಾ ಪಡೆಗಳು, ಆರು ದಾಳಿಕೋರರು ಮತ್ತು ನಾಲ್ಕು ನಾಗರಿಕರು ಸೇರಿದಂತೆ ಒಟ್ಟು 16 ಮಂದಿ ಮೃತಪಟ್ಟಿದ್ದಾರೆ ಎಂದು ಹಿರಿಯ ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.
ಕಾರ್ ಬಾಂಬ್ ರಾಯಭಾರಿ ಕಚೇರಿ ಗೋಡೆಗೆ ಗುದ್ದಿರುವುದಾಗಿ ಅಮೆರಿಕ ರಾಯಭಾರಿ ವಕ್ತಾರ ರ‌್ಯಾನ್ ಗಿಲಾ ತಿಳಿಸಿದ್ದಾರೆ.
ಮೃತಪಟ್ಟ ನಾಲ್ಕು ನಾಗರಿಕರಲ್ಲಿ ಮೂವರು ಯೆಮಿನಿ ನಾಗರಿಕರಾಗಿದ್ದು, ಒಬ್ಬ ಭಾರತೀಯ ಮೂಲದವರಾಗಿದ್ದಾರೆ ಎಂದು ಯೆಮಿನಿ ಭದ್ರತಾ ಅಧಿಕಾರಿಗಳು ಸೂಚಿಸಿದ್ದಾರೆ.
ಬುಧವಾರ ಮುಂಜಾನೆ ಕಾರ್ ಬಾಂಬ್ ರಾಯಭಾರಿ ಕಚೇರಿಗೆ ದಾಳಿ ಮಾಡಿದ್ದು, ಈ ಸ್ಫೋಟದಿಂದಾಗಿ ಸಮೀಪದ ಕೆಲವು ಮನೆ ಹಾಗೂ ಕಟ್ಟಡಗಳಿಗೆ ಹಾನಿ ಉಂಟಾಗಿದೆ.
|