ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಭಾರತದ ಜತೆ ಶಾಂತಿ ಮಾತುಕತೆ ಸ್ಥಗಿತವಿಲ್ಲ: ಪಾಕ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಾರತದ ಜತೆ ಶಾಂತಿ ಮಾತುಕತೆ ಸ್ಥಗಿತವಿಲ್ಲ: ಪಾಕ್
PTI
ಭಾರತ ಮತ್ತು ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಸಂಬಂಧದಲ್ಲಿ ಬಿರುಕು ಮೂಡುವ ಭೀತಿಯನ್ನು ದೂರತಳ್ಳಿರುವ ಪಾಕಿಸ್ತಾನವು, ಸಣ್ಣಪುಟ್ಟ ತೊಂದರೆಗಳ ನಡುವೆಯೂ, ಭಾರತದೊಂದಿಗಿನ ಶಾಂತಿ ಮಾತುಕತೆಯನ್ನು ಸ್ಥಗಿತಗೊಳಿಸಲಾಗಿಲ್ಲ ಎಂದು ಹೇಳಿದ್ದು, ಈ ಸಂಬಂಧ, ಮುಂದಿನ ವಾರ ನ್ಯೂಯಾರ್ಕ್‌ನಲ್ಲಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರನ್ನು ಪಾಕಿಸ್ತಾನ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಭೇಟಿ ಮಾಡಲಿದ್ದಾರೆ ಎಂಬುದಾಗಿ ಸ್ಪಷ್ಟನೆ ನೀಡಿದೆ.

ಇದರೊಂದಿಗೆ, ಪಾಕಿಸ್ತಾನ ತಂಡವು ಸದ್ಯದಲ್ಲಿಯೇ ಭಾರತಕ್ಕೆ ಭೇಟಿ ಮಾಡಿ ವ್ಯಾಪಾರ ನಿಯಂತ್ರಣ ರೇಖೆ ಸೇರಿದಂತೆ ಕಾಶ್ಮೀರ ಸಂಬಂಧಿ ವಿಚಾರಗಳ ಕುರಿತು ಮಾತುಕತೆ ನಡೆಸಲಿದೆ. ಅಲ್ಲದೆ, ಸರ್ ಕ್ರೀಕ್ ಬೌಂಡರಿ ಹಾಗೂ ಸಿಯಾಚನ್ ಬಿಕ್ಕಟ್ಟು ಕೂಡಾ ಶಮನಗೊಳ್ಳಲಿದೆ ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮಹಮ್ಮದ್ ಖುರೇಶಿ ತಿಳಿಸಿದ್ದಾರೆ.

ಕಾಶ್ಮೀರಿ ಸಂಬಂಧಿ ವಿವಾದದ ಕುರಿತಾದ ಮಾತುಕತೆಗಾಗಿ ಪಾಕಿಸ್ತಾನ ತಂಡವು ಶೀಘ್ರದಲ್ಲಿಯೇ ಭಾರತಕ್ಕೆ ಭೇಟಿ ನೀಡಲಿರುವುದರಿಂದ, ಭಾರತ ಪಾಕಿಸ್ತಾನ ಶಾಂತಿ ಮಾತುಕತೆಯು ಸ್ಥಗಿತಗೊಳ್ಳುವುದಿಲ್ಲ ಎಂದು ಖುರೇಶಿ ಸುದ್ದಿಗಾರರಿಗೆ ಹೇಳಿದ್ದಾರೆ.

ಅಲ್ಲದೆ, ವ್ಯಾಪಾರ ನಿಯಂತ್ರಣ ರೇಖೆಯಲ್ಲಿ ವ್ಯಾಪಾರ ನಡೆಸುವ ಕುರಿತಾದ ಮಾತುಕತೆ ನಡೆಸಲು ಪಾಕಿಸ್ತಾನ ನಿಯೋಗವನ್ನು ಭಾರತಕ್ಕೆ ಕಳುಹಿಸಲು ಪಾಕ್ ಸರಕಾರವು ಉತ್ಸುಕಗೊಂಡಿದೆ ಎಂದು ಅವರು ಸೂಚಿಸಿದ್ದಾರೆ.
ಮತ್ತಷ್ಟು
'ಅಣು' ಮೋದನೆ: ರೈಸ್‌ - ಕಾನೂನುತಜ್ಞರ ಭೇಟಿ
ಪಾಕ್ ಮೇಲೆ ಅಮೆರಿಕ ಕ್ಷಿಪಣಿ ದಾಳಿ: 7 ಸಾವು
ಪಾಕ್ ಗಡಿಭಾಗದ ಮೇಲೆ ದಾಳಿಯಿಲ್ಲ: ಅಮೆರಿಕ
ಯೆಮೆನ್:ಯುಎಸ್ ಎಂಬೆಸಿ ಬಾಂಬ್ ದಾಳಿಗೆ 16 ಬಲಿ
ಯುಎಸ್: ಸೌಮ್ಯಾ ಸಹೋದರ ಗುಂಡಿಗೆ ಬಲಿ
ಸೋಮಾಲಿಯಾ ಹಡಗು ಅಪಹರಣ: ಒತ್ತೆಯಾಳುಗಳ ಬಿಡುಗಡೆ