ನವದೆಹಲಿ: ಇಸ್ಲಾಮಾಬಾದ್‌ನ ಹೋಟೆಲ್ ಒಂದರ ಮೇಲೆ ನಡೆದ ಭಯೋತ್ಪಾದಕರ ಬಾಂಬ್ ದಾಳಿ ಕುರಿತು ಖಂಡಿಸಿ ಪ್ರಧಾನಿ ಮನಮೋಹನ್ ಸಿಂಗ್ ಪಾಕಿಸ್ತಾನದ ಪ್ರಧಾನಿ ಯೂಸಫ್ ರಾಜಾ ಗಿಲಾನಿಯವರಿಗೆ ಪತ್ರ ಬರೆದಿದ್ದಾರೆ. ಸಮಾಜ ಘಾತುಕ ಶಕ್ತಿಗಳು ಈ ಆಕ್ರಮಣದ ಸೂತ್ರಧಾರಿಗಳು, ಪರಸ್ಪರ ಅಭಿವೃದ್ದಿ ಮತ್ತು ಸ್ಥಿರವಾದ ಶಾಂತಿ ಪ್ರಕ್ರಿಯೆಗೆ ಇದು ಮಾರಕ ಎಂಬುದಾಗಿ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
''ಇಂತಹ ಆಕ್ರಮಣಗಳು ಸಮಾಜಘಾತುಕರಿಂದ ನಾವು ಎದುರಿಸುತ್ತಿರುವ ತೊಂದರೆಗಳಿಗೆ ಕೈಗನ್ನಡಿಯಾಗಿದೆ.ಪ್ರಜಾಪ್ರಭುತ್ವದ ತತ್ವ ಹಾಗೂ ವಿವಿದತೆ ಮತ್ತು ಆಧುನಿಕತೆಯ ತತ್ವಗಳಿಗೆ ಇವುಗಳು ಮಾರಕವಾಗಿದೆ'' ಎಂದು ಅವರು ತಿಳಿಸಿದ್ದಾರೆ.
''ಅವರು ನಮ್ಮ ಅಭಿವೃದ್ದಿ, ಶಾಂತಿ ಮತ್ತು ಸ್ಥಿರತೆಯ ಪ್ರಕ್ರಿಯೆಗೆ ಭೀತಿಯೊಡ್ಡುತ್ತಿದ್ದಾರೆ.'' ಎಂದು ಡಾ. ಸಿಂಗ್ ನಿನ್ನೆಯ ಆಕ್ರಮಣದ ಕುರಿತು ತಮ್ಮ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
''ಅಂತಹ ಶಕ್ತಿಗಳು ವಿಜೃಂಬಿಸಲು ನಾವು ಅವಕಾಶ ನೀಡಬಾರದು.'' ಎಂದೂ ಅವರು ಹೇಳಿದ್ದಾರೆ.
|