ಭ್ರಷ್ಟಾಚಾರದ ಕಳಂಕ ಹೊತ್ತಿರುವ ಇಸ್ರೇಲ್ ಪ್ರಧಾನಿ ಎಹೌದ್ ಒಲ್ಮರ್ಟ್ ಅವರು ಇಸ್ರೇಲ್ ಅಧ್ಯಕ್ಷ ಶಿಮನ್ ಪೆರೆಸ್ ಅವರಿಗೆ ಅಧಿಕೃತವಾಗಿ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ.
ಆದರೂ, ನೂತನ ಸರಕಾರ ರಚನೆಯಾಗುವವರೆಗೆ ಒಲ್ಮರ್ಟ್ ತನ್ನ ಕಾರ್ಯನಿರ್ವಹಣೆಯನ್ನು ಮುಂದುವರಿಸಲಿದ್ದಾರೆ. ಪ್ರಧಾನಮಂತ್ರಿ ಇಹೌದ್ ಒಲ್ಮರ್ಟ್ ಅವರು ಭಾನುವಾರ ರಾತ್ರಿ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ ಎಂದು ಪೆರೆಸ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಭ್ರಷ್ಟಾಚಾರ ಆರೋಪವನ್ನು ಎದುರಿಸುತ್ತಿರುವ ಒಲ್ಮರ್ಟ್ ತಾನು ರಾಜೀನಾಮೆ ನೀಡುವುದಾಗಿ ಈ ಮೊದಲು ಸಂಪುಟ ಸಭೆಯಲ್ಲಿ ಹೇಳಿದ್ದರು.
ಆಡಳಿತರೂಢ ಕದೀಮಾ ಪಕ್ಷದ ಉತ್ತರಾಧಿಕಾರಿಯಾಗಿ ವಿದೇಶಾಂಗ ಸಚಿವೆ ಟ್ಜಿಪಿ ಲಿವ್ನಿ ಅವರನ್ನು ಆಯ್ಕೆ ಮಾಡಲಾಗಿದ್ದು, ಟ್ಜಿಪಿ ಲಿವ್ನಿ ಅವರಿಗೆ ಸಮ್ಮಿಶ್ರ ಸರಕಾರ ರಚನೆಗೆ ಎಲ್ಲಾ ಸಹಕಾರ ನೀಡುವುದಾಗಿ ಒಲ್ಮರ್ಟ್ ಇದೇ ವೇಳೆ ತಿಳಿಸಿದ್ದಾರೆ.
|