ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಪಾಕ್ ಗಡಿಭಾಗದ ಮೇಲೆ ದಾಳಿಯಿಲ್ಲ: ಅಮೆರಿಕ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಾಕ್ ಗಡಿಭಾಗದ ಮೇಲೆ ದಾಳಿಯಿಲ್ಲ: ಅಮೆರಿಕ
PTI
ಅಫಘಾನಿಸ್ತಾನದ ಗಡಿ ಭಾಗದಲ್ಲಿರುವ ಪಾಕಿಸ್ತಾನ ವಾಯುವ್ಯ ಪ್ರದೇಶದಲ್ಲಿ ಇತ್ತೀಚಿನ ಅಮೆರಿಕದ ಕ್ಷಿಪಣಿ ದಾಳಿಯಿಂದಾಗಿ, ಎರಡೂ ರಾಷ್ಟ್ರಗಳ ನಡುವೆ ಉಂಟಾಗಿರುವ ಗೊಂದಲವನ್ನು ಶಮನಗೊಳಿಸುವ ನಿಟ್ಟಿನಲ್ಲಿ, ಪಾಕಿಸ್ತಾನದ ಪ್ರದೇಶಗಳ ಮೇಲೆ ಅಮೆರಿಕ ಸೇನೆಯು ಆಕ್ರಮಣ ಮಾಡುವುದಿಲ್ಲ ಎಂಬುದಾಗಿ ಅಮೆರಿಕ ನೌಕಾಪಡೆ ಮುಖ್ಯಸ್ಥ ಎಡ್ಮಿರಲ್ ಮೈಕ್ ಮುಲೆನ್ ಬುಧವಾರ ಪಾಕಿಸ್ತಾನ ಅಧಿಕಾರಿಗಳಿಗೆ ಭರವಸೆ ನೀಡಿದ್ದಾರೆ.

ಬುಧವಾರ ಪಾಕಿಸ್ತಾನ ಪ್ರಧಾನಿ ಯೂಸುಫ್ ರಾಜಾ ಗಿಲಾನಿ ಮತ್ತು ಇತರ ಉನ್ನತ ಅಧಿಕಾರಿಗಳನ್ನು ಭೇಟಿ ಮಾಡಿದ ವೇಳೆ ಅಮೆರಿಕ ಉನ್ನತ ಸೇನಾ ಅಧಿಕಾರಿಗಳು ಈ ಭರವಸೆಯನ್ನು ನೀಡಿದ್ದಾರೆ ಎಂದು ಸುದ್ದಿಸಂಸ್ಥೆಗಳು ವರದಿ ಮಾಡಿವೆ.

ಇದರೊಂದಿಗೆ, ಪಾಕಿಸ್ತಾನ ಸೇನಾ ಪ್ರಧಾನ ಮುಖ್ಯಸ್ಥ ಅಶ್ಫಕ್ ಪರ್ವೇಜ್ ಖಯಾನಿ ಮತ್ತು ರಾಷ್ಟ್ರೀಯ ಭದ್ರತಾ ಸಲಹಾಗಾರ ಮಹಮ್ಮದ್ ಅಲಿ ದುರಾನಿ ಅವರೊಂದಿಗೂ ಮುಲೆನ್ ಪ್ರತ್ಯೇಕ ಮಾತುಕತೆ ನಡೆಸಿದ್ದಾರೆ.

ಗಡಿ ಮೇಲಿನ ಆಕ್ರಮಣವನ್ನು ಅಮೆರಿಕವು ನಿಲ್ಲಿಸುವಂತೆ ಪಾಕಿಸ್ತಾನವು ಅಮೆರಿಕ ಕಮಾಂಡರ್‌ಗಳಿಗೆ ಸೂಚನೆ ನೀಡಿದ್ದು, ಒಂದು ವೇಳೆ ಅಮೆರಿಕವು ತನ್ನ ಆಕ್ರಮಣವನ್ನು ಮುಂದುವರಿಸಿದಲ್ಲಿ ತನ್ನ ಗಡಿಯ ಭದ್ರತೆಯನ್ನು ಕಾಯ್ದುಕೊಳ್ಳುವ ಹಕ್ಕು ದೇಶಕ್ಕಿದೆ ಎಂಬುದಾಗಿ ಎಚ್ಚರಿಕೆ ನೀಡಿದೆ.

