ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಕೋಮುಗಲಭೆ: ಸಿಂಗ್ ವಿವರಣೆ ಕೇಳಲು ಬುಷ್‌ಗೆ ಒತ್ತಾಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕೋಮುಗಲಭೆ: ಸಿಂಗ್ ವಿವರಣೆ ಕೇಳಲು ಬುಷ್‌ಗೆ ಒತ್ತಾಯ
ಭಾರತದಲ್ಲಿ ಕ್ರೈಸ್ತ ಪಂಗಡಗಳ ಮೇಲೆ ಇತ್ತೀಚಿಗೆ ನಡೆದ ಹಿಂಸಾಚಾರವನ್ನು ಗಮನದಲ್ಲಿಟ್ಟುಕೊಂಡು, ಗುರುವಾರ ನ್ಯೂಯಾರ್ಕ್‌ನಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಭೇಟಿಯ ವೇಳೆ ಭಾರತದಲ್ಲಿನ ಧಾರ್ಮಿಕ ಹಿಂಸಾಚಾರದ ಕುರಿತಾಗಿ ಪ್ರಧಾನಿ ಅವರೊಂದಿಗೆ ಚರ್ಚೆ ನಡೆಸುವಂತೆ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ಅಮೆರಿಕ ಆಯೋಗವು(ಯುಎಸ್‌ಸಿಐಆರ್ಎಫ್) ಅಮೆರಿಕ ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಷ್ ಅವರನ್ನು ಒತ್ತಾಯಿಸಿದೆ.

ಅಲ್ಪಸಂಖ್ಯಾತ ಪಂಗಡಗಳ ಮೇಲಿನ ಹಿಂಸಾಚಾರವನ್ನು ತಡೆಗಟ್ಟುವ ನಿಟ್ಟಿನಲ್ಲಿ ಭಾರತೀಯ ಕೇಂದ್ರ ಸರಕಾರವು ಸೂಕ್ತ ಪ್ರಯತ್ನಗಳನ್ನು ನಡೆಸುವಂತೆ ಭಾರತ ಸರಕಾರಕ್ಕೆ ಅಮೆರಿಕ ಸರಕಾರವು ಒತ್ತಡ ಹೇರಬೇಕೆಂದು ಯುಎಸ್‌ಸಿಐಆರ್ಎಫ್ ಅಧ್ಯಕ್ಷ ಫೆಲಿಸ್ ಗೇರ್ ಬುಷ್ ಅವರಿಗೆ ಸಲ್ಲಿಸಿರುವ ಪತ್ರದಲ್ಲಿ ತಿಳಿಸಿದ್ದಾರೆ.

ವಿಶ್ವದಲ್ಲಿ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಭಾರತವು ಹೊರಹೊಮ್ಮಬೇಕಿದ್ದಲ್ಲಿ, ಧಾರ್ಮಿಕ ಅಲ್ಪಸಂಖ್ಯಾತರ ರಕ್ಷಣೆ ಸೇರಿದಂತೆ ಸಾಮಾನ್ಯ ಮಾನವ ಹಕ್ಕುಗಳ ಹೊಣೆಯನ್ನು ಎತ್ತಿಹಿಡಿಯಲು ತನ್ನ ಸರಕಾರವು ಬದ್ಧವಾಗಿದೆ ಎಂಬುದನ್ನು ಮನಮೋಹನ್ ಸಿಂಗ್ ಸರಕಾರವು ರುಜುವಾತುಪಡಿಸಬೇಕು ಎಂದು ಗೇರ್ ತಿಳಿಸಿದ್ದಾರೆ.

ಒರಿಸ್ಸಾದಲ್ಲಿನ ಕ್ರೈಸ್ತ ಪಂಗಡಗಳ ಮೇಲಿನ ದಾಳಿ ಕುರಿತಂತೆ ಭಾರತೀಯ ಸರಕಾರದ ಪ್ರತಿಕ್ರಿಯೆಯು ಅಸಮರ್ಪಕವಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಏನೇ ಆದರೂ, ಒರಿಸ್ಸಾ ಕೋಮು ಗಲಭೆಯಲ್ಲಿನ ಸಂತ್ರಸ್ತರಿಗೆ ಪರಿಹಾರ ನೀಡುವ ಮನಮೋಹನ್ ಸಿಂಗ್ ಅವರ ವಾಗ್ದಾನವನ್ನು ಬೆಂಬಲಿಸುವುದಾಗಿ ಗೇರ್ ಸ್ಪಷ್ಟಪಡಿಸಿದ್ದಾರೆ.
ಮತ್ತಷ್ಟು
ತನಿಖೆಗೆ ಸಹಕರಿಸಲು ಇರಾನ್‌ಗೆ ಅಮೆರಿಕ ಕರೆ
ಬಾಂಬ್ ದಾಳಿ: ಇಮಾಮ್ ಸಹಿತ ಮೂವರ ಬಂಧನ
ಭಯೋತ್ಪಾದನೆ ನಿರ್ಮೂಲನೆಗೆ ಜರ್ದಾರಿ ಪ್ರತಿಜ್ಞೆ
ಚೀನಾ ಕಳಪೆ ಹಾಲುಪುಡಿ: 53ಸಾವಿರ ಮಕ್ಕಳು ಅಸ್ವಸ್ಥ
ಇಸ್ರೇಲ್ ಪಿಎಂ ಒಲ್ಮರ್ಟ್ ಅಧಿಕೃತ ರಾಜೀನಾಮೆ
ಇಸ್ಲಾಮಾಬಾದ್ ಸ್ಪೋಟ: ಪ್ರಧಾನಿ ಖಂಡನೆ