ಇಲ್ಲಿನ ಮಾರ್ರಿಯೊಟ್ ಹೋಟೆಲ್‌ಗೆ ಶನಿವಾರ ರಾತ್ರಿ ಆತ್ಮಹತ್ಯಾ ಕಾರ್ ಬಾಂಬ್ ದಾಳಿ ನಡೆಸಿದ ಪರಿಣಾಮ 17ಮಂದಿ ಬಲಿಯಾಗಿರುವುದಾಗಿ ಡಾನ್ ದೂರದರ್ಶನ ವರದಿ ತಿಳಿಸಿದೆ.
ಸ್ಫೋಟದಿಂದಾಗಿ ಹೋಟೆಲ್ ಸಂಪೂರ್ಣ ಜಖಂಗೊಂಡಿದ್ದು,ಬಳಿಕ ಬೆಂಕಿ ಹೊತ್ತುಕೊಂಡ ಪರಿಣಾಮ ಹೊರಭಾಗದಲ್ಲಿ ನಿಂತಿದ್ದ 12ಕ್ಕೂ ಅಧಿಕ ಕಾರುಗಳು ಸುಟ್ಟು ಭಸ್ಮವಾಗಿದ್ದು,ಕಟ್ಟಡ ನೂರು ಮೀಟರ್‌ಗಳವರೆಗೆ ಹಾನಿಗೊಂಡಿರುವುದಾಗಿ ವರದಿ ಹೇಳಿದೆ.
ಆತ್ಮಹತ್ಯಾ ದಳದ ಬಾಂಬರ್ ಕಾರಿನಲ್ಲಿ ಹೋಟೆಲ್ ಮುಖ್ಯದ್ವಾರದ ಮೂಲಕ ಒಳಪ್ರವೇಶಿಸಿ ಈ ದುಷ್ಕೃತ್ಯ ಎಸಗಿರುವುದಾಗಿ ಪ್ರಾಥಮಿಕ ವರದಿಯಿಂದ ತಿಳಿದು ಬಂದಿದೆ. ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ ಕೆಲವು ಕಿಲೋ ಮೀಟರ್‌ವರೆಗೆ ಅದರ ಶಬ್ದ ಕೇಳಿಸಿತ್ತು.
ಈ ಪ್ರಬಲ ಸ್ಫೋಟದಿಂದ ಹೋಟೆಲ್ ಹೊರಭಾಗದ ಕಾರುಗಳು ಮತ್ತು ಮರಗಳು ಸುಟ್ಟು ಕರಕಲಾಗಿರುವುದಾಗಿ ಪ್ರತ್ಯಕ್ಷದರ್ಶಿಗಳು ಡಾನ್ ದೂರದರ್ಶನಕ್ಕೆ ತಿಳಿಸಿದ್ದಾರೆ.
|