ಭಾರತ ಅಮೆರಿಕ ನಡುವಿನ ಪರಮಾಣು ಒಪ್ಪಂದ ಕುರಿತಾದ ಅಮೆರಿಕ ಕಾಂಗ್ರೆಸ್‌ನ ನಿರ್ಣಾಯಕ ವಿಚಾರಣೆಯ ಮುಂದಾಗಿ, ಸೆಪ್ಟೆಂಬರ್ 26 ರೊಳಗೆ ಒಪ್ಪಂದ ಪೂರ್ಣಗೊಳಿಸುವ ನಿಟ್ಟಿನಲ್ಲಿ ಅಣು ಒಪ್ಪಂದಕ್ಕೆ ಶೀಘ್ರ ಅನುಮೋದನೆ ನೀಡುವಂತೆ ಮನವಿ ಮಾಡಲು ಪ್ರಮುಖ ಕಾನೂನು ತಜ್ಞರನ್ನು ಭೇಟಿ ಮಾಡುವುದಾಗಿ ವಾಷಿಂಗ್ಟನ್‌ನಲ್ಲಿರುವ ಉನ್ನತ ಮಟ್ಟದ ಭಾರತೀಯ ನಿಯೋಗಕ್ಕೆ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಕಾಂಡೋಲೀಸಾ ರೈಸ್ ಹೇಳಿದ್ದಾರೆ.
ಅಣು ಒಪ್ಪಂದದ ಅಂಕಿತಕ್ಕಾಗಿ ಕಾಂಗ್ರೆಸ್‌ನ್ನು ಒತ್ತಾಯಿಸಲು ಬುಷ್ ಆಡಳಿತವು ಸೂಕ್ತವಾಗಿ ಕಾರ್ಯನಿರ್ವಹಿಸುತ್ತಿರುವುದಾಗಿ ರೈಸ್ ಸಂಸತ್ ವ್ಯವಹಾರಗಳ ಸಚಿವ ವಯಲಾರ್ ರವಿ ನೇತೃತ್ವದ ಸಂಸದರಿಗೆ ತಿಳಿಸಿದ್ದಾರೆ.
ಭಾರತೀಯ ನಿಯೋಗದ ಭೇಟಿಯ ನಂತರ ರೈಸ್ ಒಪ್ಪಂದದ ಶೀಘ್ರ ಅನುಮೋದನೆಯ ಪ್ರಯತ್ನಕ್ಕಾಗಿ ಕ್ಯಾಪಿಟಲ್ ಹಿಲ್‌ಗೆ ತೆರಳಲಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಸೆನೆಟ್ ವಿದೇಶಾಂಗ ವ್ಯವಹಾರಗಳ ಸಮಿತಿಯಲ್ಲಿ ಗುರುವಾರ ನಡೆಯಲಿರುವ ಒಪ್ಪಂದದ ವಿಮರ್ಶೆಗೂ ಮುನ್ನ. ರೈಸ್ ಅವರು ಕ್ಯಾಪಿಟಲ್ ಹಿಲ್‌ನಲ್ಲಿ ಕಾನೂನುತಜ್ಞರ ಭೇಟಿಯು ಹೆಚ್ಚಿನ ಮಹತ್ವ ಪಡೆದಿದೆ.
|