ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಫಿನ್‌‌ಲ್ಯಾಂಡ್ ಶಾಲೆಯಲ್ಲಿ ಶೂಟೌಟ್ ‌‌- 9 ಬಲಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಫಿನ್‌‌ಲ್ಯಾಂಡ್ ಶಾಲೆಯಲ್ಲಿ ಶೂಟೌಟ್ ‌‌- 9 ಬಲಿ
ದಕ್ಷಿಣ ಫಿನ್‌ಲ್ಯಾಂಡ್‌ನ ಶಾಲೆಯೊಂದರಲ್ಲಿ ಆಗಂತುಕನೊಬ್ಬ ಏಕಾಏಕಿ ಗುಂಡು ಹಾರಿಸಿದ ಪರಿಣಾಮ 9ವ ಮಂದಿ ಸಾವನ್ನಪ್ಪಿರುವ ಘಟನೆ ಮಂಗಳವಾರ ನಡೆದಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಕೌಹಾಜೋಕಿ ನಗರದಲ್ಲಿರುವ ಕೌಹಾಜೋಕಿ ಹೋಮ್ ಇಕನಾಮಿಕ್ಸ್ ಆಂಡ್ ಕೆಟರಿಂಗ್ ಸ್ಕೂಲ್‌ನಲ್ಲಿ ಈ ಗುಂಡಿನ ದಾಳಿ ನಡೆದಿದ್ದು,ಈ ಸಂದರ್ಭದಲ್ಲಿ 150ವಿದ್ಯಾರ್ಥಿಗಳು ತರಗತಿಯಲ್ಲಿ ಇದ್ದಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಈ ಗುಂಡಿನ ದಾಳಿಯಲ್ಲಿ ಅನೇಕ ಮಂದಿ ಗಾಯಗೊಂಡಿದ್ದು, ಗುಂಡು ಹಾರಿಸಿದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಸ್ಥಳೀಯ ಪೊಲೀಸರ ಹೇಳಿಕೆಯನ್ನು ಮಾಧ್ಯಮಗಳು ಉಲ್ಲೇಖಿಸಿದೆ. ಈತ 20 ವರ್ಷದ ವಿದ್ಯಾರ್ಥಿಯೆಂದು ತಿಳಿದುಬಂದಿದ್ದು, ಆತನಿಗೂ ಗುಂಡು ತಾಗಿದ್ದು, ಗಂಭೀರವಾಗಿ ಗಾಯಗೊಂಡಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ಸ್ಥಳೀಯ ಸಮಯ 11ಕ್ಕೆ 20 ವರ್ಷ ವಯಸ್ಸಿನ ಸುಮಾರು 150 ವಿದ್ಯಾರ್ಥಿಗಳನ್ನೊಳಗೊಂಡ ಶಾಲೆಯಲ್ಲಿ ಗುಂಡುಹಾರಿಸಲು ಪ್ರಾರಂಭಿಸಿದ್ದು, ಕೂಡಲೇ ಪೊಲೀಸರು ಶಾಲೆಯನ್ನು ಸುತ್ತುವರಿದರು ಎಂದು ವರದಿಗಳು ತಿಳಿಸಿವೆ.
ಮತ್ತಷ್ಟು
ಪಾಕ್ ಬಾಂಬ್ ದಾಳಿ: ಜವಾಹರಿ ಬಂಟನ ಬಂಧನ
ಜಿಹಾದ್ ಪ್ರಚಾರಕ್ಕೆ ಮಸೀದಿಗಳ ಬಳಕೆ: ವರದಿ
ಅಣು ಒಪ್ಪಂದದಿಂದ ಅಮೆರಿಕದಲ್ಲಿ 250,000 ಉದ್ಯೋಗ
ಕೋಮುಗಲಭೆ: ಸಿಂಗ್ ವಿವರಣೆ ಕೇಳಲು ಬುಷ್‌ಗೆ ಒತ್ತಾಯ
ತನಿಖೆಗೆ ಸಹಕರಿಸಲು ಇರಾನ್‌ಗೆ ಅಮೆರಿಕ ಕರೆ
ಬಾಂಬ್ ದಾಳಿ: ಇಮಾಮ್ ಸಹಿತ ಮೂವರ ಬಂಧನ