ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಪಾಕ್ ಬಾಂಬ್ ದಾಳಿ: ಜವಾಹರಿ ಬಂಟನ ಬಂಧನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಾಕ್ ಬಾಂಬ್ ದಾಳಿ: ಜವಾಹರಿ ಬಂಟನ ಬಂಧನ
ಕಳೆದ ಶನಿವಾರ ಇಸ್ಲಾಮಾಬಾದಿನ ಪಂಚತಾರಾ ಹೋಟೆಲ್ ಮ್ಯಾರಿಯಟ್‌ನಲ್ಲಿನ ಆತ್ಮಹತ್ಯಾ ಬಾಂಬ್ ದಾಳಿಗೆ ಸಂಬಂಧಿಸಿದಂತೆ, ಅಲ್‌ಖೈದಾದ 2ನೇ ವರಿಷ್ಠ ಐಮನ್ ಅಲ್ ಜವಾಹರಿಯ ಬಲಗೈಬಂಟನೊಬ್ಬನನ್ನು ಬಂಧಿಸಿರುವುದಾಗಿ ಪಾಕಿಸ್ತಾನ ಗುಪ್ತಚರ ಸಂಸ್ಥೆಗಳು ತಿಳಿಸಿವೆ.

ಶಂಕಿತ ಉಗ್ರನನ್ನು ಹೆಚ್ಚಿನ ವಿಚಾರಣೆಗಾಗಿ ಇಸ್ಲಾಮಾಬಾದಿಗೆ ಕಳುಹಿಸಲಾಗಿದೆ.

ಜೇಮ್‌ಶೆಡ್ ಎಂಬ ಹೆಸರನ್ನು ಹೇಳಿಕೊಳ್ಳುತ್ತಿದ್ದ ಅಲ್‌ಖೈದಾ ಸದಸ್ಯ ಮುರ್ಸಲೀನ್‌‌ನನ್ನು ಭಾನುವಾರ ಗುಜ್ರಾನ್ವಾಲಾದ ಮಸೀದಿಯೊಂದರಲ್ಲಿ ಬಂಧಿಸಲಾಗಿತ್ತು.

ಮುರ್ಸಲೀನ್ ನಿಷೇಧಿತ ಉಗ್ರಗಾಮಿ ಸಂಘಟನೆ ಲಷ್ಕರ್-ಎ-ಜಾಂಗ್ವಿಯ ಪ್ರಮುಖ ನಾಯಕನಾಗಿದ್ದು, ಈತನನ್ನು ಬಂಧಿಸಿದವರಿಗೆ ಐದು ಕೋಟಿ ಬಹುಮಾನವನ್ನು ಘೋಷಿಸಲಾಗಿತ್ತು ಎಂದು ವರದಿಗಳು ತಿಳಿಸಿವೆ.

ಅಲ್ಲದೆ, ಅಮೆರಿಕ ಫೆಡರಲ್ ತನಿಖಾ ನಿಗಮದ 'ಬೇಕಾದ ವ್ಯಕ್ತಿ'ಗಳ ಪಟ್ಟಿಯಲ್ಲೂ ಮುರ್ಸಲೀನ್ ಹೆಸರಿತ್ತು ಎಂದು ವರದಿಗಳು ಹೇಳಿವೆ.

ರಾವಲ್ಪಿಂಡಿಯಲ್ಲಿ ಪಾಕಿಸ್ತಾನ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರ ಮೇಲಿನ ರಾವಲ್ಪಿಂಡಿಯಲ್ಲಿನ ನಿಶ್ತಾರ್ ಪಾರ್ಕ್‌ನಲ್ಲಿ ದಾಳಿ ಮತ್ತು ಕರಾಚಿಯ ಮೌಲಾನಾ ಹಸನ್ ತುರಾಬಿ ದಾಳಿ ಸೇರಿದಂತೆ ವಿವಿಧ ದಾಳಿಗಳ ಮಾಸ್ಟರ್ ಮೈಂಡ್ ಈತನಾಗಿದ್ದನು ಎಂದು ತಿಳಿದುಬಂದಿದೆ.

ಈ ನಡುವೆ, ಅಶಾಂತ ವಾಯುವ್ಯ ಪಾಕಿಸ್ತಾನದಲ್ಲಿ ರಕ್ಷಣಾ ಪಡೆಗಳು 50ಕ್ಕೂ ಹೆಚ್ಚು ಶಂಕಿತ ಉಗ್ರರ ಹತ್ಯೆಗೈದಿದ್ದಾರೆ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.
ಮತ್ತಷ್ಟು
ಜಿಹಾದ್ ಪ್ರಚಾರಕ್ಕೆ ಮಸೀದಿಗಳ ಬಳಕೆ: ವರದಿ
ಅಣು ಒಪ್ಪಂದದಿಂದ ಅಮೆರಿಕದಲ್ಲಿ 250,000 ಉದ್ಯೋಗ
ಕೋಮುಗಲಭೆ: ಸಿಂಗ್ ವಿವರಣೆ ಕೇಳಲು ಬುಷ್‌ಗೆ ಒತ್ತಾಯ
ತನಿಖೆಗೆ ಸಹಕರಿಸಲು ಇರಾನ್‌ಗೆ ಅಮೆರಿಕ ಕರೆ
ಬಾಂಬ್ ದಾಳಿ: ಇಮಾಮ್ ಸಹಿತ ಮೂವರ ಬಂಧನ
ಭಯೋತ್ಪಾದನೆ ನಿರ್ಮೂಲನೆಗೆ ಜರ್ದಾರಿ ಪ್ರತಿಜ್ಞೆ