ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಹುಡುಗಿಯರಿಗೆ 9ರಲ್ಲೇ ವಿವಾಹ: ಫತ್ವಾ!
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹುಡುಗಿಯರಿಗೆ 9ರಲ್ಲೇ ವಿವಾಹ: ಫತ್ವಾ!
ಬಾಲಕಿಯರು ಒಂಬತ್ತು ವರ್ಷದವರಿರುವಾಗಲೇ ಮದುವೆಯಾಗಬಹುದು ಎಂದು ಮುಸ್ಲಿಂ ಧಾರ್ಮಿಕ ಮುಖಂಡರು ಹೊರಡಿಸಿದ್ದ ಫತ್ವಾಕ್ಕೆ ಮೊರೊಕ್ಕೊದ ಇಸ್ಲಾಮಿಕ್ ಬುದ್ಧಿಜೀವಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಈ ತಿಂಗಳಾರಂಭದಲ್ಲಿ ಮುಸ್ಲಿಂ ಧಾರ್ಮಿಕ ಮುಖಂಡ ಶೇಖ್ ಮೊಹಮ್ಮದ್ ಬೆನ್ ಅಬ್ದುರ್‌ರೆಹ್ಮಾನ್ ಅಲ್- ಮಘರೊಯಿ ಈ ಕುರಿತು ಫತ್ವಾ ಹೇಳಿಕೆ ಹೊರಡಿಸಿದ್ದು, ಒಂಬತ್ತು ವರ್ಷದ ಬಾಲಕಿಯರು ಮದುವೆಗೆ ಯೋಗ್ಯರು ಎಂದು ಸಾರಲು ಧರ್ಮವನ್ನು ಬಳಸಿಕೊಳ್ಳುವುದನ್ನು ಖಂಡನೀಯ ಎಂದು ಮೊರೊಕ್ಕೊದ ಉನ್ನತ ಮಟ್ಟದ ಉಲೇಮಾಗಳ ಸಮಿತಿ ಅಭಿಪ್ರಾಯಪಟ್ಟಿದೆ.

ಪ್ರವಾದಿ ಮೊಹಮ್ಮದ್‌ನ ಇಬ್ಬರು ಪತ್ನಿಯರಲ್ಲಿ ಒಬ್ಬಳು ಒಂಬತ್ತು ವರ್ಷದವಳಿದ್ದಾಗ ಮದುವೆಯಾಗಿದ್ದರಿಂದ, ಒಂಬತ್ತು ವರ್ಷದ ಬಾಲಕಿಯನ್ನು ಮದುವೆ ಮಾಡಿಕೊಳ್ಳುವುದಕ್ಕೆ ಇಸ್ಲಾಂ ಸಮ್ಮತಿಸುತ್ತದೆ ಎಂದು ತಿಂಗಳ ಆರಂಭದಲ್ಲಿ ಮಘರೊಯಿ ಹೇಳಿಕೆ ನೀಡಿದ್ದರು. ಇದೀಗ ತಮ್ಮ ಹೇಳಿಕೆಯನ್ನು ಖಂಡಿಸುತ್ತಿರುವುದು ಇಸ್ಲಾಮಿಕ್ ಹಾಗೂ ಅದರ ಸಿದ್ಧಾಂತಗಳ ಮೇಲೆ ಜಾತ್ಯತೀತ ಶಕ್ತಿಗಳು ನಡೆಸುತ್ತಿರುವ ದಾಳಿ ಎಂದು ಅವರು ಕಿಡಿಕಾರಿದ್ದಾರೆ.

ಶೇಖ್ ಮಘರೊಯಿ ಒಬ್ಬ ಬಂಡುಕೋರ ಹಾಗೂ ಮಂಕುಬೂದಿ ಎರಚುವ ವ್ಯಕ್ತಿ ಎಂದು ಮೊರೊಕ್ಕೊ ರಾಜ ಆರನೇ ಮೊಹಮ್ಮದ್ ಅವರ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಮೌಲ್ವಿಗಳ ಸಭೆಯು ಬಣ್ಣಿಸಿದೆ.

ರಾಬತ್ ಮೂಲದ ವಕೀಲರಾದ ಮೌರಾದ್ ಬೆಕ್ಕೌರಿ, ಶೇಖ್ ಮೊಘರೊಯಿ ಹಾಗೂ ಅವರ ಫತ್ವಾದ ಬಗ್ಗೆ ದೂರನ್ನೂ ದಾಖಲಿಸಿದ್ದು, ಇಂತಹ ಫತ್ವಾಗಳಿಂದ ಮಕ್ಕಳ ಹಕ್ಕುಗಳನ್ನು ಹಾಳುಮಾಡುವುದಲ್ಲದೆ ಅತ್ಯಾಚಾರದ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ.
ಮತ್ತಷ್ಟು
ಫಿನ್‌‌ಲ್ಯಾಂಡ್ ಶಾಲೆಯಲ್ಲಿ ಶೂಟೌಟ್ ‌‌- 9 ಬಲಿ
ಪಾಕ್ ಬಾಂಬ್ ದಾಳಿ: ಜವಾಹರಿ ಬಂಟನ ಬಂಧನ
ಜಿಹಾದ್ ಪ್ರಚಾರಕ್ಕೆ ಮಸೀದಿಗಳ ಬಳಕೆ: ವರದಿ
ಅಣು ಒಪ್ಪಂದದಿಂದ ಅಮೆರಿಕದಲ್ಲಿ 250,000 ಉದ್ಯೋಗ
ಕೋಮುಗಲಭೆ: ಸಿಂಗ್ ವಿವರಣೆ ಕೇಳಲು ಬುಷ್‌ಗೆ ಒತ್ತಾಯ
ತನಿಖೆಗೆ ಸಹಕರಿಸಲು ಇರಾನ್‌ಗೆ ಅಮೆರಿಕ ಕರೆ