ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಮಾಜಿ ಮಾವೋವಾದಿಯಿಂದ ಬುಷ್ - ಬಾನ್ ಭೇಟಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಾಜಿ ಮಾವೋವಾದಿಯಿಂದ ಬುಷ್ - ಬಾನ್ ಭೇಟಿ
PTI
ಚೀನಾ ಪ್ರಧಾನಿ ಹು ಜಿಂಟಾವೋ ಮತ್ತು ಭಾರತ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರ ಭೇಟಿಯ ನಂತರ, ನೇಪಾಳ ಪ್ರಥಮ ಪ್ರಧಾನಿ ಪ್ರಚಂಡ ಅವರು, ಅಮೆರಿಕ ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಷ್ ಮತ್ತು ವಿಶ್ವಸಂಸ್ಥೆ ಮುಖ್ಯಸ್ಥ ಬಾನ್ ಕಿ ಮೂನ್ ಅವರನ್ನು ಭೇಟಿ ಮಾಡಲಿದ್ದಾರೆ.

ಐದು ದಿನಗಳ ಭಾರತೀಯ ಪ್ರವಾಸದಿಂದ ಹಿಂತಿರುಗಿದ ಪ್ರಚಂಡ 63ನೇ ವಿಶ್ವಸಂಸ್ಥೆ ಪ್ರಧಾನ ಅಸೆಂಬ್ಲಿಯಲ್ಲಿ ಭಾಗವಹಿಸಲು ಶನಿವಾರ ನ್ಯೂಯಾರ್ಕ್‌ಗೆ ತೆರಳಲಿದ್ದಾರೆ.

ಬಡತನ ಮತ್ತು ಆಹಾರ ಕೊರತೆ ಸಮಾವೇಶ ಹಾಗೂ ಅಭಿವೃದ್ಧಿ ಕುರಿತಾದ ಉನ್ನತ ಮಟ್ಟದ ಮಾತುಕತೆಯಲ್ಲಿ ಮಾಜಿ ಗೆರಿಲ್ಲಾ ಹೋರಾಟಗಾರ ಭಾಗವಹಿಸಲಿದ್ದಾರೆ ಎಂದು ಪ್ರಧಾನಮಂತ್ರಿ ಕಚೇರಿ ಮೂಲಗಳು ತಿಳಿಸಿವೆ.

ಬಂಧನಕ್ಕಾಗಿ ಒಂದು ಕಾಲದಲ್ಲಿ ವಿಶ್ವದಾದ್ಯಂತ ಪೊಲೀಸ್ ಕಣ್ಗಾವಲಿನಲ್ಲಿದ್ದ ಪ್ರಚಂಡ, ಬಾನ್ ಮತ್ತು ಬುಷ್ ಅವರಿಂದ ಪ್ರತ್ಯೇಕವಾಗಿ ಆಯೋಜಿಸಲ್ಪಟ್ಟ ಸ್ವಾಗತ ಸಮಾರಂಭದಲ್ಲೂ ಭಾಗವಹಿಸಲಿದ್ದಾರೆ.

ಎರಡು ವರ್ಷಗಳ ಹಿಂದೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕುವುದರ ಹೊರತಾಗಿಯೂ, ಮಾವೋವಾದಿಗಳನ್ನು ಅಮೆರಿಕದಲ್ಲಿ ಈಗಲೂ ಭಯೋತ್ಪಾದನಾ ಸಂಘಟನೆಯೆಂದೇ ಪರಿಗಣಿಸಲಾಗುತ್ತದೆ.

2006ರಲ್ಲಿ ನೇಪಾಳದ ದೊರೆ ಜ್ಞಾನೇಂದ್ರ ಅವರ ಆಡಳಿತವು ಕುಸಿದುಬಿದ್ದ ನಂತರ ಮತ್ತು ಅಮೆರಿಕ ಮಾಜಿ ಅಧ್ಯಕ್ಷ ಜಿಮ್ಮಿ ಕಾರ್ಟರ್ ಮಾಜಿ ಗೆರಿಲ್ಲಾಗಳೊಂದಿಗೆ ಮಾತುಕತೆಗೆ ಕರೆ ನೀಡಿದ ನಂತರ, ಅಮೆರಿಕವು ತನ್ನ ನಿಲುವನ್ನು ಬದಲಾಯಿಸಲು ಪ್ರಾರಂಭಿಸಿತು.

ಗೆರಿಲ್ಲಾ ಪೀಪಲ್ಸ್ ಲಿಬರೇಶನ್ ಆರ್ಮಿಯಿಂದ ಕಳೆದ ವಾರ ಸುಪ್ರೀಂ ಕಮಾಂಡರ್ ಸ್ಥಾನವನ್ನು ತ್ಯಜಿಸಿದ್ದ ಮಾವೋವಾದಿ ಮುಖ್ಯಸ್ಥ, ಬಾನ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆಯನ್ನು ನಡೆಸಲಿದ್ದಾರೆ ಎಂದು ಪ್ರಧಾನಮಂತ್ರಿ ಕಚೇರಿ ಹೇಳಿಕೆಗಳು ತಿಳಿಸಿವೆ.
ಮತ್ತಷ್ಟು
ಕೋಮುಸಾಮರಸ್ಯ ಕಾಪಾಡಲು ಭಾರತಕ್ಕೆ ಅಮೆರಿಕ ಆಗ್ರಹ
ಭಾರತ-ಚೀನಾ ಗಡಿ ವಿವಾದ: ಮೂಡದ ಒಮ್ಮತ
ಪಾಕ್‌ಗೆ ಅಮೆರಿಕದಿಂದ ಆಹಾರ ನೆರವು
ಪಂಜಾಬ್ ಪ್ರಾಂತ್ಯ ಅಸ್ಥಿರತೆ ವಿರುದ್ಧ ಶರೀಫ್ ಎಚ್ಚರಿಕೆ
ಸೆಪ್ಟೆಂಬರ್ ಅಂತ್ಯದೊಳಗೆ 'ಅಣು' ಮೋದನೆ
'ಅಣು ಪರೀಕ್ಷೆ ನಡೆಸಿದರೆ 'ತರಾಟೆ' ಹಕ್ಕು ಅಮೆರಿಕಕ್ಕಿದೆ'