ಅಮೆರಿಕ ಮತ್ತು ಪಾಕಿಸ್ತಾನ ಅಧಿಕಾರಿಗಳ ನಡುವೆ ನಡೆದ ಸಭೆಯಲ್ಲಿ, ಭಯೋತ್ಪಾದನೆಯ ವಿರುದ್ಧದ ಹೋರಾಟ ಮತ್ತು ಪಾಕಿಸ್ತಾನ-ಅಫ್ಘಾನ್ ಗಡಿ ವಿವಾದದ ಕುರಿತಾಗಿ ಮಾತುಕತೆ ನಡೆಸಲಾಯಿತು. ಇದರೊಂದಿಗೆ, ಪಾಕಿಸ್ತಾನ ಪ್ರದೇಶದೊಳಗೆ ಅಮೆರಿಕ ದಾಳಿಯ ಕುರಿತಾಗಿ ಉಭಯ ರಾಷ್ಟ್ರಗಳ ಹೇಳಿಕೆಗಳ ಕುರಿತು ಚರ್ಚೆ ನಡೆಸಲಾಯಿತು.

ಪ್ರಧಾನಮಂತ್ರಿಗಳ ನಿವಾಸದಲ್ಲಿ ಮುಲೆನ್ ಪ್ರಧಾನಿ ಗಿಲಾನಿ ಅವರನ್ನು ಭೇಟಿಯಾಗಿದ್ದು, ಸೇನಾ ಮುಖ್ಯಸ್ಥ ಖಯಾನಿ, ವಿದೇಶಾಂಗ ಸಚಿವ, ಮಹಮ್ಮದ್ ಖುರೇಶಿ, ಆಂತರಿಕ ವ್ಯವಹಾರಗಳ ಸಲಹಾಗಾರ ರೆಹ್ಮಾನ್ ಮಲಿಕ್ ಮತ್ತು ಇತರ ಮುಖ್ಯ ಅಧಿಕಾರಿಗಳು ಇದೇ ವೇಳೆ ಉಪಸ್ಥಿತರಿದ್ದರು.

ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಪಾಕಿಸ್ತಾನವು ಅಮೆರಿಕದ ಪ್ರಮುಖ ಜೊತೆಗಾರ ರಾಷ್ಟ್ರವಾಗಿದ್ದು, ಆದರೆ, ದೇಶದ ಗಡಿ ರಕ್ಷಣೆಯ ಬಗ್ಗೆ ಪಾಕಿಸ್ತಾನವು ನಿರ್ಲ್ಯಕ್ಷವನ್ನು ಹೊಂದಿಲ್ಲ ಎಂದು ಗಿಲಾನಿ ತಿಳಿಸಿದ್ದಾರೆ, ಅಲ್ಲದೆ, ಉಗ್ರಗಾಮಿಗಳ ವಿರುದ್ಧ ಕ್ರಮ ಕೈಗೊಳ್ಳುವ ಸಲುವಾಗಿ ಬೇರೆ ರಾಷ್ಟ್ರಗಳು ಪಾಕಿಸ್ತಾನ ಪ್ರದೇಶದೊಳಗೆ ಆಕ್ರಮಣ ಮಾಡಲು ಅನುವು ಮಾಡಿಕೊಡುವುದಿಲ್ಲ ಎಂಬುದಾಗಿ ಅವರು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.
ಮತ್ತಷ್ಟು
ಯೆಮೆನ್:ಯುಎಸ್ ಎಂಬೆಸಿ ಬಾಂಬ್ ದಾಳಿಗೆ 16 ಬಲಿ
ಯುಎಸ್: ಸೌಮ್ಯಾ ಸಹೋದರ ಗುಂಡಿಗೆ ಬಲಿ
ಸೋಮಾಲಿಯಾ ಹಡಗು ಅಪಹರಣ: ಒತ್ತೆಯಾಳುಗಳ ಬಿಡುಗಡೆ
ಅಣುಬಂಧ ಶೀಘ್ರ ಅನುಮೋದನೆಗೆ ಕಾನೂನುತಜ್ಞರ ಆಗ್ರಹ
ಎಐಜಿಗೆ ಅಮೆರಿಕದಿಂದ ಪರಿಹಾರ ಧನ ಘೋಷಣೆ
ಪಾಕ್ ವಿರುದ್ಧದ ಬುಷ್ ಕ್ರಮಕ್ಕೆ ಒಬಾಮಾ ಬೆಂಬಲ