ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಭಯೋತ್ಪಾದನೆ ನಿರ್ಮೂಲನೆಗೆ ಜರ್ದಾರಿ ಪ್ರತಿಜ್ಞೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಯೋತ್ಪಾದನೆ ನಿರ್ಮೂಲನೆಗೆ ಜರ್ದಾರಿ ಪ್ರತಿಜ್ಞೆ
PTI
ಸುಮಾರು 60 ಜನರ ಸಾವಿಗೆ ಕಾರಣವಾದ ಪಾಕಿಸ್ತಾನದ ಮರಿಯಟ್ ಪಂಚತಾರಾ ಹೋಟೆಲ್‌ನಲ್ಲಿನ ಆತ್ಮಹತ್ಯಾ ಬಾಂಬ್ ದಾಳಿಯ ನಂತರ, ದೇಶದಲ್ಲಿನ ಭಯೋತ್ಪಾದನೆ ಎಂಬ 'ಅನಿಷ್ಟ'ವನ್ನು ತೊಲಗಿಸುವುದಾಗಿ ಪಾಕಿಸ್ತಾನ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಪ್ರತಿಜ್ಞೆ ಮಾಡಿದ್ದಾರೆ.

ಭಯೋತ್ಪಾದನೆಯು ಪಾಕಿಸ್ತಾನದಲ್ಲಿ ಸಾಂಕ್ರಾಮಿಕ ಮತ್ತು ಅನಿಷ್ಟವಾಗಿದ್ದು, ಇದನ್ನು ನಿರ್ಮೂಲನೆ ಮಾಡಲಾಗುವುದು ಎಂದು ವಿಶ್ವಸಂಸ್ಥೆ ಪ್ರಧಾನ ಅಸೆಂಬ್ಲಿಯಲ್ಲಿ ಭಾಗವಹಿಸಲು ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡುತ್ತ ಜರ್ದಾರಿ ತಿಳಿಸಿದ್ದಾರೆ.

ಭಯೋತ್ಪಾದನೆಯನ್ನು ನಾಶಮಾಡುವ ಗುರಿಯನ್ನು ಸರಕಾರ ಹೊಂದಿದ್ದು, ದೇಶದ ವಿರುದ್ಧ ದಾಳಿ ನಡೆಸಲು ಭಯೋತ್ಪಾದಕರು ಪಾಕಿಸ್ತಾನ ನೆಲವನ್ನು ಬಳಸಲು ಸರಕಾರವು ಅನುವು ಮಾಡಿಕೊಡುವುದಿಲ್ಲ ಎಂದು ಸಂಸತ್ ಸದನದಲ್ಲಿ ಜರ್ದಾರಿ ಪ್ರತಿಜ್ಞೆ ಮಾಡಿದ ಕೆಲವೇ ಹೊತ್ತಿನಲ್ಲಿ ಈ ಘಟನೆ ಸಂಭವಿಸಿದೆ.

ಇಂತಹ ದಾಳಿಗಳಿಗೆ ನಾವು ಹೆದರುವುದಿಲ್ಲ. ಪಾಕಿಸ್ತಾನವು ನಿರ್ಭೀತಿಯ ಮತ್ತು ಸ್ಥಿರ ರಾಷ್ಟ್ರವಾಗಿದೆ. ಸಾವೆಂಬುದು ಅಲ್ಲಾನ ಕೈಯಲ್ಲಿದ್ದು, ಸಾವಿಗೆ ಹೆದರಬಾರದು ಎಂದು ಪಾಕಿಸ್ತಾನೀಯರು ನಂಬುತ್ತಾರೆ ಎಂದು ಜರ್ದಾರಿ ಹೇಳಿದ್ದಾರೆ.

ಕಳೆದ ವರ್ಷ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಪತ್ನಿ,ಮಾಜಿ ಪ್ರಧಾನಿಯಾಗಿದ್ದ ಬೆನಜೀರ್ ಭುಟ್ಟೋ ಮೃತಪಟ್ಟ ನಂತರ, ಭಯೋತ್ಪಾದನಾ ಕೃತ್ಯಗಳ ನೋವಿನ ಅನುಭವವು ನನಗಿದೆ ಎಂದು ಜರ್ದಾರಿ ತಿಳಿಸಿದ್ದಾರೆ.
ಮತ್ತಷ್ಟು
ಚೀನಾ ಕಳಪೆ ಹಾಲುಪುಡಿ: 53ಸಾವಿರ ಮಕ್ಕಳು ಅಸ್ವಸ್ಥ
ಇಸ್ರೇಲ್ ಪಿಎಂ ಒಲ್ಮರ್ಟ್ ಅಧಿಕೃತ ರಾಜೀನಾಮೆ
ಇಸ್ಲಾಮಾಬಾದ್ ಸ್ಪೋಟ: ಪ್ರಧಾನಿ ಖಂಡನೆ
ಪಾಕ್:ಸ್ಫೋಟಕ್ಕೆ ಸಾವಿರ ಕೆಜಿ ಸ್ಫೋಟಕ ಬಳಕೆ
ಇಸ್ರೇಲ್ ಪ್ರಧಾನಿ ರಾಜೀನಾಮೆ ಘೋಷಣೆ
ಪಾಕ್:ಆತ್ಯಹತ್ಯಾ ದಾಳಿಗೆ 60 ಬಲಿ