ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಪಾಕ್ ಮೇಲೆ ಅಮೆರಿಕ ಕ್ಷಿಪಣಿ ದಾಳಿ: 7 ಸಾವು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಾಕ್ ಮೇಲೆ ಅಮೆರಿಕ ಕ್ಷಿಪಣಿ ದಾಳಿ: 7 ಸಾವು
ಪಾಕ್ ಪ್ರದೇಶದ ಮೇಲೆ ಅಮೆರಿಕ ದಾಳಿ ನಡೆಸುವುದಿಲ್ಲ ಎಂಬುದಾಗಿ ಅಮೆರಿಕ ಅಧಿಕಾರಿಗಳು ಭರವಸೆ ನೀಡಿದ ಬೆನ್ನಲ್ಲೇ, ಅಮೆರಿಕ ಸೇನಾ ಪಡೆಯು ಪಾಕಿಸ್ತಾನದಲ್ಲಿ ಕ್ಷಿಪಣಿ ದಾಳಿ ನಡೆಸಿದ್ದು, ಇದರಿಂದಾಗಿ ಏಳು ಮಂದಿ ಸಾವನ್ನಪ್ಪಿದ್ದು, ಮೂರು ಮಂದಿ ಗಾಯಗೊಂಡಿದ್ದಾರೆ.

ದಕ್ಷಿಣ ವಜಿರಿಸ್ತಾನದ ಬುಡಗಟ್ಟು ಪ್ರದೇಶದಲ್ಲಿ ಹಲವು ಕ್ಷಿಪಣಿ ದಾಳಿಗಳನ್ನು ಬುಧವಾರ ಸಂಜೆ ನಡೆಸಲಾಗಿದೆ ಎಂದು ಪಾಕಿಸ್ತಾನ ಗುಪ್ತಚರ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ತಾಲಿಬಾನ್ ಉಗ್ರಗಾಮಿಗಳು ಹಾಗೂ ಹೆಜ್ಬ್-ಇ-ಇಸ್ಲಾಮಿ ಗುಂಪನ್ನು ಗುರಿಯಾಗಿಸಿ ಈ ದಾಳಿಯನ್ನು ನಡೆಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ದಾಳಿಗೂ ಮುನ್ನ, ಅಮೆರಿಕ ಮತ್ತು ಪಾಕಿಸ್ತಾನದ ಹಿರಿಯ ಅಧಿಕಾರಿಗಳು ಭೇಟಿ ಮಾಡಿ ಭಯೋತ್ಪಾದನೆ ನಿಗ್ರಹದ ಸಾಮಾನ್ಯ ನೀತಿಯ ಕುರಿತಾಗಿ ಮಾತುಕತೆ ನಡೆಸಿದ್ದರು.
ಮತ್ತಷ್ಟು
ಪಾಕ್ ಗಡಿಭಾಗದ ಮೇಲೆ ದಾಳಿಯಿಲ್ಲ: ಅಮೆರಿಕ
ಯೆಮೆನ್:ಯುಎಸ್ ಎಂಬೆಸಿ ಬಾಂಬ್ ದಾಳಿಗೆ 16 ಬಲಿ
ಯುಎಸ್: ಸೌಮ್ಯಾ ಸಹೋದರ ಗುಂಡಿಗೆ ಬಲಿ
ಸೋಮಾಲಿಯಾ ಹಡಗು ಅಪಹರಣ: ಒತ್ತೆಯಾಳುಗಳ ಬಿಡುಗಡೆ
ಅಣುಬಂಧ ಶೀಘ್ರ ಅನುಮೋದನೆಗೆ ಕಾನೂನುತಜ್ಞರ ಆಗ್ರಹ
ಎಐಜಿಗೆ ಅಮೆರಿಕದಿಂದ ಪರಿಹಾರ ಧನ ಘೋಷಣೆ