ಶನಿವಾರ ರಾತ್ರಿ ಇಸ್ಲಾಮಾಬಾದಿನ ಮರಿಯಟ್ ಪಂಚತಾರಾ ಹೋಟೆಲಿನಲ್ಲಿನ ಆತ್ಮಹತ್ಯಾ ಬಾಂಬ್ ದಾಳಿಗೆ ಸಂಬಂಧಿಸಿ, ಪಂಜಾಬ್ ಪ್ರಾಂತ್ಯ ಮತ್ತು ಖಾರಿಯನ್ ನಗರದಲ್ಲಿ ಪೊಲೀಸರು ಸೋಮವಾರ ನಡೆಸಿದ ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ರಕ್ಷಣಾ ದಳಗಳು ಮೂರು ಮಂದಿಯನ್ನು ಬಂಧಿಸಿದ್ದಾರೆ.
ಬಂಧಿತರಲ್ಲಿ ಖರಿಯನ್‌ನ ಜಾಮಿಯಾ ಮಸೀದಿಯ ಮುಖ್ಯ ಮೌಲ್ವಿ ಖಾರಿ ಮಹಮ್ಮದ್ ಅಲಿ ಒಬ್ಬರಾಗಿದ್ದಾರೆ.
ಇಬ್ಬರು ಅಮೆರಿಕ ಪ್ರವಾಸಿಗರು ಮತ್ತು ಪಾಕಿಸ್ತಾನದ ಜೆಕ್ ರಾಯಭಾರಿ ಸೇರಿದಂತೆ 53 ಮಂದಿಯ ಸಾವಿಗೆ ಕಾರಣವಾದ ಆತ್ಮಹತ್ಯಾ ಬಾಂಬ್ ಸ್ಫೋಟದ ರೂವಾರಿಗಳನ್ನು ಬಂಧಿಸುವ ನಿಟ್ಟಿನಲ್ಲಿ ರಾಜಧಾನಿ ಸೇರಿದಂತೆ ಅನೇಕ ಕಡೆಗಳಲ್ಲಿ ರಕ್ಷಣಾ ಪಡೆಗಳು ತೀವ್ರ ಕಾರ್ಯಾಚರಣೆಯನ್ನು ನಡೆಸಿತ್ತು.
ರಾಜಧಾನಿಯಲ್ಲೇ ಸುರಕ್ಷಿತವಾದ ಮನೆಯೊಂದರಲ್ಲಿ 600 ಕಿ,ಗ್ರಾಂ ತೂಕದ ಬಾಂಬ್ ನಿರ್ಮಿಸಿರುವ ಸಾಧ್ಯತೆ ಕುರಿತಾಗಿಯೂ ತನಿಖೆ ನಡೆಸಲಾಗುತ್ತಿದೆ
|