ಗಡಿ ವಿವಾದದ ಕುರಿತಾಗಿ ಭಾರತ ಮತ್ತು ಚೀನಾ ನಡುವೆ ನಡೆದ ಮಾತುಕತೆಯಲ್ಲಿ ಎರಡೂ ರಾಷ್ಟ್ರಗಳು ಒಮ್ಮತ ನಿರ್ಧಾರಕ್ಕೆ ಬರಲು ವಿಫಲಗೊಂಡಿದ್ದು, ಏನೇ ಆದರೂ, ಈ ಕುರಿತಾಗಿ ಸೂಕ್ತ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಮಾತುಕತೆಯನ್ನು ಮುಂದುವರಿಸಲು ಉಭಯ ರಾಷ್ಟ್ರಗಳ ನಾಯಕರು ನಿರ್ಧರಿಸಿದ್ದಾರೆ.
ವ್ಯಾವಹಾರಿಕ, ಸರಳ ಮತ್ತು ಸ್ನೇಹಪರವಾಗಿದ್ದ ಉಭಯ ದೇಶಗಳ ನಡುವಿನ ಮಾತುಕತೆಯ ಮುಂದಾಳತ್ವವನ್ನು ಚೀನಾ ಸ್ಟೇಟ್ ಕೌನ್ಸಿಲರ್ ಡಾಯ್ ಬಿಂಗೋ ಮತ್ತು ಭಾರತೀಯ ರಾಷ್ಟ್ರೀಯ ಭದ್ರತಾ ಸಲಹಾಗಾರ ಎಂ.ಕೆ.ನಾರಾಯಣನ್ ವಹಿಸಿದ್ದರು ಎಂದು ಚೀನಾ ವಿದೇಶಾಂಗ ಸಚಿವಾಲಯದ ಹೇಳಿಕೆಗಳು ತಿಳಿಸಿವೆ.
ವರ್ಷಗಳ ಅವಧಿಯ ನಂತರ, ಎರಡೂ ರಾಷ್ಟ್ರಗಳು ಗುರುವಾರ ಮಾತುಕತೆಯನ್ನು ಪೂರ್ಣಗೊಳಿಸಿದ್ದು, ಆದರೆ ಯಾವುದೇ ಖಚಿತ ನಿರ್ಧಾರಕ್ಕೆ ಬರಲು ಸಾಧ್ಯವಾಗಲಿಲ್ಲ. ಮುಂದಿನ ಸುತ್ತಿನ ಮಾತುಕತೆಯು ಭಾರತದಲ್ಲಿ ನಡೆಯಲಿದೆ.
ಈ ತಿಂಗಳ ಪ್ರಾರಂಭದಲ್ಲಿ ವಿಯೆನ್ನಾದಲ್ಲಿನ ಎನ್ಎಸ್‌ಜಿ ಸಭೆಯಲ್ಲಿನ ಭಾರತದ ವಿನಾಯತಿ ಸಂಬಂಧ ಚೀನಾದೊಂದಿಗಿನ ವೈಮನಸ್ಸಿನ ಫಲವಾಗಿ, ಭಾರತ ಚೀನಾ ನಡುವಿನ ದ್ವಿಪಕ್ಷೀಯ ಸಂಬಂಧದಲ್ಲಿ ಕೆಲವು ಭಿನ್ನಾಭಿಪ್ರಾಯ ಉಂಟಾಗಿದ್ದರೂ, 12ನೇ ಸುತ್ತಿನ ಗಡಿ ಸಂಬಂಧಿ ಮಾತುಕತೆಯನ್ನು ನಡೆಸಲಾಯಿತು.
|