ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಅಣು ಒಪ್ಪಂದದಿಂದ ಅಮೆರಿಕದಲ್ಲಿ 250,000 ಉದ್ಯೋಗ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಣು ಒಪ್ಪಂದದಿಂದ ಅಮೆರಿಕದಲ್ಲಿ 250,000 ಉದ್ಯೋಗ
PTI
ಭಾರತ ಅಮೆರಿಕ ಪರಮಾಣು ಒಪ್ಪಂದದಿಂದಾಗಿ ಸುಮಾರು 150 ಶತಕೋಟಿ ಡಾಲರ್ ವಹಿವಾಟು ನಡೆಸುವ ಸಂಭಾವ್ಯತೆಯಿದ್ದು, ಇದು 250,000 ಅಮೆರಿಕ ಉದ್ಯೋಗಗಳನ್ನು ಸೃಷ್ಟಿಸುತ್ತದೆ ಎಂದು ಅಮೆರಿಕದ ಕಾಂಗ್ರೆಸ್ ಮಂಡಳಿಯು ಹೇಳಿದ್ದು, ಈ ಮೂಲಕ ಭಾರತ ಮತ್ತು ಅಮೆರಿಕ ನಾಗರಿಕ ಪರಮಾಣು ಒಪ್ಪಂದವನ್ನು ಬೆಂಬಲಿಸಿದೆ.

ಈ ವರ್ಷಾಂತ್ಯದೊಳಗಿನ ಅವಧಿ ಪೂರ್ಣದೊಳಗೆ 123 ಒಪ್ಪಂದ ಕಾರ್ಯಗತಕ್ಕೆ ಅನುಮೋದನೆ ನೀಡುವಂತೆ ಅಮೆರಿಕ ಕಾಂಗ್ರೆಸ್‌ಗೆ ಕರೆ ನೀಡುವುದರೊಂದಿಗೆ, ಈ ಒಪ್ಪಂದವು ಅಮೆರಿಕ ಕಂಪನಿಗಳಿಗೆ ಮಹತ್ತರ ಅವಕಾಶಗಳನ್ನು ನೀಡಲಿದೆ ಎಂದು ವಾಣಿಜ್ಯ ಮಂಡಳಿ ಹೇಳಿದೆ.

ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ಸೆಪ್ಟೆಂಬರ್ 25ರಂದು ಶ್ವೇತಭವನ ಭೇಟಿ ನೀಡುವ ವೇಳೆ ಸಾಧ್ಯವಾಗದಿದ್ದರೂ, ಅಮೆರಿಕ ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಷ್ ಅವರ ಅಧಿಕಾರಾವಧಿ ಅಂತ್ಯದೊಳಗೆ ಒಪ್ಪಂದವನ್ನು ಪೂರ್ಣಗೊಳಿಸುವಲ್ಲಿ ಅಮೆರಿಕ ಕಾಂಗ್ರೆಸ್‌ನ ಅನುಮೋದನೆಯನ್ನು ಪಡೆದುಕೊಳ್ಳಲು ಅಮೆರಿಕ ಆಡಳಿತವೂ ಅಮೆರಿಕ ವಾಣಿಜ್ಯ ಸಮಿತಿಯ ಬೆಂಬಲ ನಿರೀಕ್ಷಿಸಿತ್ತು.

ಆದರೆ, ಅಮೆರಿಕವು ಹಣಕಾಸು ಬಿಕ್ಕಟ್ಟನ್ನು ಎದುರಿಸುತ್ತಿರುವುದರೊಂದಿಗೆ, 700 ಶತಕೋಟಿ ಡಾಲರ್ ಪರಿಹಾರ ಧನವನ್ನು ಬುಷ್ ಪ್ರಸ್ತಾಪಿಸಿರುವುದರೊಂದಿಗೆ, ಮನಮೋಹನ್ ಸಿಂಗ್ ಭೇಟಿಯ ವೇಳೆ ಒಪ್ಪಂದವನ್ನು ಪೂರ್ಣಗೊಳಿಸಲು ಸಾಧ್ಯವಾಗುವುದಿಲ್ಲ.
ಮತ್ತಷ್ಟು
ಕೋಮುಗಲಭೆ: ಸಿಂಗ್ ವಿವರಣೆ ಕೇಳಲು ಬುಷ್‌ಗೆ ಒತ್ತಾಯ
ತನಿಖೆಗೆ ಸಹಕರಿಸಲು ಇರಾನ್‌ಗೆ ಅಮೆರಿಕ ಕರೆ
ಬಾಂಬ್ ದಾಳಿ: ಇಮಾಮ್ ಸಹಿತ ಮೂವರ ಬಂಧನ
ಭಯೋತ್ಪಾದನೆ ನಿರ್ಮೂಲನೆಗೆ ಜರ್ದಾರಿ ಪ್ರತಿಜ್ಞೆ
ಚೀನಾ ಕಳಪೆ ಹಾಲುಪುಡಿ: 53ಸಾವಿರ ಮಕ್ಕಳು ಅಸ್ವಸ್ಥ
ಇಸ್ರೇಲ್ ಪಿಎಂ ಒಲ್ಮರ್ಟ್ ಅಧಿಕೃತ ರಾಜೀನಾಮೆ