ಇಲ್ಲಿನ ನಗರದ ಕೇಂದ್ರ ಭಾಗದಲ್ಲಿರುವ ಮರಿಯಟ್ ಪಂಚತಾರಾ ಹೊಟೇಲ್ ಮೇಲೆ ಶನಿವಾರ ರಾತ್ರಿ ನಡೆದ ಆತ್ಮಹತ್ಯಾ ಬಾಂಬರ್‌ಗಳು ನಡೆಸಿದ ಭೀಕರ ದಾಳಿಯಲ್ಲಿ ಕನಿಷ್ಠ 60ಮಂದಿ ಬಲಿಯಾಗಿದ್ದು,250ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು,ಈ ಸ್ಫೋಟದಲ್ಲಿ 1 ಸಾವಿರ ಕೆಜಿ ಸ್ಫೋಟಕವನ್ನು ಉಪಯೋಗಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ಘಟನೆಯಲ್ಲಿ ಪಂಚತಾರಾ ಹೊಟೇಲ್ ಭಸ್ಮವಾಗಿದ್ದು, ಬೆಂಕಿ ಹೊತ್ತಿ ಉರಿಯುತ್ತಿರುವ ದೃಶ್ಯ ಬಹಳ ದೂರದ ತನಕ ಕಾಣಿಸುತ್ತಿತ್ತಲ್ಲದೆ, ಸ್ಫೋಟದ ಶಬ್ದ ಕೆಲವು ಕಿ.ಮಿ.ವರೆಗೆ ಕೇಳಿಸಿತ್ತು. ಸ್ಫೋಟದಿಂದ ಸುಮಾರು 30ಅಡಿ ಆಳದ ಕಂದಕ ಏರ್ಪಟ್ಟಿತ್ತು.
ಪಾಕಿಸ್ತಾನದ ಇತಿಹಾಸದಲ್ಲಿ ಸಂಭವಿಸಿದ ಅತ್ಯಂತ ಭೀಕರ ಬಾಂಬ್ ಸ್ಫೋಟಗಳಲ್ಲಿ ಇದೂ ಒಂದಾಗಿದ್ದು, ಈ ಹೊಟೇಲ್‌ನಲ್ಲಿ ವಿದೇಶಿಯರೇ ಹೆಚ್ಚಿನ ಸಂಖ್ಯೆಯಲ್ಲಿ ತಂಗುತ್ತಿದ್ದರು.
|