ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > 'ಅಣು ಪರೀಕ್ಷೆ ನಡೆಸಿದರೆ 'ತರಾಟೆ' ಹಕ್ಕು ಅಮೆರಿಕಕ್ಕಿದೆ'
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
'ಅಣು ಪರೀಕ್ಷೆ ನಡೆಸಿದರೆ 'ತರಾಟೆ' ಹಕ್ಕು ಅಮೆರಿಕಕ್ಕಿದೆ'
PTI
ಅಮೆರಿಕ ಕಾಂಗ್ರೆಸ್‌ಗೆ ಕಳುಹಿಲಾಗಿರುವ ಅಣುಒಪ್ಪಂದದ ಪ್ರಸ್ತಾಪವು ಹೈಡ್ ಕಾಯಿದೆ ಅಂಶಗಳಿಗೆ ಸಮಾನವಾಗಿದೆ ಎಂಬುದಾಗಿ ಕಾನೂನುತಜ್ಞರು ಭರವಸೆ ನೀಡುವುದರೊಂದಿಗೆ, ಭಾರತವು ಹೇಗೆ ಪರಮಾಣು ಪರೀಕ್ಷೆ ನಡೆಸುವ ಹಕ್ಕನ್ನು ಹೊಂದಿದೆಯೋ, ಅದಕ್ಕೆ ಪ್ರತಿಕ್ರಯಿಸುವ ಹಕ್ಕನ್ನು ಅಮೆರಿಕ ಹೊಂದಿದೆ ಎಂದು ಬುಷ್ ಆಡಳಿತವು ಸೆನೆಟ್ ವಿದೇಶಾಂಗ ವ್ಯವಹಾರಗಳ ಸಮಿತಿಗೆ ಸ್ಪಷ್ಟಪಡಿಸಿದೆ.

ಭಾರತವು ಪರಮಾಣು ಅಥವಾ ಪರಮಾಣು ಶಸ್ತ್ರಾಸ್ತ್ಪ ಪರೀಕ್ಷೆ ನಡೆಸಿದಲ್ಲಿ ಯಾವ ರೀತಿಯ ಪರಿಣಾಮ ಉಂಟಾಗುತ್ತದೆ ಎಂಬುದಾಗಿ ಕೇಳಲಾಗಿತ್ತು. ಭಾರತವು ಸಾರ್ವಭೌಮ ಹಕ್ಕನ್ನು ಹೊಂದಿರುವಂತೆಯೇ ಅಮೆರಿಕವು ಪ್ರತಿಕ್ರಯಿಸುವ ಸಾರ್ವಭೌಮ ಹಕ್ಕನ್ನು ಹೊಂದಿದೆ ಎಂದು ಬುಷ್ ಆಡಳಿತವು ಉತ್ತರಿಸಿತ್ತು ಎಂಬುದಾಗಿ ರಾಜಕೀಯ ವ್ಯವಹಾರಗಳ ಅಧೀನ ಕಾರ್ಯದರ್ಶಿ ವಿಲಿಯಮ್ಸ್ ಬರ್ನ್ಸ್ ಸೆನೆಟ್ ಸಮಿತಿಯಲ್ಲಿ ಕಾನೂನು ತಜ್ಞರಿಗೆ ತಿಳಿಸಿದ್ದಾರೆ.

2005ರ ಒಪ್ಪಂದದಂತೆ ಪರಮಾಣು ಪರೀಕ್ಷೆ ಮುಂದುವರಿಕೆಯ ತಾತ್ಕಾಲಿಕ ನಿಷೇಧಕ್ಕೆ ಭಾರತ ಸರಕಾರ ಬದ್ಧವಾಗಿದೆ. ಅಲ್ಲದೆ, ಐಎಇಎಯೊಂದಿಗಿನ ಸುರಕ್ಷತಾ ಒಪ್ಪಂದದ ಶರತ್ತುಗಳನ್ನು ಭಾರತವು ಬೆಂಬಲಿಸುತ್ತದೆ ಎಂದು ಅಮೆರಿಕ ನಂಬಿದೆ ಎಂದು ಅಮೆರಿಕ ತನ್ನ ಹೇಳಿಕೆಯಲ್ಲಿ ಪುನರುಚ್ಛರಿಸಿದೆ.

ಭಾರತವು ಪರಮಾಣು ಪರೀಕ್ಷೆ ನಡೆಸಬಾರದು ಎಂಬುದಾಗಿ ಭಾರತಕ್ಕೆ ಈಗಾಗಲೇ ಸ್ಪಷ್ಟನೆ ನೀಡಲಾಗಿದ್ದು, ಐಎಇಎ ಒಪ್ಪಂದದಡಿಯಲ್ಲಿ ಭಾರತವು ತನ್ನ ಕಾನೂನು ಪರಿಧಿಯನ್ನು ದಾಟದಂತೆ ಭಾರತಕ್ಕೆ ಎಚ್ಚರಿಕೆ ನೀಡಲಾಗಿದೆ ಎಂದು ಬುಷ್ ಆಡಳಿತ ಹೇಳಿದೆ.

ಹೈಡ್ ಕಾಯಿದೆ ಸಂಬಂಧಪಟ್ಟಂತೆ, ಪರಮಾಣು ಪೂರೈಕಾ ರಾಷ್ಟ್ರಗಳಿಂದ(ಎನ್ಎಸ್‌ಜಿ) ಕೆಲವು ವಿನಾಯತಿಯನ್ನು ಅಮೆರಿಕವು ನಿರೀಕ್ಷಿಸುತ್ತಿದ್ದು, ಅಲ್ಲದೆ, ಈ ವಿಚಾರದಲ್ಲಿ ಎನ್ಎಸ್‌ಜಿ ರಾಷ್ಟ್ರಗಳಲ್ಲಿ ಒಮ್ಮತದ ಅಭಿಪ್ರಾಯವನ್ನು ಅಪೇಕ್ಷಿಸುತ್ತದೆ ಎಂದು ಅಮೆರಿಕ ತಿಳಿಸಿದೆ.
ಮತ್ತಷ್ಟು
'ಮಾವೋ' ತತ್ವ ಪ್ರಚಾರಕ್ಕಾಗಿ ಭಾರತಕ್ಕೆ ಬಂದಿಲ್ಲ: ಪ್ರಚಂಡ
ತಾಲಿಬಾನ್ ಉಗ್ರರಿಂದ ಅಮೆರಿಕ ಗೂಢಚಾರನ ಹತ್ಯೆ
ಭಾರತದ ಜತೆ ಶಾಂತಿ ಮಾತುಕತೆ ಸ್ಥಗಿತವಿಲ್ಲ: ಪಾಕ್
'ಅಣು' ಮೋದನೆ: ರೈಸ್‌ - ಕಾನೂನುತಜ್ಞರ ಭೇಟಿ
ಪಾಕ್ ಮೇಲೆ ಅಮೆರಿಕ ಕ್ಷಿಪಣಿ ದಾಳಿ: 7 ಸಾವು
ಪಾಕ್ ಗಡಿಭಾಗದ ಮೇಲೆ ದಾಳಿಯಿಲ್ಲ: ಅಮೆರಿಕ