ಅಫ್ಘಾನ್ ಮೂಲದ ಅಮೆರಿಕ ಸೇನಾ ಗೂಢಚರನನ್ನು ಪಾಕಿಸ್ತಾನ ಕೇಂದ್ರದ ತಾಲಿಬಾನ್ , ತೆಹ್ರಿಕ್ -ಇ-ತಾಲಿಬಾನ್ ಉಗ್ರರು ಹತ್ಯೆಗೈದಿರುವುದಾಗಿ ವರದಿಯಾಗಿದೆ.
ಖೈಬರ್ ಸಂಸ್ಥೆಯಲ್ಲಿ ಮೃತಪಟ್ಟಿರುವ ಅಫ್ಘಾನ್ ನಾಗರಿಕನನ್ನು ಜೈಯಿನುಲ್ಲಾ ಎಂದು ಗುರುತಿಸಲಾಗಿದೆ ಎಂದು ಪತ್ರಿಕೆಗಳು ವರದಿ ಮಾಡಿವೆ.
ಜೈಯಿನುಲ್ಲಾ ಅವರನ್ನು ಕೊಲೆಗೈದ ನಂತರ ತಾಲಿಬಾನ್ ಉಗ್ರರು ಮೃತದೇಹವನ್ನು ಲಂಡಿ ಕೋಟಲ್‌ನ ಸರಕಾರಿ ಡಿಗ್ರಿ ಕಾಲೇಜ್ ಬಳಿ ಎಸೆದಿದ್ದಾರೆ ಎಂದು ವರದಿಗಳು ತಿಳಿಸಿವೆ.
ಈತನು ಅಮೆರಿಕ ಗೂಢಚಾರಿಯಾಗಿದ್ದಾನೆ. ಇವನಂತೆ, ಇತರರು ಯಾರಾದರೂ ಗೂಢಚರ್ಯೆ ನಡೆಸಿದ್ದಲ್ಲಿ ಅವರ ಸ್ಥಿತಿಯೂ ಇದೇ ಆಗಿರುತ್ತದೆ ಎಂಬುದಾಗಿ ಮೃತದೇಹದ ಬಳಿಯಲ್ಲಿದ್ದ ಚೀಟಿಯಲ್ಲಿ ಬರೆದಿಡಲಾಗಿದೆ.
|