ತೆಹ್ರಾನಿನ ಶಂಕಿತ ಪರಮಾಣು ಕಾರ್ಯಕ್ರಮದ ಬಗ್ಗೆ ವಿಶ್ವಸಂಸ್ಥೆ ಪರಮಾಣು ಕಾವಲುಪಡೆ ಸಮಿತಿಯು ನಡೆಸುತ್ತಿರುವ ತನಿಖೆಯಲ್ಲಿನ ಇರಾನಿನ ಸಹಕಾರದ ಕೊರತೆಯ ಬಗ್ಗೆ ಶ್ವೇತಭವನ ಗಂಭೀರ ಕಳವಳ ವ್ಯಕ್ತಪಡಿಸಿದೆ.
ಇರಾನ್ ವಿಶ್ವಸಂಸ್ಥೆ ಕಾವಲು ಪಡೆ ಸಮಿತಿಗೆ ಸೂಕ್ತ ಮಾಹಿತಿಯನ್ನು ನೀಡಬೇಕು ಎಂಬುದಾಗಿ ಐಎಇಎ ಈ ಮೊದಲು ಇರಾನಿಗೆ ಹೇಳಿದ್ದನ್ನೇ ಪುನರುಚ್ಚರಿಸುತ್ತೇವೆ ಎಂದು ಶ್ವೇತಭವನ ವಕ್ತಾರೆ ಡಾನಾ ಪೆರಿನೋ ಸೂಚಿಸಿದ್ದಾರೆ.
ಈ ಹಿಂದಿನ ಪರಮಾಣು ಕಾರ್ಯಗಳ ಕುರಿತಾಗಿ ಮಾಹಿತಿ ನೀಡುವಂತೆ ಐಎಇಎ ಮುಖ್ಯಸ್ಥ ಮಹಮ್ಮದ್ ಎಲ್‌ಬರಡಿ ಇರಾನ್‌ಗೆ ಒತ್ತಾಯಿಸಿದ್ದ ನಂತರ, ಪೆರಿನೋ ಈ ಹೇಳಿಕೆಯನ್ನು ನೀಡಿದ್ದಾರೆ.
ಇರಾನ್‌ನ ಪರಮಾಣು ಕಾರ್ಯಕ್ರಮದ ತನಿಖೆಯನ್ನು ಮುಂದುವರಿಸುವ ಕುರಿತು ನಿರ್ಧರಿಸುವ ಬಗ್ಗೆ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಕಾಂಡೊಲೀಸಾ ರೈಸ್, ಬ್ರಿಟನ್, ರಶ್ಯಾ, ಫ್ರಾನ್ಸ್, ಚೀನಾ ಮತ್ತು ಜರ್ಮನಿ ಸಹೋದ್ಯೋಗಿಗಳನ್ನು ನ್ಯೂಯಾರ್ಕ್‌ನಲ್ಲಿ ಭೇಟಿ ಮಾಡಲಿದ್ದಾರೆ ಎಂದು ಪೆರಿನೋ ತಿಳಿಸಿದ್ದಾರೆ.
|